iPhone 15 Plus ಭಾರೀ ಇಳಿಕೆ: 13,600 ರೂ. ಅಗ್ಗ! ಹೊಸ ಬೆಲೆ ಎಷ್ಟು?
iPhone 15 Plus Discount: ಆಪಲ್ ಕಂಪನಿಯು ಪ್ರತಿವರ್ಷ ತನ್ನ ಗ್ರಾಹಕರಿಗಾಗಿ ಹೊಸ ಐಫೋನ್ಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ, ನೂತನ ಸರಣಿಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತವೆ. ಕಂಪನಿಯು ನಾಳೆ ಐಫೋನ್ 16 ಸರಣಿಯ ಫೋನ್‌ಗಳನ್ನು ಲಾಂಚ್ ಮಾಡಲಿದೆ. ಆದರೆ, ಈ ಹೊಸ ಸರಣಿ ಬಿಡುಗಡೆಗೂ ಮೊದಲೇ ಈ ಹಳೆಯ ಐಫೋನ್ಗಳ ಮೇಲೆ ಕಂಪನಿ ಭಾರೀ ರಿಯಾಯಿತಿ ಘೋಷಿಸಿದೆ. 13 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಈ ಐಫೋನ್ ಅನ್ನು ಖರೀದಿಸಬಹುದು. ಯಾವ ಫೋನ್? ಅದರ ವಿಶೇಷತೆಗಳೇನು? ಈ ಕುರಿತ ಸಂಫೂರ್ಣ ಮಾಹಿತಿ ಇಲ್ಲಿದೆ.
ಹೌದು, ಆಪಲ್ ಕಂಪನಿಯು 2023 ರಲ್ಲಿ ಬಿಡುಗಡೆ ಮಾಡಿದ್ದ ಐಫೋನ್ 15 ಪ್ಲಸ್ (iPhone 15 Plus) ರೂಪಾಂತರವನ್ನು ಭಾರೀ ಕಡಿಮೆ ಬೆಲೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಐಫೋನ್ 15 ಸೀರಿಸ್ ಫೋನ್ ಅನ್ನು 13 ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆ ಖರೀದಿಸಬಹುದು. ಇದು ಡಿಸ್ಪ್ಲೇ ಗಾತ್ರ ಮತ್ತು ಬ್ಯಾಟರಿ ಬಾಳಿಕೆಗೆ ಸಂಬಂಧಿಸಿದಂತೆ ವೆನಿಲ್ಲಾ ಐಫೋನ್ 15 ಅನ್ನು ಮೀರಿಸುತ್ತದೆ. ಅಲ್ಲದೆ, ಐಫೋನ್ 15 ಪ್ಲಸ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 75,000 ರೂ.ಗೆ ಲಭ್ಯವಿದೆ.

ಐಫೋನ್ 15 ಪ್ಲಸ್ ಬೆಲೆ ಮತ್ತು ರಿಯಾಯಿತಿ
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 Plus ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ಐಫೋನ್ 15 ಪ್ಲಸ್ ಪ್ರಸ್ತುತ ಬೆಲೆ 89,600 ರೂ. ಇದೆ. ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಶೇ.15 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿದೆ. ಇದರ ಬೆಲೆ 75,000 ರೂ. ಆಗಿದೆ. ಇದು ಐಫೋನ್ 15 ಪ್ಲಸ್ ಫೋನಿನ ಮೂಲ 128GB ಸ್ಟೋರೇಜ್ ಮಾದರಿಯ ಬೆಲೆಯಾಗಿದೆ. ನೀವು 13,600 ರೂ. ರಿಯಾಯಿತಿಯೊಂದಿಗೆ ಖರೀದಿಸಬಹುದು.
ನೀವು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ಪಾವತಿಗಳಲ್ಲಿ 1,500 ರೂ. ಮತ್ತು ಯುಪಿಐ ವಹಿವಾಟುಗಳಲ್ಲಿ 1,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಐಫೋನ್ 15 ಪ್ಲಸ್‌ನ 256GB ರೂಪಾಂತರವನ್ನು ಸಹ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ ಬೆಲೆ 99,600 ರೂ. ಇದೆ. ಇದೀಗ 85,999 ರೂ.ಗೆ ಖರೀದಿಸಲು ಅವಕಾಶವಿದೆ.
