Home
Deal of the day

iPhone 15: ಹೊಸ ಐಫೋನ್‌ 15 ಇದೀಗ 63,000ರೂ.ಗಳ ಒಳಗೆ ಲಭ್ಯ, ಸೀಮಿತ ಅವಧಿಯ ಆಫರ್..

ಐಫೋನ್‌ (iPhone) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಆದರೆ, ಈ ಫೋನ್‌ಗಳಿಗೆ ಇರುವ ದುಬಾರಿ ಬೆಲೆಯಿಂದ ಕೆಲವು ಜನರು ತಮ್ಮ ಹೆಜ್ಜೆಯನ್ನು ಕೊಂಚ ಹಿಂದೆ ಸರಿಸಿರುತ್ತಾರೆ ಅಷ್ಟೇ. ಆದರೆ, ಈಗ ಯಾರೆಲ್ಲಾ ಈ ಹೊಸ ಐಫೋನ್ ಖರೀದಿ ಮಾಡಲು ಮುಂದಾಗಿದ್ದಾರೋ ಅವರು ಆಫರ್ ಬೆಲೆಗೆ ಐಫೋನ್‌ 15 (iPhone 15) ಅನ್ನು ಕೊಂಡುಕೊಳ್ಳಬಹುದಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಈ ಫೋನ್‌ ಈಗ ಭಾರೀ ಕೊಡುಗೆ ಮೂಲಕ ಲಭ್ಯ ಇದೆ. ಈ ಐಫೋನ್‌ 15 ಸ್ಮಾರ್ಟ್‌ಫೋನ್ ಸುಧಾರಿತ ಕ್ಯಾಮೆರಾ ಫೀಚರ್ಸ್ಸ್, A16 ಬಯೋನಿಕ್ ಪ್ರೊಸೆಸರ್‌ ಬಲ ಪಡೆದಿದ್ದು, ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಅನ್ನು ಇಷ್ಟು ಕಡಿಮೆ ದರದಲ್ಲಿ ಖರೀದಿ ಮಾಡುವುದು ಹೇಗೆ?, ಈ ಫೋನ್‌ನ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೊಸ ಐಫೋನ್‌ 15 ಇದೀಗ 63,000ರೂ.ಗಳ ಒಳಗೆ ಲಭ್ಯ, ಸೀಮಿತ ಅವಧಿಯ ಆಫರ್..

ಐಫೋನ್‌ 15 ಸ್ಮಾರ್ಟ್‌ಫೋನ್‌: ಐಫೋನ್ 15 ಅನ್ನು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 66,499 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಿಸ್ಟ್‌ ಮಾಡಲಾಗಿದೆ. ಇದರ ಮೂಲ ಬೆಲೆ ದರ 79,900 ರೂ. ಇದ್ದು, 9,901 ರೂ.ಗಳ ನೇರ ರಿಯಾಯಿತಿಯನ್ನು ಪಡೆದುಕೊಂಡಿದೆ. ಅದಾಗ್ಯೂ ನೀವು ಈಗ ಬ್ಯಾಂಕ್ ಕೊಡುಗೆಗಳೊಂದಿಗೆ 3,325 ರೂ.ಗಳ ರಿಯಾಯಿತಿ ಮೂಲಕ 63,174ರೂ.ಗಳಿಗೆ ಈ ಫೋನ್‌ ಅನ್ನು ಖರೀದಿ ಮಾಡಬಹುದು. ಇಷ್ಟು ಮಾತ್ರವಲ್ಲದೆ ವಿನಿಮಯ ಆಫರ್ ಸಹ ಇದ್ದು, ಗರಿಷ್ಠ 50,000 ರೂ.ವರೆಗಿನ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಕಡೆ ಕಣ್ಣಾಯಿಸೋಣ.

ಐಫೋನ್ 15 ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್‌ 15 6.1 ಇಂಚಿನ ಹೆಚ್‌ಡಿಆರ್‌ ಡಿಸ್‌ಪ್ಲೇ ಹೊಂದಿದ್ದು, 1179 x 2556 ಪಿಕ್ಸೆಲ್‌ನ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಈ ಮೂಲಕ ದೈನಂದಿನ ಬಳಕೆಗೆ, ಗೇಮಿಂಗ್ ಮತ್ತು ವಿಡಿಯೋ ಅನುಭವಕ್ಕೆ ಉತ್ತಮ ಫೋನ್‌ ಆಗಿದೆ. ಇದರ ಜೊತೆಗೆ ಆಪಲ್‌ನ ಟ್ರೂ ಟೋನ್ ತಂತ್ರಜ್ಞಾನವು ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ನೈಸರ್ಗಿಕ ವೀಕ್ಷಣೆಯ ಅನುಭವವನ್ನು ನೀಡಲಿದೆ.

