ಐಫೋನ್ ಪ್ರಿಯರಿಗೆ ಸಿಹಿಸುದ್ದಿ! iPhone 15 ಬೆಲೆ ಭಾರೀ ಇಳಿಕೆ.. 12250 ಡಿಸ್ಕೌಂಟ್.. ಇಲ್ಲಿದೆ ಹೊಸ ದರ
ಅಕ್ಷಯ ತೃತೀಯ ದಿನದಂದೇ ಸಿಕ್ಕಿತು ಶುಭ ಸುದ್ದಿ. ಐಫೋನ್ 15 ಅತ್ಯಂತ ಅಗ್ಗದ ಬೆಲೆಗೆ ಸೇಲ್..! ಹೌದು, ನೀವು ಅಗ್ಗದ ಐಫೋನ್ ಬಯಸಿದರೆ, ಅಮೆಜಾನ್ ಐಫೋನ್ 15 ಅನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಮೇ 1 ರಿಂದ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2025 (Amazon Great Summer Sale 2025) ಪ್ರಾರಂಭವಾಗುತ್ತಿದೆ. ಈ ವಿಶೇಷ ಮಾರಾಟದಲ್ಲಿ ಐಫೋನ್ 15 ಫೋನಿನ 128GB ಸ್ಟೋರೇಜ್ ಬಿಡುಗಡೆ ಬೆಲೆಗಿಂತ 12,250 ರೂ. ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಐಫೋನ್ 15 ಅನ್ನು ಕಡಿಮೆ ಬೆಲೆಗೆ ಯಾವಾಗ, ಎಲ್ಲಿ ಮತ್ತು ಹೇಗೆ ಖರೀದಿಸಬೇಕು? ಎನ್ನುವುದನ್ನು ತಿಳಿಯೋಣ ಬನ್ನಿ.
ಐಫೋನ್ 15 ಅನ್ನು ಮೂರು ಸ್ಟೋರೇಜ್ ಮತ್ತು ಮೂರು ಬಣ್ಣಗಳಲ್ಲಿ ಖರೀದಿಸಬಹುದು. ಈ ಐಫೋನಿನ ವಿಶೇಷತೆಗಳೆಂದರೆ, ಇದು 48 ಮೆಗಾಪಿಕ್ಸಲ್ + 12 ಮೆಗಾಪಿಕ್ಸಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಮೊಬೈಲ್ 6.1 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಐಫೋನ್ A16 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಇದರೊಂದಿಗೆ 6GB RAM + 512GB ಸ್ಟೋರೇಜ್, 3349mAh ಬ್ಯಾಟರಿ, 27W ವೈರ್ಡ್ ಮತ್ತು 18W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಪ್ರಸ್ತುತ, ಆಪಲ್‌ನ ಈ ಫೋನನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಐಫೋನ್ 15 ಹೊಸ ಬೆಲೆ
128GB ಸ್ಟೋರೇಜ್ ಹೊಂದಿರುವ ಐಫೋನ್ 15 ಅನ್ನು 69,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಅಮೆಜಾನ್ ಗ್ರೇಡ್ ಸಮ್ಮರ್ ಸೇಲ್‌ನಲ್ಲಿ ಈ ಮೊಬೈಲ್ ಅನ್ನು ಕೇವಲ 57,749 ರೂ.ಗೆ ಖರೀದಿಸಬಹುದು. ಈ ಬೆಲೆ ಎಲ್ಲಾ ರಿಯಾಯಿತಿಗಳು ಮತ್ತು ಬ್ಯಾಂಕ್ ಆಫರ್ ಅನ್ನು ಒಳಗೊಂಡಿದೆ. ಹೊಸ ಐಫೋನ್ ಖರೀದಿಸಲು ಬಯಸುವವರು ಐಫೋನ್ 15 ಅನ್ನು ಬಿಡುಗಡೆ ಬೆಲೆಗಿಂತ 12,250 ರೂ. ಕಡಿಮೆಗೆ ಪಡೆಯಬಹುದು. ಅಗ್ಗದ ದರದಲ್ಲಿ iPhone 15 ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.
