256GB ಸ್ಟೋರೇಜ್ ಇರುವ ಈ ಸ್ಲಿಮ್ ಮೊಬೈಲ್‌ಗೆ ಈಗ ಭಾರೀ ಡಿಸ್ಕೌಂಟ್; ಗ್ರಾಹಕರು ಖುಷ್!
ದೀಪಾವಳಿ ಹಬ್ಬದ ಸಂಭ್ರಮದ ಪ್ರಯುಕ್ತ ಇ ಕಾಮರ್ಸ್ ದಿಗ್ಗಜ ಅಮೆಜಾನ್ ತಾಣವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಬೊಂಬಾಟ್ ಡಿಸ್ಕೌಂಟ್ ಘೋಷಣೆ ಮಾಡಿದೆ. ಅದರಲ್ಲಿಯೂ ಮುಖ್ಯವಾಗಿ ಆಯ್ದ ಕೆಲವು ಮೊಬೈಲ್‌ಗಳಿಗೆ ಭರ್ಜರಿ ರಿಯಾಯಿತಿ ತಿಳಿಸಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ ಬ್ಯಾಂಕ್ ಆಫರ್ ಸಹ ಲಭ್ಯ ಮಾಡಿದೆ. ಆ ಪೈಕಿ ಐಕ್ಯೂ Z9s (iQOO Z9s) ಮೊಬೈಲ್ ಅಚ್ಚರಿ ಎನಿಸುವ ಡಿಸ್ಕೌಂಟ್ ಪಡೆದಿದ್ದು, ಖರೀದಿದಾರರನ್ನು ತನ್ನತ್ತ ಸೆಳೆಯುತ್ತಿದೆ.
ಹೌದು, ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ತಾಣದಲ್ಲಿ ಐಕ್ಯೂ Z9s ( iQOO Z9s ) ಸ್ಮಾರ್ಟ್‌ಫೋನ್ ಶೇ. 21% ರಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 8 GB RAM + 256 GB ವೇರಿಯಂಟ್ 21,998ರೂ. ಗಳ ಆಫರ್ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಖರೀದಿದಾರರು ಇನ್ನಷ್ಟು ರಿಯಾಯಿತಿ ಪಡೆಯಲು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಳ್ಳಬಹುದು.

ಹಾಗೆಯೇ ಐಕ್ಯೂ Z9s (iQOO Z9s) ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 15W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಅಮೆಜಾನ್ ತಾಣದಲ್ಲಿ ಐಕ್ಯೂ Z9s ಆಕರ್ಷಕ ಆಫರ್‌ನಲ್ಲಿ ಖರೀದಿಸಬಹುದು. ಹಾಗಾದರೇ ಐಕ್ಯೂ Z9s ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.
ಐಕ್ಯೂ Z9s - ಫೀಚರ್ಸ್ ಹೀಗಿವೆ
ಐಕ್ಯೂ Z9s (iQOO Z9s) ಮೊಬೈಲ್ 6.67 ಇಂಚಿನ ಡಿಸ್‌ಪ್ಲೇ AMOLED ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 120 Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದುಕೊಂಡಿದೆ. ಇದು 3D ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, 1800 nits ಬ್ರೈಟ್ನೆಸ್ ಸೌಲಭ್ಯ ಸಹ ಒಳಗೊಂಡಿದೆ.
ಐಕ್ಯೂ Z9s ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಪ್ರೊಸೆಸರ್ ಪವರ್ ಸೌಲಭ್ಯ ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ 8 GB RAM + 128 GB, 8 GB + 256 GB ಹಾಗೂ 12 GB + 256 GB ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಐಕ್ಯೂ Z9s ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಇದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಒಳಗೊಂಡಿದೆ. ಅದೇ ರೀತಿ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಐಕ್ಯೂ Z9s ಮೊಬೈಲ್ 5,500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಹಾಗೆಯೇ ಈ ಫೋನ್ ಟೈಟಾನಿಯಂ ಮ್ಯಾಟ್ ಮತ್ತು ಓನಿಕ್ಸ್ ಗ್ರೀನ್ ಕಲರ್‌ನಲ್ಲಿ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇರಲಿದೆ. ಇದು ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಸೌಲಭ್ಯ ಒದಗಿಸುತ್ತದೆ. ಹಾಗೆಯೇ ಇದು IP64 ರೇಟಿಂಗ್ ಸೌಲಭ್ಯ ಪಡೆದಿದ್ದು, ಧೂಳು ಮತ್ತು ನೀರಿನ ಪ್ರತಿರೋಧ ಸೌಲಭ್ಯ ಸಹ ಪಡೆದುಕೊಂಡಿದೆ.


Click it and Unblock the Notifications