ಹೊಸ ಐಫೋನ್‌ 15 ಇದೀಗ 63,000ರೂ.ಗಳ ಒಳಗೆ ಲಭ್ಯ, ಸೀಮಿತ ಅವಧಿಯ ಆಫರ್..

ಐಫೋನ್ 15 ಪ್ರೊಸೆಸರ್‌ ವಿವರ: ಈ ಫೋನ್ ಆಪಲ್‌ನ A16 ಬಯೋನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಪ್ರೊಸೆಸರ್ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರಿಂದಾಗಿ ಬೇಡಿಕೆಯಿರುವ ಆಪ್‌ಗಳು ಮತ್ತು ಗೇಮ್‌ಗಳನ್ನು ಇಷ್ಟಬಂದಂತೆ ಬದಲಾಯಿಸಬಹುದಾಗಿದೆ. ಅಷ್ಟೇ ಅಲ್ಲದೆ ಯಾವುದೇ ಕೆಲಸಗಳನ್ನೂ ಸಹ ನೀರು ಕುಡಿದಷ್ಟು ಸುಲಭವಾಗಿ ಮಾಡುತ್ತದೆ.

ಐಫೋನ್ 15 ಪ್ರೊಸೆಸರ್‌ ಕ್ಯಾಮೆರಾ ರಚನೆ: ಹಿಂದಿನ ಮಾದರಿಗಳಿಂದ ಗಮನಾರ್ಹವಾದ ಅಪ್‌ಗ್ರೇಡ್ ಅನ್ನು ಈ ಫೋನ್‌ ಪಡೆದಿದೆ. ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು ತೀಕ್ಷ್ಣವಾದ ಫೋಟೋಗಳಿಗಾಗಿ ಮತ್ತು ಸುಧಾರಿತ ಕಡಿಮೆ ಬೆಳಕಿನ ಕಾರ್ಯಕ್ಷಮತೆಗಾಗಿ ಸೆನ್ಸರ್ ಶಿಫ್ಟ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ ಆಯ್ಕೆ ಪಡೆದುಕೊಂಡಿದೆ. ಈ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸರ್‌ ಹೊಂದಿದ್ದು, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮರಾ ಸಹ ಇದರಲ್ಲಿದೆ. ಉಳಿದಂತೆ ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಟ್ರೂಡೆಪ್ತ್ ಸೆನ್ಸರ್‌ ಆಯ್ಕೆ ನೀಡಲಾಗಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ ಕಪ್ಪು, ನೀಲಿ, ಹಸಿರು, ಗುಲಾಬಿ ಮತ್ತು ಹಳದಿಯಂತಹ ವಿವಿಧ ಬಣ್ಣಗಳೊಂದಿಗೆ ನಯವಾದ ವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದು, IP68 ರೇಟಿಂಗ್ ಹೊಂದಿದೆ. ಇದರಿಂದ ಧೂಳು ಮತ್ತು ನೀರಿನಿಂದ ಈ ಫೋನ್‌ಗೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಇದೆಲ್ಲದರ ಜೊತೆಗೆ ಈ ಫೋನ್ ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಪಡೆದಿದ್ದು, ಇದು ನೋಟಿಫಿಕೇಶನ್‌ಗಳನ್ನು ವಿಶೇಷವಾಗಿ ಪ್ರದರ್ಶನ ಮಾಡುತ್ತದೆ.

ಹೊಸ ಐಫೋನ್‌ 15 ಇದೀಗ 63,000ರೂ.ಗಳ ಒಳಗೆ ಲಭ್ಯ, ಸೀಮಿತ ಅವಧಿಯ ಆಫರ್..

ಇದರ ಜೊತೆಗೆ ಈ ಫೋನ್ 128GB, 256GB ಮತ್ತು 512GB ಯ ಮೂರು ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇದ್ದು, ಬಳಕೆದಾರರ ವಿವಿಧ ಅಗತ್ಯಗಳನ್ನು ಪೂರೈಸುತ್ತದೆ. ಗಮನಿಸಬೇಕಾದ ಮಾಹಿತಿ ಏನೆಂದರೆ ಆಪಲ್ ಬ್ಯಾಟರಿ ಸಾಮರ್ಥ್ಯವನ್ನು ಬಹಿರಂಗಪಡಿಸದಿದ್ದರೂ, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಒಂದು ದಿನ ಬ್ಯಾಕಪ್ ಪಡೆಯಬಹುದು.

Best Mobiles in India

English summary
iPhone 15 is now available on Flipkart with a huge offer. This iPhone is powered by advanced camera features, A16 bionic processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+