Home
Deal of the day

iQOO: ಐಕ್ಯೂದ ಈ ಫೋನ್‌ಗಳಿಗೆ ಭರ್ಜರಿ ಆಫರ್! ಮಿಸ್‌ ಮಾಡಿಕೊಳ್ಳಬೇಡಿ...

ಐಕ್ಯೂ ಸ್ಮಾರ್ಟ್‌ಫೋನ್‌ಗಳನ್ನು (IQOO smartphones) ನೀವು ಖರೀದಿ ಮಾಡಲು ಇಚ್ಚಿಸಿದರೆ ಇದಕ್ಕಿಂದ ಉತ್ತಮ ಸಮಯ ಬೇರೆ ಇಲ್ಲ ಎಂದು ಹೇಳಬಹುದು. ಯಾಕೆಂದರೆ ಪ್ರಮುಖ ಇ ಕಾಮರ್ಸ್‌ ಸೈಟ್‌ನಲ್ಲಿ ಸಾಕಷ್ಟು ಐಕ್ಯೂ ಫೋನ್‌ಗಳಿಗೆ ಬೊಂಬಾಟ್‌ ಆಫರ್ ಘೋಷಣೆ ಮಾಡಿದೆ.

ಹೌದು, ನೀವೀಗ ಯಾವುದೇ ಐಕ್ಯೂ ಫೋನ್‌ ಖರೀದಿ ಮಾಡಲು ಮುಂದಾದರೂ ಸಹ ಈ ವಿಶೇಷ ಸೇಲ್‌ನಲ್ಲಿ ವಿಶೇಷ ಆಫರ್ ಮೂಲಕ ಅಗ್ಗದ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ವಿಭಾಗದಲ್ಲಿ ಐಕ್ಯೂ 12, ಐಕ್ಯೂ 11, ಐಕ್ಯೂ ನಿಯೋ 9 ಪ್ರೊ (IQOO 12, IQOO 11, IQOO Neo 9 Pro) ಪ್ರಮುಖವಾಗಿವೆ. ಹಾಗಿದ್ರೆ, ಈ ಫೋನ್‌ಗಳಿಗೆ ಇರುವ ಆಫರ್ ಏನು?, ಇವುಗಳ ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಕ್ಯೂದ ಈ ಫೋನ್‌ಗಳಿಗೆ ಭರ್ಜರಿ ಆಫರ್! ಮಿಸ್‌ ಮಾಡಿಕೊಳ್ಳಬೇಡಿ...

ಐಕ್ಯೂ ಫೋನ್‌ಗಳು: ಪ್ರಮುಖ ಇ-ಕಾಮರ್ಸ್ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಸಮ್ಮರ್ ಸೇಲ್ ಆಯೋಜನೆ ಮಾಡಿದ್ದು, ಮೇ 2 ರಿಂದ ಮೇ 7, 2024 ರವರೆಗೆ ಈ ಆಫರ್ ಲಭ್ಯ ಇದೆ. ಅಂದರೆ ಬ್ಯಾಂಕ್‌ ಆಫರ್, ವಿನಿಮಯ ಅಫರ್, ಕೂಲನ್‌ ಸೇರಿದಂತೆ ವಿಶೇಷ ರಿಯಾಯಿತಿಗಳನ್ನು ಈ ಫೋನ್‌ಗಳ ಮೇಲೆ ಪಡೆಯಬಹುದಾಗಿದೆ. ಐಕ್ಯೂ ಸ್ಮಾರ್ಟ್‌ಫೋನ್‌ಗಳು, ಶಕ್ತಿಯುತ ಪ್ರೊಸೆಸರ್‌ಗಳು, ಉನ್ನತ-ಕಾರ್ಯಕ್ಷಮತೆಯ ಕ್ಯಾಮೆರಾಗಳು ಮತ್ತು ನಯವಾದ ವಿನ್ಯಾಸಗಳನ್ನು ಹೊಂದಿವೆ.

ಐಕ್ಯೂ 12 : ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ಬೆಲೆ 52,999 ರೂ.ಗಳಾಗಿದ್ದು, ಈ ವಿಶೇಷ ಸೇಲ್‌ನಲ್ಲಿ ನೀವು 49,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಆದರೆ ಯಾರೆಲ್ಲಾ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುತ್ತಾರೆ ಅವರಿಗೆ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ 144 Hz ರಿಫ್ರೆಶ್‌ ರೇಟ್‌ ಆಯ್ಕೆಯ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 50 MP ಪ್ರಾಥಮಿಕ ಕ್ಯಾಮೆರಾ, 50 MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, 64 MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, ಮತ್ತು 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಇದ್ದು, 120 W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ಐಕ್ಯೂದ ಈ ಫೋನ್‌ಗಳಿಗೆ ಭರ್ಜರಿ ಆಫರ್! ಮಿಸ್‌ ಮಾಡಿಕೊಳ್ಳಬೇಡಿ...

