iPhone 14 ಬೆಲೆ ಭಾರೀ ಇಳಿಕೆ! 11,500ಕ್ಕಿಂತ ಹೆಚ್ಚು ಡಿಸ್ಕೌಂಟ್; ಈ ಆಫರ್ ಮತ್ತೆಂದೂ ಬರಲ್ಲ!
ಐಫೋನ್ ಫೋನ್ ಖರೀದಿಸುವ ಆಸೆಯೇ..? ಇಲ್ಲಿದೆ ಖುಷಿ ಸುದ್ದಿ! ಈ ಐಫೋನ್ ಬೆಲೆ ಭಾರೀ ಇಳಿಕೆಯಾಗಿದೆ. ಹೌದು, ಪ್ರಸಿದ್ಧ ಟೆಕ್ ಬ್ರ್ಯಾಂಡ್ ಆ್ಯಪಲ್‌ನ (Apple) ಐಫೋನ್ 14 (iPhone 14) ಪ್ರಸ್ತುತ ಅಗ್ಗದ ಬೆಲೆಯಲ್ಲಿ ಲಭ್ಯವಿದೆ. ಆಪಲ್ ತನ್ನ ಗ್ರಾಹಕರನ್ನು ಸೆಳೆಯಲು ಆಗಾಗ್ಗೆ ಆಫರ್‌ಗಳನ್ನು ಘೋಷಿಸುತ್ತದೆ. ಈಗಂತೂ ಅಂಥದ್ದೊಂದು ಆಫರ್ ಬಂದಿದೆ. ಈ ಬಾರಿ, ಐಫೋನ್ 14 ಖರೀದಿ ಮೇಲೆ 11,500 ರೂ. ಗಿಂತ ಹೆಚ್ಚು ಡಿಸ್ಕೌಂಟ್ ಲಭ್ಯವಿದೆ. ಇದರೊಂದಿಗೆ ನಿಮಗೆ ಕಡಿಮೆ ಬೆಲೆಗೆ ಐಫೋನ್ 14 ಸಿಗಲಿದೆ.
ಐಫೋನ್ 14 ಸ್ಮಾರ್ಟ್‌ಫೋನ್ 2023 ರಲ್ಲಿ ಬಿಡುಗಡೆಯಾಯಿತು. ಪ್ರಸ್ತುತ ಆ್ಯಪಲ್ ಇತ್ತೀಚಿನ ಸರಣಿಯ ಐಫೋನ್ 15 (iPhone 15) ಮಾರುಕಟ್ಟೆಯಲ್ಲಿ ಲಭ್ಯವಿದೆ. ಐಫೋನ್ 14 ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಆದರೆ, ಕಾರ್ಯಕ್ಷಮತೆ, ಕ್ಯಾಮೆರಾ ಮತ್ತು ಬ್ಯಾಟರಿ ವಿಷಯದಲ್ಲಿ ಈ ಫೋನ್ ಕಡಿಮೆಯೇನಲ್ಲ. ಮತ್ತೊಂದೆಡೆ, ಐಫೋನ್ 15 ಸಹ ಪ್ರಮುಖ ನವೀಕರಣಗಳೊಂದಿಗೆ ಬರುವುದಿಲ್ಲ. ಆದ್ದರಿಂದ, ನೀವು ಐಫೋನ್ 14 ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು. ಈ ಕುರಿತ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.

ಐಫೋನ್ 14 ಡಿಸ್ಕೌಂಟ್, ಆಫರ್‌ಗಳು
ಆ್ಯಪಲ್ ಕಂಪನಿಯ ಐಫೋನ್ 14 (iPhone 14) ಪ್ರಸ್ತುತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ 57,999 ರೂ.ಗೆ ಲಭ್ಯವಿದೆ. ಈ ಫೋನಿನಲ್ಲಿ ಶೇ.16 ರಷ್ಟು ಡಿಸ್ಕೌಂಟ್ ಆಫರ್ ಇದೆ. ಅಂದರೆ, ನೀವು 11,601 ರೂ.ಗಳ ವರೆಗೆ ಪ್ರಯೋಜನವನ್ನು ಪಡೆಯಬಹುದು. ಈ ಡಿಸ್ಕೌಂಟ್ ಬೆಲೆಯು 128GB ಮೆಮೊರಿ ರೂಪಾಂತರಕ್ಕೆ ಅನ್ವಯಿಸುತ್ತದೆ.
