Home
ಸುದ್ದಿಜಾಲ

ಐಫೋನ್‌ 15 vs 13 vs 14 ನಲ್ಲಿ ಯಾವುದು ಬೆಸ್ಟ್‌? ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಯಾವುದಕ್ಕೆ ಎಷ್ಟು ಆಫರ್?

ಐಫೋನ್‌ಗಳಿಗೆ (apple iphone) ಭರ್ಜರಿ ಬೇಡಿಕೆ ಇರುವ ಬಗ್ಗೆ ಪ್ರತ್ಯೇಕವಾಗಿ ಏನೂ ಹೇಳಬೇಕಿಲ್ಲ. ಅದರಲ್ಲೂ ಐಫೋನ್‌ 15 ಸರಣಿ (iphone 15) ಫೋನ್‌ಗಳು ಇನ್ನೂ ಜನರ ಕೈ ಸೇರುವ ಮುನ್ನವೇ ಐಫೋನ್‌ನ ಮುಂದಿನ ಸರಣಿ ಫೋನ್‌ಗಳ ಮಾಹಿತಿ ಲೀಕ್‌ ಆಗುತ್ತಿದೆ. ಆದರೂ ಸಹ ಈ ನಡುವೆ ಐಫೋನ್ 15, ಐಫೋನ್ 13, ಐಫೋನ್ 14 ಸರಣಿ ಫೋನ್‌ಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಹೌದು, ಇದೀಗ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌(amazon and flipkart) ವಿಶೇಷ ಸೇಲ್‌ ಆಯೋಜನೆ ಮಾಡಿವೆ. ಇದರಲ್ಲಿ ಐಫೋನ್‌ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ನಿರೀಕ್ಷೆ ಮಾಡಿರದ ರೀತಿಯಲ್ಲಿ ಆಫರ್‌ ನೀಡಲಾಗಿದೆ. ಈ ವೇಳೆ ಐಫೋನ್ 15, ಐಫೋನ್ 13 ಹಾಗೂ ಐಫೋನ್ 14 (iPhone 15, iPhone 13, iPhone 14) ಸರಣಿಯಲ್ಲಿ ಯಾವುದು ಉತ್ತಮ ಎಂಬ ಗೊಂದಲ ನಿಮ್ಮಲ್ಲಿದ್ದರೆ ಇಲ್ಲಿದೆ ನೋಡಿ ಪರಿಹಾರ. ಈ ಮೂಲಕ ನಿಮ್ಮ ನೆಚ್ಚಿನ ಐಫೋನ್‌ ಖರೀದಿ ಮಾಡಿ

ಐಫೋನ್‌ 15 vs 13 vs 14 ನಲ್ಲಿ ಯಾವುದು ಬೆಸ್ಟ್‌?...

ಯಾವ ಐಫೋನ್‌ ಬೆಸ್ಟ್‌?: ಐಫೋನ್‌ 15 vs ಐಫೋನ್‌ 13 vs ಐಫೋನ್‌ 14 ಗಳ ನಡುವೆ ಅಮೆಜಾನ್‌ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿನ ಮಾರಾಟದ ಸಮಯದಲ್ಲಿ ಯಾವುದನ್ನು ಖರೀದಿಸಬೇಕು ಎಂಬ ಆಲೋಚನೆ ಹಲವರಲ್ಲಿ ಮನೆ ಮಾಡಿದೆ. ಐಫೋನ್ 13 ಮತ್ತು ಐಫೋನ್ 14 ಪ್ರಸ್ತುತ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಇದರೊಂದಿಗೆ ಭಾರತದಲ್ಲಿ ಐಫೋನ್ 15 ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಐಫೋನ್‌ 15, 13, 14 ಸರಣಿ ಬೆಲೆಗಳು: ಮೊದಲು ಈ ಫೋನ್‌ಗಳ ಬೆಲೆ ವಿವರಗಳನ್ನು ಗಮನಿಸೋಣ. ಅದರಂತೆ ಐಫೋನ್‌ 15 ನ 128GB ಸ್ಟೋರೇಜ್ ಮಾದರಿಗೆ 69,900 ರೂಗಳ ಆರಂಭಿಕ ಬೆಲೆ ಇದ್ದು, ಹೊಸ ಐಫೋನ್‌ನಲ್ಲಿ 6,000ರೂ. ಹೆಚ್‌ಡಿಎಫ್‌ಸಿ ಬ್ಯಾಂಕ್ ರಿಯಾಯಿತಿ ಕೊಡುಗೆಯೂ ಇದೆ. ಇದನ್ನು ಆಪಲ್‌ ಸ್ಟೋರ್‌ಗಳ ಮೂಲಕ ಕ್ಲೈಮ್ ಮಾಡಬಹುದು.