ಐಫೋನ್ 15 ಪ್ಲಸ್‌ನ 1TB ರೂಪಾಂತರವು 1,05,999 ರೂ.ಗೆ ಲಭ್ಯವಿದೆ. ಈ ಫೋನಿನ ಅಧಿಕೃತ ಬೆಲೆ 1,19,600 ರೂ. ಇದೆ. ಕಂಪನಿಯ ಸೈಟ್‌ನಲ್ಲಿ 128GB ಸ್ಟೋರೇಜ್ ವೇರಿಯಂಟ್‌ಗೆ 89,600 ರೂ., 256GB ಸ್ಟೋರೇಜ್ ರೂಪಾಂತರಕ್ಕೆ 99,600 ರೂ. ಮತ್ತು 512GB ಸ್ಟೋರೇಜ್ ರೂಪಾಂತರಕ್ಕೆ 119,600 ರೂ.ಗಳಲ್ಲಿ ಪಟ್ಟಿಮಾಡಲಾಗಿದೆ. ನೀವು ಐಫೋನ್ 15 ಪ್ಲಸ್ ಅನ್ನು ಹಸಿರು, ಗುಲಾಬಿ, ಹಳದಿ, ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ಐಫೋನ್ 15 ಪ್ಲಸ್ ಅನ್ನು ಖರೀದಿಸಹುದೇ?
ಐಫೋನ್ 15 ಪ್ಲಸ್ ಸುಮಾರು ಒಂದು ವರ್ಷ ಹಳೆಯ ಸ್ಮಾರ್ಟ್‌ಫೋನ್ ಆಗಿದೆ. ಐಫೋನ್ 15 ಪ್ಲಸ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ದೊಡ್ಡ ಡಿಸ್ಲ್ಪೇ ಬಯಸುವ ಐಫೋನ್ ಪ್ರಿಯರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದಲ್ಲದೆ ನೀವು ವೆನಿಲ್ಲಾ ಐಫೋನ್ 15 ಅನ್ನು ಖರೀದಿಸಬಹುದು. ಈ ಫೋನ್ ಗಾತ್ರದಲ್ಲಿ ದೊಡ್ಡದಾಗಿದೆ. ಇದು ಪವರ್‌ಫುಲ್ ಬ್ಯಾಟರಿ ಬಾಳಿಕೆ ಮತ್ತು ಉತ್ತಮ ಕ್ಯಾಮೆರಾ ಹೊಂದಿದೆ. ಐಫೋನ್ 15 ಪ್ಲಸ್ ಜೊತೆಗೆ USB ಟೈಪ್-C ಚಾರ್ಜಿಂಗ್ ಮತ್ತು ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇ ಅನ್ನು ಪಡೆಯಬಹುದು.
ಐಫೋನ್ 15 ಪ್ಲಸ್‌ನ ವೈಶಿಷ್ಟ್ಯಗಳು
ಐಫೋನ್ 15 ಪ್ಲಸ್ ಸೂಪರ್ ರೆಟಿನಾ XDR ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ A16 ಬಯೋನಿಕ್ ಸುಧಾರಿತ ಪ್ರಕ್ರಿಯೆಯನ್ನು ಹೊಂದಿದೆ. ಈ ಫೋನ್ ಉತ್ತಮ ಕ್ಯಾಮೆರಾ ಸೆಟಪ್ಗಳನ್ನು ಸಹ ಹೊಂದಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪಡೆದಿದೆ. ಇದು 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಮತ್ತು ಟೆಲಿಫೋಟೋ ಕ್ಯಾಮೆರಾ ಹೊಂದಿದೆ.
ಐಫೋನ್ 15 ಪ್ಲಸ್ ಬ್ಯಾಟರಿಯು 26 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಮತ್ತು 100 ಗಂಟೆಗಳವರೆಗೆ ಆಡಿಯೋ ಪ್ಲೇಬ್ಯಾಕ್ ಸಮಯವನ್ನು ಹೊಂದಿರಲಿದೆ. ಇದು ಫಾಸ್ಟ್ ಚಾರ್ಜ್ ಸಾಮರ್ಥ್ಯವನ್ನೂ ಸಹ ಹೊಂದಿದೆ. 20W ಅಡಾಪ್ಟರ್ ಅಥವಾ ಹೆಚ್ಚಿನ ಸಾಮರ್ಥ್ಯದ ಕೇಬಲ್‌ನೊಂದಿಗೆ ಸುಮಾರು 30 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಆಗುತ್ತದೆ. ಐಫೋನ್ 15 ಪ್ಲಸ್ ಫೇಸ್ ಐಡಿ, ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಹೀಗೆ ಅನೇಕ ಫೀಚರ್ಸ್ಗಳನ್ನು ಹೊಂದಿದೆ.


Click it and Unblock the Notifications








