Home
Deal of the day

ಈ ದೈತ್ಯ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ; ಉಳಿತಾಯ ಖಚಿತ!

ಜನಪ್ರಿಯ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಹೈ ಎಂಡ್‌ ಫೋನ್‌ಗಳಿಗೂ ಅತ್ಯುತ್ತಮ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತದೆ. ಇದೀಗ ಅಮೆಜಾನ್‌ ತಾಣವು ಆಯ್ದ ಕೆಲವು ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌ ಘೋಷಿಸಿದ್ದು, ಆ ಪೈಕಿ ಐಕ್ಯೂ ಕಂಪನಿಯ ಮೊಬೈಲ್‌ಗಳಲ್ಲಿ ಒಂದಾದ ಐಕ್ಯೂ 12 5G ಸ್ಮಾರ್ಟ್‌ಫೋನ್‌ ಸಖತ್ ಆಫರ್‌ ಪಡೆದಿದೆ. ಈ ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 3 SoC ಪ್ರೊಸೆಸರ್ ನಲ್ಲಿ ಕಾರ್ಯ ಮಾಡಲಿದೆ.

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಐಕ್ಯೂ 12 5G ಮೊಬೈಲ್‌ ಶೇ. 15% ರಷ್ಟು ನೇರ ಡಿಸ್ಕೌಂಟ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನಿನ 12GB RAM + 256GB ಸ್ಟೋರೇಜ್‌ ವೇರಿಯಂಟ್‌ 50,999ರೂ. ಗಳ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದರ ಜೊತೆಗೆ ಇತರೆ ಕೆಲವು ಆಯ್ದ ಬ್ಯಾಂಕ್‌ ಆಫರ್‌ಗಳು ಕೂಡಾ ಗ್ರಾಹಕರಿಗೆ ಲಭ್ಯ ಸಿಗಲಿವೆ.

ಈ ದೈತ್ಯ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ; ಉಳಿತಾಯ ಖಚಿತ!

ಹಾಗೆಯೇ ಈ ಮೊಬೈಲ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್‌ ಸಹ ಪಡೆದಿದೆ. ಅಲ್ಲದೇ ಈ ಫೋನ್‌ 16GB RAM ಮತ್ತು 512GB ಸ್ಟೋರೇಜ್ ವೇರಿಯಂಟ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಐಕ್ಯೂ 12 5G ಫೋನ್‌ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ 12 5G ಫೋನ್‌ - ಫೀಚರ್ಸ್‌

ಐಕ್ಯೂ 12 5G ಫೋನ್‌ 6.78 ಇಂಚಿನ 1.5K LTPO OLED ಡಿಸ್‌ಪ್ಲೇ ಅನ್ನು ಪಡಿದ್ದು, ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಜೊತೆಗೆ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 2160Hz PWM ಡಿಮ್ಮಿಂಗ್‌ ಅನ್ನು ಬೆಂಬಲಿಸಲಿದ್ದು, ಕಣ್ಣಿಗೆ ಸುರಕ್ಷತೆಯನ್ನು ನೀಡಲಿದೆ.

ಐಕ್ಯೂ 12 5G ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 3 SoC ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 14 ನಲ್ಲಿ ರನ್‌ ಆಗಲಿದೆ. ಇನ್ನು ಗೇಮಿಂಗ್ ಅನುಭವಗಳನ್ನು ಹೆಚ್ಚಿಸಲು ಮತ್ತು ಫ್ರೇಮ್ ದರಗಳನ್ನು ಆಪ್ಟಿಮೈಜ್ ಮಾಡಲು, ಮೀಸಲಾದ Q1 ಚಿಪ್‌ಸೆಟ್ ಅನ್ನು ಡಿವೈಸ್‌ನ ಆರ್ಕಿಟೆಕ್ಚರ್‌ಗೆ ಸಂಯೋಜಿಸಲಾಗಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ.

ಐಕ್ಯೂ 12 5G ಫೋನ್‌ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿದೆ. ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹಾಗೂ ಮೂರನೇ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಐಕ್ಯೂ 12 5G ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 120W ವರೆಗಿನ ಫಾಸ್ಟ್‌ ಚಾರ್ಜಿಂಗ್ ಸಾಮರ್ಥ್ಯ ಸಪೋರ್ಟ್‌ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿದೆ. ಇದಲ್ಲದೆ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್‌, ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಹೈ-ರೆಸ್ ಆಡಿಯೊಗೆ ಸಪೋರ್ಟ್‌ ಒದಗಿಸುತ್ತದೆ.

Best Mobiles in India

English summary
iQOO 12 5G receive Fabulous discount on amazon website. check offers and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+