ಐಫೋನ್ 13 ಪ್ರಸ್ತುತ ಅಮೆಜಾನ್‌ನಲ್ಲಿ 48,999 ರೂ. ಬೆಲೆಯೊಂದಿಗೆ ಕಾಣಿಸಿಕೊಂಡಿದೆ. ಮತ್ತೊಂದೆಡೆ, ಆಪಲ್ ಇದೇ ಐಫೋನ್ ಅನ್ನು 59,900 ರೂ.ಗೆ ನೀಡುತ್ತಿದೆ. ಐಫೋನ್ 14 ಫ್ಲಿಪ್‌ಕಾರ್ಟ್‌ನಲ್ಲಿ 56,999 ರೂ.ಗೆ ಸೇಲ್‌ ಆಗುತ್ತಿದ್ದು, ಇದರ ಮೂಲ ಬೆಲೆ 69,900 ರೂ.ಗಳಾಗಿದೆ. ಎರಡೂ ಮಾದರಿಗಳು 128GB ಸ್ಟೋರೇಜ್‌ನ ವೇರಿಯಂಟ್‌ನವಾಗಿದ್ದು, ನೀವು ಎರಡೂ ಐಫೋನ್‌ಗಳಲ್ಲಿ ದೊಡ್ಡ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.

ಈ ಸಮಯದಲ್ಲಿ ಖರೀದಿಗೆ ಯಾವುದು ಬೆಸ್ಟ್‌?: ಐಫೋನ್‌ 13 ಮತ್ತು ಐಫೋನ್‌ 15 ನಡುವೆ ಪ್ರಮುಖ ವ್ಯತ್ಯಾಸಗಳಿವೆ. ಆದರೆ, ಐಫೋನ್‌ 14 ಕಾರ್ಯಕ್ಷಮತೆಯ ವಿಷಯದಲ್ಲಿ ಐಫೋನ್‌ 13 ನಂತೆಯೇ ಇದೆ. ಹೆಚ್ಚಾಗಿ ಒಂದೇ ರೀತಿಯ ಫೀಚರ್ಸ್‌ ಅನ್ನು ಕಾಣಬಹುದು. ಆದ್ದರಿಂದ ನೀವು ಈ ವೇಳೆ ಐಫೋನ್‌ ಖರೀದಿ ಮಾಡಲು ಮುಂದಾಗಿದ್ದರೆ ಐಫೋನ್ 13 ಹಾಗೂ ಐಫೋನ್‌15 ಸರಣಿ ಫೋನ್‌ಗಳನ್ನು ಆಯ್ಕೆ ಮಾಡಬಹುದು. ಎರಡೂ ಐಫೋನ್‌ಗಳು ಅವುಗಳ ಬೆಲೆಯಲ್ಲಿ ಉತ್ತಮವಾಗಿವೆ.