ಆ್ಯಪಲ್ ವೆಬ್‌ಸೈಟ್‌ನಲ್ಲಿ 69,600 ರೂ.!
ಫ್ಲಿಪ್‌ಕಾರ್ಟ್ ಬ್ಯಾಂಕ್ ಆಫರ್ ಬಗ್ಗೆ ಹೇಳುವುದಾದರೆ, ಶೇ.5 ರಷ್ಟು ರಿಯಾಯಿತಿ ಇದೆ. Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಬ್ಯಾಂಕ್ ಆಫರ್‌ಗಳು ಮತ್ತು ಡಿಸ್ಕೌಂಟ್‌ಗಳ ಜೊತೆಗೆ, ನಿಮ್ಮ ಹಳೆಯ ಫೋನನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಮತ್ತು 50,000 ರೂ. ಗಿಂತ ಹೆಚ್ಚಿನ ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದು. ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿ, ನಿಮಗೆ ಬೋನಸ್ ನೀಡಲಾಗುತ್ತದೆ.
ನೀವು ಐಫೋನ್ 14 ಸ್ಮಾರ್ಟ್‌ಫೋನನ್ನು ಕೆಂಪು, ನೀಲಿ, ಮಿಡ್‌ನೈಟ್, ನೇರಳೆ, ಸ್ಟೆರೈಲ್ ಮತ್ತು ಹಳದಿ ಬಣ್ಣಗಳಲ್ಲಿ ಖರೀದಿಸಬಹುದು. ಐಫೋನ್ 14 256GB ಮಾದರಿಯು ಪ್ರಸ್ತುತ 67,999 ರೂ.ಗಳಲ್ಲಿ ಶೇ.14 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿದೆ. 512GB ಸ್ಟೋರೇಜ್ ರೂಪಾಂತರವು ಶೇ.19 ರಷ್ಟು ರಿಯಾಯಿತಿಯೊಂದಿಗೆ 79,999 ರೂ.ಗಳಲ್ಲಿ ಲಭ್ಯವಿದೆ.
ಐಫೋನ್ 14 ಫೀಚರ್ಸ್
ಡಿಸ್ಲ್ಪೇ: ಐಫೋನ್ 14 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಲ್ಪೇಯನ್ನು ಹೊಂದಿದೆ. ಇದು 60 Hz ರಿಫ್ರೆಶ್ ರೇಟ್, HDR, 1200nits ಗರಿಷ್ಠ ಬ್ರೈಟ್‌ನೆಸ್, ಫೇಸ್ ಐಡಿ ಸಂವೇದಕವನ್ನು ಹೊಂದಿದೆ.
ಪ್ರೊಸೆಸರ್: ಐಫೋನ್ 14 ಸ್ಮಾರ್ಟ್‌ಫೋನ್‌ನಲ್ಲಿ A15 ಬಯೋನಿಕ್ ಪ್ರೊಸೆಸರ್ ಅನ್ನು ಅಳಡಿಸಲಾಗಿದೆ. ಈ ಫೋನ್ 4GB RAM ಮತ್ತು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ.
ಕ್ಯಾಮೆರಾ: ಐಫೋನ್ 14 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 12MP ವೈಡ್-ಆಂಗಲ್ ಪ್ರೈಮರಿ OIS ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಐಫೋನ್ 14 ಫೋನ್ 3279mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು IP68 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿದೆ.
ಸಾಫ್ಟ್‌ವೇರ್: ಐಫೋನ್ 14 ಸ್ಮಾರ್ಟ್‌ಫೋನ್ iOS 17 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, Wi-Fi, ಡ್ಯುಯಲ್ ಸಿಮ್, ಬ್ಲೂಟೂತ್, GPS ಮತ್ತು ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ.


Click it and Unblock the Notifications