ಐಕ್ಯೂ 11: 16GB RAM, 256 GB ಸ್ಟೋರೇಜ್‌ ಆಯ್ಕೆಯ ಫೋನ್‌ಗೆ ಆಫರ್ ನೀಡಲಾಗಿದ್ದು, 66,999 ರೂ.ಗಳ ಬೆಲೆ ಇರುವ ಫೋನ್‌ ಅನ್ನು ನೀವು ಈಗ 44,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ 2,484 ರೂ.ಗಳ ಇಎಮ್‌ಐ ಆಯ್ಕೆ, ಅಮೆಜಾನ್‌ ಪೇ ಲೇಟರ್‌ ಕ್ರೆಡಿಟ್ ಕಾರ್ಡ್‌ಗಳಲ್ಲಿಯೂ ಆಫರ್ ನೀಡಲಾಗಿದೆ. ಇದರ ಜೊತೆಗೆ ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳ ಮೇಲೆ 2,250 ರೂ. ವರೆಗೆ ರಿಯಾಯಿತಿ ಸಿಗಲಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಮೊಬೈಲ್ ಪ್ಲಾಟ್‌ಫಾರ್ಮ್ ನಲ್ಲಿ ಕೆಲಸ ಮಾಡಲಿದ್ದು, 2K ಸಾಮರ್ಥ್ಯದ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.

ಐಕ್ಯೂ ನಿಯೋ 9 ಪ್ರೊ: 8GB RAM, 128GB ಸ್ಟೋರೇಜ್‌ ಆಯ್ಕೆಯ ಫೋನ್‌ನ ಸಾಮಾನ್ಯ ಬೆಲೆ 39,999 ರೂ.ಗಳಿದ್ದು, ನೀವೀಗ ಇದನ್ನು 33,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಅನ್ನು ನೋ ಕಾಸ್ಟ್‌ ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಬಹುದಾಗಿದೆ. ತಿಂಗಳಿಗೆ 1,898 ರೂ.ಗಳ ಇಎಂಐ ಕಂತು ಆರಂಭ ಆಗಲಿದೆ. ಇದರೊಂದಿಗೆ ಆಯ್ದ ಕ್ರೆಡಿಟ್ ಕಾರ್ಡ್‌ಗಳಲ್ಲಿ 1,250 ರೂ. ವರೆಗೆ ರಿಯಾಯಿತಿ ಸಹ ಸಿಗಲಿದೆ.

ಐಕ್ಯೂದ ಈ ಫೋನ್‌ಗಳಿಗೆ ಭರ್ಜರಿ ಆಫರ್! ಮಿಸ್‌ ಮಾಡಿಕೊಳ್ಳಬೇಡಿ...

ಐಕ್ಯೂ ನಿಯೋ 9 ಪ್ರೊ, ಡ್ಯುಯಲ್ ಚಿಪ್ ಪವರ್ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಮೊಬೈಲ್ ಪ್ಲಾಟ್‌ಫಾರ್ಮ್ ನಲ್ಲಿ ಕಾರ್ಯನಿರ್ವಹಿಸಲಿದ್ದು. ಅಸಾಧಾರಣ ಕಾರ್ಯಕ್ಷಮತೆಯ ಭರವಸೆ ನೀಡುತ್ತದೆ. ಇದರ ಅಸಾಧಾರಣ ಫೀಚರ್ಸ್‌ಗಳಲ್ಲಿ 50 ಮೆಗಾಪಿಕ್ಸೆಲ್‌ ಸೋನಿ IMX920 ಕ್ಯಾಮೆರಾ ಮತ್ತು ಆರಾಮದಾಯಕವಾದ ಹಿಡಿತ ಮತ್ತು ಸೊಗಸಾದ ನೋಟಕ್ಕಾಗಿ ಪ್ರೀಮಿಯಂ ಲೆದರ್ ವಿನ್ಯಾಸವನ್ನು ಹೊಂದಿದೆ.

Best Mobiles in India

English summary
IQOO, IQOO Smartphone, Amazon, IQOO 12, IQOO 11, IQOO Neo 9 Pro, Amazon Summer Sale, IQOO Phones on Amazon, ಐಕ್ಯೂ, ಐಕ್ಯೂಸ್ಮಾರ್ಟ್‌ಫೋನ್‌ಗಳು, ಅಮೆಜಾನ್‌, ಅಮೆಜಾನ್ ಸಮ್ಮರ್ ಸೇಲ್‌, ಅಮೆಜಾನ್‌ನಲ್ಲಿ ಐಕ್ಯೂ ಫೋನ್‌ಗಳು, ಐಕ್ಯೂ 12, ಐಕ್ಯೂ 11, ಐಕ್ಯೂ ನಿಯೋ 9 ಪ್ರೊ,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+