ಐಫೋನ್ 15 ಅನೇಕ ವಿಧಗಳಲ್ಲಿ ಐಫೋನ್‌ 13 ಗಿಂತ ಉತ್ತಮವಾಗಿದೆ. ಇದು 4K ಸಿನೆಮ್ಯಾಟಿಕ್ ಮೋಡ್‌ಗೆ ಬೆಂಬಲದೊಂದಿಗೆ ಹೊಸ 48 ಮೆಗಾಪಿಕ್ಸೆಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ A16 ಚಿಪ್‌ಸೆಟ್ ಆಯ್ಕೆ ಇದ್ದು, ಈಗ USB-C ಪೋರ್ಟ್ ಜೊತೆಗೆ ಹೊಸ ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಸಹ ಈ ಫೋನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಅಷ್ಟೇ ಅಲ್ಲದೆ ಐಫೋನ್ 15 ಸರಣಿ ಇನ್ನಷ್ಟು ಪ್ರಕಾಶಮಾನವಾದ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಆಪಲ್ ಬಳಕೆದಾರರು ಒಂದು ದಿನದ ಬ್ಯಾಟರಿ ಅವಧಿಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ, ಬ್ಯಾಟರಿ ವಿಚಾರದಲ್ಲಿ ಐಫೋನ್ 13 ಒಂದು ದಿನದ ಬ್ಯಾಕಪ್‌ ನೀಡುವುದಿಲ್ಲ. ಬಳಕೆಗೆ ಅನುಗುಣವಾಗಿ ಫೋನ್ ಅನ್ನು ಒಮ್ಮೆ ಅಥವಾ ಎರಡು ಬಾರಿ ಚಾರ್ಜ್ ಮಾಡಬೇಕಾಗುತ್ತದೆ.

ಐಫೋನ್‌ 15 vs 13 vs 14 ನಲ್ಲಿ ಯಾವುದು ಬೆಸ್ಟ್‌?...

ಆಪಲ್‌ನ ಹೊಸ ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಅನ್ನು ಐಫೋನ್ 15 ಮಾದರಿಯಲ್ಲಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಎರಡೂ ಫೋನ್‌ಗಳು ವೈರ್‌ಲೆಸ್ ಚಾರ್ಜಿಂಗ್, ಸ್ಟಿರಿಯೊ ಸ್ಪೀಕರ್‌ಗಳು ಮತ್ತು IP68 ರೇಟಿಂಗ್‌ಗೆ ಬೆಂಬಲವನ್ನು ಹೊಂದಿವೆ. ಐಫೋನ್‌ 15 ಬೆಲೆ ಕೊಂಚ ಹೆಚ್ಚು ಎಂದು ತೋಚಿದರೆ ನೀವು ಐಫೋನ 13 ಕಡೆ ಮುಖ ಮಾಡಬಹುದು. ಈ ಫೋನ್ ಉತ್ತಮ ಕಾರ್ಯಕ್ಷಮತೆ ನೀಡಲಿದ್ದು, ಇನ್ನೂ ಕೆಲವು ವರ್ಷಗಳವರೆಗೆ ಸಾಫ್ಟ್‌ವೇರ್ ನವೀಕರಣಗಳನ್ನು ಪಡೆದಿದೆ.

ಅದಾಗ್ಯೂ ಐಫೋನ್‌ ಖರೀದಿ ಮಾಡುವವರು ಹಲವಾರು ಆಲೋಚನೆಗಳೊಂದಿಗೆ ಖರೀದಿ ಮಾಡುವುದು ಉಂಟು. ಅಂದರೆ ಕೆಲವರು ಪ್ರತಿಷ್ಟೆಗಾಗಿ ಖರೀದಿ ಮಾಡಿದರೆ ಇನ್ನೂ ಕೆಲವರು ಉತ್ತಮ ಕಾರ್ಯಕ್ಷಮತೆ ಹಾಗೂ ಕ್ಯಾಮೆರಾ ಫೀಚರ್ಸ್‌ಗಾಗಿ ಖರೀದಿ ಮಾಡುತ್ತಾರೆ. ಹೀಗಾಗಿ ಖರೀದಿ ಆಯ್ಕೆ ಗ್ರಾಹಕರ ಅಗತ್ಯತೆಗೆ ಸಂಬಂಧಿಸಿದ್ದಾಗಿದ್ದು, ನಿಮಗೆ ಬಜೆಟ್‌ ಸ್ವಲ್ಪ ಕಡಿಮೆ ಇದೆ ಅಂದ್ರೆ ಐಫೋನ್ 13 ಅನ್ನು ಖರೀದಿ ಮಾಡಬಹುದು. ಹಣ ಎ‍ಷ್ಟಾದರೂ ಆಗಲಿ ಉತ್ತಮ ಫೋನ್ ಬೇಕು ಎಂದರೆ ಹೊಸ ಸರಣಿ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Major e-commerce sites like Amazon and Flipkart have organized a special sale. In this case, see here the information about which iPhone 15, iPhone 13 and iPhone 14 series to buy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+