ಖಡಕ್ ಲುಕ್‌ನ ಇರುವ ಈ 12GB RAM ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ವಿವೋ ಮೊಬೈಲ್ ಸಂಸ್ಥೆಯ ಸಬ್ ಬ್ರ್ಯಾಂಡ್ ಆಗಿರುವ ಐಕ್ಯೂ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಕಂಪನಿಯು Z ಸರಣಿಯಲ್ಲಿ ಫೋನ್‌ಗಳು ಬೊಂಬಾಟ್ ಎನಿಸಿಕೊಂಡಿವೆ. ಅದರಲ್ಲಿಯೂ ಮೀಡ್‌ರೇಂಜ್ ಬೆಲೆಯಲ್ಲಿ ಲಭ್ಯ ಇರುವ ಐಕ್ಯೂ Z9s ಪ್ರೊ 5G (iQOO Z9S Pro 5G) ಮೊಬೈಲ್ ರಗಡ್ ಲುಕ್ ಹಾಗೂ ಆಕರ್ಷಕ ಫೀಚರ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅಂದಹಾಗೆ ಈ ಫೋನ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ನಲ್ಲಿ ಇದೀಗ ಗಮನಾರ್ಹ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ.
ಹೌದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಐಕ್ಯೂ Z9s ಪ್ರೊ 5G ( iQOO Z9S Pro 5G ) ಮೊಬೈಲ್ ಶೇ. 15% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 12GB RAM + 256 GB ಸ್ಟೋರೇಜ್ ವೇರಿಯಂಟ್ 28,999 ರೂ. ಗಳ ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಕಾರ್ಡ್ ಮೂಲಕ ಖರೀದಿ ಮಾಡಿದರೆ, ಇನ್ನಷ್ಟು ಆಫರ್ ಬೆಲೆಯಲ್ಲಿ ಖರೀದಿ ಮಾಡಲು ಚಾನ್ಸ್ ಇದೆ.

ಅಂದಹಾಗೆ ಈ ಮೊಬೈಲ್ 5,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದರೊಂದಿಗೆ 8GB RAM + 128 GB, 8GB + 256 GB ಹಾಗೂ 12GB + 256 GB ಆಯ್ಕೆಗಳನ್ನು ಪಡೆದಿದೆ. iQOO Z9S Pro 5G ಫೋನ್ ಅನ್ನು ಅಮೆಜಾನ್ ವೆಬ್‌ಸೈಟ್‌ನಲ್ಲಿ ಭಾರೀ ಡಿಸ್ಕೌಂಟ್ ಬೆಲೆಗೆ ಖರೀದಿಸಬಹುದು. ಇನ್ನುಳಿದಂತೆ ಐಕ್ಯೂ Z9s ಪ್ರೊ 5G ಫೋನಿನ ಇತರೆ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ Z9s ಪ್ರೊ 5G - ಡಿಸ್‌ಪ್ಲೇ ರಚನೆ
ಐಕ್ಯೂ Z9s ಪ್ರೊ ಮೊಬೈಲ್ 6.67 ಇಂಚಿನ ಡಿಸ್‌ಪ್ಲೇ AMOLED ಡಿಸ್‌ಪ್ಲೇ ಪಡೆದಿದ್ದು, 2392 × 1080 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಸಪೋರ್ಟ್ ಹೊಂದಿದೆ.
ಐಕ್ಯೂ Z9s ಪ್ರೊ 5G - ಪ್ರೊಸೆಸರ್ ಹಾಗೂ ಮೆಮೊರಿ
ಐಕ್ಯೂ Z9s ಪ್ರೊ 5G ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಪವರ್ ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿದೆ. ಇದರ ಜೊತೆಗೆ 8GB RAM + 128 GB, 8GB + 256 GB ಹಾಗೂ 12GB + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಐಕ್ಯೂ Z9s ಪ್ರೊ 5G - ಕ್ಯಾಮೆರಾ ಹಾಗೂ ಬ್ಯಾಟರಿ
ಐಕ್ಯೂ Z9s ಪ್ರೊ 5G (iQOO Z9S Pro 5G) ಮೊಬೈಲ್ ಸಹ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸಲ್ ಇದ್ದು, ಇದರ ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸಲ್ ಆಗಿದೆ. ಅಲ್ಲದೇ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಫೋನ್ 5,500 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.


Click it and Unblock the Notifications








