ಮುಗಿಬಿದ್ದ ಗ್ರಾಹಕರು..! ಬರೋಬ್ಬರಿ 18,500 ಇಳಿಕೆ.. ಅಗ್ಗದ ಬೆಲೆಗೆ iPhone 15 ಲಭ್ಯ.. ಹೊಸ ಬೆಲೆ ಎಷ್ಟು?
ಇತ್ತೀಚಿನ ದಿನಗಳಲ್ಲಿ ಐಫೋನ್ ಕ್ರೇಜ್ ಹೆಚ್ಚಿದೆ. ಎಲ್ಲರಿಗೂ ಐಫೋನ್ ಖರೀದಿಸುವ ಬಯಕೆ ಇರುತ್ತದೆ. ನಿಮಗೂ ಸಹ ಹೊಸ ಐಫೋನ್ ಖರೀದಿಸುವ ಆಸೆ ಇದೆಯೇ? ಅದರಲ್ಲೂ ಆಫರ್ ಅಥವಾ ರಿಯಾಯಿತಿಗಾಗಿ ಕಾಯುತ್ತಿದ್ದರೆ, ನಿಮಗಾಗಿ ಒಂದು ಒಳ್ಳೆಯ ಅವಕಾಶ ಬಂದಿದೆ. 2023 ರಲ್ಲಿ ಬಿಡುಗಡೆಯಾದ ಐಫೋನ್‌ಗಳ ಮೇಲೆ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಹೌದು, ಜನ ಮೆಚ್ಚಿದ ಐಫೋನ್ 15 (iPhone 15) ದರ ಕಡಿತಗೊಳಿಸಲಾಗಿದೆ. ಪ್ರಸ್ತುತ, ಈ ಫೋನ್ ಬಿಡುಗಡೆ ಬೆಲೆಗಿಂತ 18,500 ರೂ. ಅಗ್ಗವಾಗಿ ಮಾರಾಟವಾಗುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಐಫೋನ್ 15 ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಬರುತ್ತದೆ. ನೀವು ಮೂರು ಸ್ಟೋರೇಜ್ ಆಯ್ಜೆಗಳಲ್ಲಿ ಖರೀದಿಸಬಹುದು. ಈ ಐಫೋನಿನ ವಿಶೇಷತೆಗಳೆಂದರೆ, ಇದು A16 ಬಯೋನಿಕ್ ಪ್ರೊಸೆಸರ್ ಅನ್ನ ಹೊಂದಿದೆ. ಈ ಮೊಬೈಲ್ 6.1 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಒಳಗೊಂಡಿದೆ. ಇದರಲ್ಲಿ 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ ಮತ್ತು 512GB ಆಂತರಿಕ ಸ್ಟೋರೇಜ್ ಲಭ್ಯವಿದೆ. ಈ ಐಫೋನ್ ಅನ್ನು ಅಗ್ಗದ ಬೆಲೆಗೆ ಎಲ್ಲಿ ಮತ್ತು ಹೇಗೆ ಖರೀದಿಸಬಹುದು? ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಐಫೋನ್ 15 ಬೆಲೆಯಲ್ಲಿ ಭಾರೀ ಇಳಿಕೆ
ಐಫೋನ್ 15 ಫೋನಿನ 128GB ಸ್ಟೋರೇಜ್ ರೂಪಾಂತರವನ್ನು ಭಾರತದಲ್ಲಿ 79,990 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಐಫೋನ್ ಅನ್ನು ಅಮೆಜಾನ್ ಇಂಡಿಯಾದಲ್ಲಿ 61,400 ರೂ.ಗಳಿಗೆ ಖರೀದಿಸಬಹುದು. ಅಂದರೆ, ಇದು 18,500 ರೂ.ಗಳ ನೇರ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಜೊತೆಗೆ ಈ ಐಫೋನ್ ಖರೀದಿ ಮೇಲೆ 52,200 ರೂ. ಎಕ್ಸ್‌ಚೇಂಜ್ ಡಿಸ್ಕೌಂಟ್ ಸಹ ಲಭ್ಯವಿದೆ. ಇದು ನೀವು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಐಫೋನ್ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ ಐಫೋನ್ 15 ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಐಫೋನ್ 15 ವೈಶಿಷ್ಟ್ಯಗಳು
ಐಫೋನ್ 15 ಡಿಸ್ಪ್ಲೇ
ಐಫೋನ್ 15 ಸ್ಮಾರ್ಟ್‌ಫೋನ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಸಪೋರ್ಟ್ ಪಡೆದಿದೆ. ಈ ಫೋನ್ ಪಿಲ್ ಶೇಪ್ ಮಾದರಿ (ಮಾತ್ರೆ ಮಾದರಿಯ) ಪಂಚ್ ಹೋಲ್ ರಚನೆಯನ್ನು ಹೊಂದಿದೆ. ಹಾಗೆಯೇ ಫೇಸ್‌ಟೈಮ್ ಕ್ಯಾಮೆರಾ ಮತ್ತು ಫೇಸ್‌ಐಡಿ ಸೌಲಭ್ಯ ಒಳಗೊಂಡಿದೆ.
ಐಫೋನ್ 15 ಪ್ರೊಸೆಸರ್
ಐಫೋನ್ 15 ಫೋನ್ A16 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಇದಕ್ಕೆ ಪೂರಕವಾಗಿ ಈ ಐಫೋನ್ ios 16 ಓಎಸ್ ಸಪೋರ್ಟ್ ಸಹ ಪಡೆದಿದೆ. ಈ ಮೊಬೈಲ್ 128GB, 256GB ಮತ್ತು 512GB ಆಂತರಿಕ ಸ್ಟೋರೇಜ್ ರೂಪಾಂತರಗಳನ್ನು ಸಹ ಒಳಗೊಂಡಿದೆ.
ಐಫೋನ್ 15 ಕ್ಯಾಮೆರಾ
ಐಫೋನ್ 15 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಈ ಫೋನಿನಲ್ಲಿ ಮೊದಲ ಕ್ಯಾಮೆರಾವು 48 ಮೆಗಾಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದು ಮಂದ ಬೆಳಕಿನಲ್ಲಿಯೂ ಉತ್ತಮ ಫೋಟೋ ಸೆರೆಹಿಡಿಯಲು ಸಹಾಯ ಮಾಡಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 12 ಮೆಗಾಪಿಕ್ಸಲ್ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 12 ಮೆಗಾಪಿಕ್ಸಲ್ ಫ್ರಂಟ್ ಕ್ಯಾಮೆರಾ ಸಹ ಲಭ್ಯವಿದೆ.
ಐಫೋನ್ 15 ಬ್ಯಾಟರಿ
ಐಫೋನ್ 15 ಫೋನ್ ತನ್ನ ಈ ಹಿಂದಿನ ಸರಣಿಗಿಂತ ಶಕ್ತಿಶಾಲಿ ಬ್ಯಾಟರಿ ಒಳಗೊಂಡಿದೆ. ಇದು ಐಫೋನ್ ಪ್ರಿಯರ ಗಮನ ಸೆಳೆದಿದೆ. ಇದು ಡೈನಾಮಿಕ್ ಐಲ್ಯಾಂಡ್ (Dynamic Island) ಆಯ್ಕೆ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು 5G ಸಪೋರ್ಟ್, ವೈರ್‌ಲೆಸ್ ಸೌಲಭ್ಯ ಮತ್ತು ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಲಭ್ಯವಿದೆ.


Click it and Unblock the Notifications








