ಹೊಸ iPhone ಬೆಲೆಯಲ್ಲಿ ಭರ್ಜರಿ ಇಳಿಕೆ; ನೀವು ಖರೀದಿ ಮಾಡ್ತೀರಾ?
ಟೆಕ್ ದೈತ್ಯ ಆಪಲ್ ಸಂಸ್ಥೆಯ ಐಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಆ ಪೈಕಿ ಸಂಸ್ಥೆಯ ಇತ್ತೀಚಿನ ನೂತನ ಐಫೋನ್‌ಗಳು ಕ್ಯಾಮೆರಾ ಆಯ್ಕೆ ಹಾಗೂ ಅಪ್‌ಡೇಟ್ ಪ್ರೊಸೆಸರ್ ಮೂಲಕ ಹೆಚ್ಚಿನ ಗಮನ ಸೆಳದಿವೆ. ಸದ್ಯ ಐಫೋನ್ 16 ಪ್ಲಸ್ (iPhone 16 Plus) ಮೊಬೈಲ್ ದೈತ್ಯ ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಗಮನಾರ್ಹ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ವಾವ್ ಎನ್ನುವಂತೆ ಮಾಡಿದೆ.
ಹೌದು, ಅಮೆಜಾನ್ ವೆಬ್‌ಸೈಟ್‌ನಲ್ಲಿ ಆಪಲ್ ಐಫೋನ್ 16 ಪ್ಲಸ್ (Apple iPhone 16 Plus) ಮೊಬೈಲ್ ಆಕರ್ಷಕ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, 3000ರೂ. ಗಳ ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಮೊಬೈಲ್‌ನ 128GB ವೇರಿಯಂಟ್ ಅನ್ನು ಗ್ರಾಹಕರು 86,900ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಗ್ರಾಹಕರು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಂಡರೆ, ಇನ್ನಷ್ಟು ಡಿಸ್ಕೌಂಟ್ ಪಡೆಯುವ ಚಾನ್ಸ್ ಇದೆ.

ಈ ಐಫೋನ್ A18 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು ಬ್ಲ್ಯಾಕ್, ಪಿಂಕ್, ಟೀಲ್, ಅಲ್ಟ್ರಾಮರೀನಾ ಮತ್ತು ವೈಟ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಅಮೆಜಾನ್ ವೆಬ್‌ಸೈಟ್‌ನಲ್ಲಿ ಐಫೋನ್ 16 ಪ್ಲಸ್ ಅನ್ನು ಅತ್ಯುತ್ತಮ ಆಫರ್‌ನಲ್ಲಿ ಖರೀದಿಸಬಹುದು. ಇನ್ನುಳಿದಂತೆ ಐಫೋನ್ 16 ಪ್ಲಸ್ ನ ಇತರೆ ಯಾವೆಲ್ಲಾ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಡಿಸ್‌ಪ್ಲೇ ಹಾಗೂ ರಚನೆ
ಐಫೋನ್ 16 ಪ್ಲಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಅಂದಹಾಗೆ ಈ ಸರಣಿಯ ಮೊಬೈಲ್‌ಗಳನ್ನು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ತಯಾರು ಮಾಡಲಾಗಿದೆ. ಆಪಲ್ ಸಂಸ್ಥೆಯ ಈ ಐಫೋನ್‌ಗಳ ರಚನೆಯು ಇತರ ಯಾವುದೇ ಗ್ಲಾಸ್-ಬ್ಯಾಕ್ ಫೋನ್‌ಗಿಂತ 2x ಹೆಚ್ಚು ಬಾಳಿಕೆ ಬರುವಂತಹ ಸೌಲಭ್ಯ ಪಡೆದಿವೆ.
ಪ್ರೊಸೆಸರ್ ಚಿಪ್‌ಸೆಟ್ ಯಾವುದು
ಐಫೋನ್ 16 ಪ್ಲಸ್ ಮೊಬೈಲ್ A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಚಿಪ್‌ಸೆಟ್ ಎರಡು ಪಟ್ಟು ವೇಗದ ನ್ಯೂರಲ್ ಎಂಜಿನ್ ಹಾಗೂ 17 ಪ್ರತಿಶತ ಹೆಚ್ಚು ಬ್ಯಾಂಡ್‌ವಿಡ್ತ್ ಜೊತೆಗೆ ನವೀಕರಿಸಿದ ಮೆಮೊರಿ ಉಪವ್ಯವಸ್ಥೆ ಅನ್ನು ಪಡೆದಿದೆ. ಹಾಗೆಯೇ ಇದು ಇದು ಐಫೋನ್ 15 ನಲ್ಲಿನ CPU ಗಿಂತ 30 ಪ್ರತಿಶತದಷ್ಟು ವೇಗ ಪಡೆದಿದೆ.
ಡ್ಯುಯಲ್ ಕ್ಯಾಮೆರಾ ಸೆನ್ಸಾರ್
ಐಫೋನ್ 16 ಪ್ಲಸ್ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಅವುಗಳಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಸಹ ಪಡೆದಿದೆ. ಗುಣಮಟ್ಟದ ಫೋಟೋ ಸೆರೆಹಿಡಿಯಲು ಪೂರಕವಾಗಿ ಕೆಲಸ ನಿರ್ವಹಿಸಲಿದೆ. ಹೊಸ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹಿಂದಿನ ಮಾದರಿಗಳಿಗಿಂತ 2.6 ಪಟ್ಟು ಹೆಚ್ಚು ಬೆಳಕನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ ಅಲ್ಲದೇ ಮ್ಯಾಕ್ರೋ ಫೋಟೋಗ್ರಫಿಯನ್ನು ಸಪೋರ್ಟ್ ಮಾಡುತ್ತದೆ.
ಬ್ಯಾಟರಿ ಕಥೆ ಏನು?
ಐಫೋನ್ 16 ಪ್ಲಸ್ ಮೊಬೈಲ್ ತನ್ನ ಈ ಹಿಂದಿನ ಸರಣಿಗಿಂತ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು ಐಫೋನ್ ಪ್ರಿಯರ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್ (Dynamic Island) ಆಯ್ಕೆಯನ್ನು ಹೊಂದಿದ್ದು, ಇದು 5G ಸಪೋರ್ಟ್ ಪಡೆದಿದೆ.
ಅಲ್ಲದೇ ಈ ಐಫೋನ್ ವಾಯರ್‌ಲೆಸ್ ಕನೆಕ್ಟಿವಿಟಿ ಸೌಲಭ್ಯ ಸಹ ಪಡೆದಿದೆ. ಇದರ ಜೊತೆಗೆ ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಇದೆ. ಐಫೋನ್ 16 ಪ್ಲಸ್ ಮೊಬೈಲ್‌ನ ಆರಂಭಿಕ ವೇರಿಯಂಟ್ 128GB ಹಾಗೂ 256GB ವೇರಿಯಂಟ್ ಆಯ್ಕೆಯಲ್ಲಿ ಲಭ್ಯ.


Click it and Unblock the Notifications