ಇದಲ್ಲದೆ, ಹಲವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಐಫೋನ್ 15 ಬೆಲೆಯನ್ನು ಕಡಿತಗೊಳಿಸಿವೆ. ಅಮೆಜಾನ್‌ನಲ್ಲಿ ಇದು 61,390 ರೂ.ಗೆ ಲಭ್ಯವಿದೆ. ವಿಜಯ್ ಸೇಲ್ಸ್‌ನಲ್ಲಿ 62,900 ರೂ.ಗೆ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಇದರ ಬೆಲೆ 64,400 ರೂ. ಆಗಿದೆ. ರಿಲಯನ್ಸ್ ಡಿಜಿಟಲ್ ಬೆಲೆ 64,900 ರೂ. ಮತ್ತು ಕ್ರೋಮಾ ಬೆಲೆ 64,900 ರೂ. ಆಗಿದೆ. ಇನ್ನು ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಐಫೋನ್ 15 ಬೆಲೆಯನ್ನು 69,900 ರೂ.ಗೆ ಪಟ್ಟಿ ಮಾಡಲಾಗಿದೆ.

ಐಫೋನ್ 15 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಫೋನ್ 15 ಸ್ಮಾರ್ಟ್‌ಫೋನ್ 6.1 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಆಪಲ್ ಇದನ್ನು ಸೂಪರ್ ರೆಟಿನಾ XDR OLED ಪ್ಯಾನೆಲ್‌ನಲ್ಲಿ ನಿರ್ಮಿಸಿದೆ. ಇದು 1179 x 2556 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಡಾಲ್ಬಿ ವಿಷನ್ ಮತ್ತು HDR10 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸೆರಾಮಿಕ್ ಶೀಲ್ಡ್ ಗಾಜಿನ ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಐಫೋನ್ 15 ಫೋನ್ ಆಪಲ್‌ನ A16 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಐಫೋನ್ iOS 17 ಆಪರೇಟಿಂಗ್ ಸಿಸ್ಟಮ್ ಬೆಂಬಲ ಸಹ ಪಡೆದಿದೆ. ಇದು ಪ್ರಸ್ತುತ, iOS 18ರ ನವೀಕರಣವನ್ನು ಪಡೆದುಕೊಂಡಿದೆ. ಈ ಮೊಬೈಲ್ 128GB, 256GB ಮತ್ತು 512GB ಸ್ಟೋರೇಜ್ ರೂಪಾಂತರಗಳನ್ನು ಸಹ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಐಫೋನ್ 15 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಐಫೋನ್ 15 ಫೋನಿನಲ್ಲಿ 12 ಮೆಗಾಪಿಕ್ಸೆಲ್ ಸೆಲ್ಫಿ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಫೋನ್ 15 ಈ ಹಿಂದಿನ ಫೋನಿಗಿಂತ ಶಕ್ತಿಶಾಲಿ ಬ್ಯಾಟರಿ ಒಳಗೊಂಡಿದೆ. ಇದು 3,349mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಮೊಬೈಲ್ ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಕಂಪನಿಯು ಇದನ್ನು 27W ವೈರ್ಡ್ ಮತ್ತು 18W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಪರಿಚಯಿಸಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು 5G ಸಪೋರ್ಟ್, ವೈರ್‌ಲೆಸ್ ಸೌಲಭ್ಯ ಮತ್ತು ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಲಭ್ಯವಿದೆ. ಇದರೊಂದಿಗೆ ಫೇಸ್‌ಟೈಮ್ ಕ್ಯಾಮೆರಾ ಮತ್ತು ಫೇಸ್‌ಐಡಿ ಸೌಲಭ್ಯ ಒಳಗೊಂಡಿದೆ.


Click it and Unblock the Notifications








