ಕೊಡಾಕ್‌ನ ಈ ಸ್ಮಾರ್ಟ್‌ಟಿವಿ ಕೇವಲ 5,999 ರೂ.ಗಳಿಗೆ ಲಭ್ಯ! 60 Hz ರಿಫ್ರೆಶ್ ರೇಟ್
ಸ್ಮಾರ್ಟ್‌ಟಿವಿಗಳ ವಿಭಾಗದಲ್ಲಿ ಕೊಡಾಕ್ ಸ್ಮಾರ್ಟ್‌ಟಿವಿಗಳು (Kodak Smart TV) ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ. ಈ ಕಾರಣಕ್ಕೆ ಈ ಸ್ಮಾರ್ಟ್‌ಟಿವಿಗಳನ್ನು ಗ್ರಾಹಕರು ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಭಾರೀ ರಿಯಾಯಿತಿಯಲ್ಲಿ ಕೊಡಾಕ್ ಟಿವಿ ಲಭ್ಯವಾಗುತ್ತಿದ್ದು, ನೀವೀಗ ಇದನ್ನು 5,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.
ಹೌದು, ಕೊಡಾಕ್ 60 cm ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಲಿನಕ್ಸ್ ಟಿವಿ 2024 ಆವೃತ್ತಿ 24SE5002 (KODAK 60 cm (24 inch) HD Ready LED Smart Linux TV 2024) ಅನ್ನು ಭಾರೀ ಆಫರ್ ಬೆಲೆಗೆ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಟಿವಿ 20W ಸೌಂಡ್ ಔಟ್‌ಪುಟ್‌ನೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿ ಪ್ರಮುಖ ಫೀಚರ್ಸ್ ಏನು?, ಇದಕ್ಕೆ ನೀಡಲಾದ ಆಫರ್ ಏನು, ಇದರ ಹೊರತಾಗಿ ಬ್ಯಾಂಕ್ ಅಫರ್ ಏನಾದರೂ ಇದೆಯಾ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಕೊಡಾಕ್ 60 cm ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಲಿನಕ್ಸ್ ಟಿವಿ 2024 ಆವೃತ್ತಿ: ಈ ಸ್ಮಾರ್ಟ್‌ಟಿವಿಯನ್ನು ಮೊದಲೇ ತಿಳಿಸಿದಂತೆ ನೀವು 5,999 ರೂ.ಗಳಿಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್‌ಟಿವಿಯ ಸಾಮಾನ್ಯ ದರ 9,999 ರೂ.ಗಳಾಗಿದ್ದು, ಫ್ಲಿಪ್‌ಕಾರ್ಟ್ ಈ ಟಿವಿಗೆ 40% ರಿಯಾಯಿತಿ ಘೋಷಣೆ ಮಾಡಿದೆ. ಆದರೂ ಸಹ ಕೆಲವು ಬ್ಯಾಂಕ್ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.
ಈ ಟಿವಿ ಖರೀದಿ ವೇಳೆ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, 6 ಮತ್ತು 9 ತಿಂಗಳ ಅವಧಿಯ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರಕ್ಕೆ ರಿಯಾಯಿತಿ, ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೂ ನೀವು ಆಫರ್ ಪಡೆಯಬಹುದಾಗಿದೆ. ಈ ಮೂಲಕ ಈ ಅಗ್ಗದ ಬೆಲೆಯ ಟಿವಿಯನ್ನು ಇನ್ನೂ ಕಡಿಮೆ ದರದಲ್ಲಿ ಕೊಂಡುಕೊಳ್ಳಬಹುದು.

ಕೊಡಾಕ್ 60 cm ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಲಿನಕ್ಸ್ ಟಿವಿ 2024 ಆವೃತ್ತಿ ಫೀಚರ್ಸ್: ಈ ಸ್ಮಾರ್ಟ್‌ಟಿವಿ 60 ಸೆಂಟಿಮೀಟರ್ ಅಂದರೆ 24 ಇಂಚಿನ ಎಲ್ ಇ ಡಿ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 300 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ, 178 ಡಿಗ್ರಿ ವೀಕ್ಷಣಾ ಅನುಭವ, 60 Hz
ರಿಫ್ರೆಶ್ ರೇಟ್ ಬೆಂಬಲ ಪಡೆದಿದೆ.
ಇದರೊಂದಿಗೆ ಈ ಸ್ಮಾರ್ಟ್‌ಟಿವಿ ತಲ್ಲೀನಗೊಳಿಸುವ ಆಡಿಯೋ ಅನುಭವವನ್ನು ನೀಡಲಿದೆ. ಅಂದರೆ 20 W ಸ್ಪೀಕರ್ ಆಯ್ಕೆ ಪಡೆದಿದ್ದು,ಮನೆಯ ಸೌಕರ್ಯದಲ್ಲೇ ಥಿಯೇಟರ್ ತರಹದ ಆಡಿಯೊ ಅನುಭವವನ್ನು ಪಡೆಯಬಹುದಾಗಿದೆ. ಅದರಲ್ಲೂ ಶೋಗಳು, ಗೇಮ್ ಗಳು ಅತ್ಯಂತ ನಿಖರ ಮತ್ತು ಇಮ್ಮರ್ಶನ್‌ನೊಂದಿಗೆ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಈ ಟಿವಿ ಶಕ್ತಿಯುತ
ಅಮ್ಲೋಜಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಇನ್ನು ಈ ಕೊಡಾಕ್ ಟಿವಿ ಮಿರಾಕಾಸ್ಟ್ ಫೀಚರ್ಸ್ ಅನ್ನೂ ಸಹ ಪಡೆದಿದೆ. ನಿಮ್ಮ ಮೆಚ್ಚಿನ ಚಲನಚಿತ್ರಗಳು, ಶೋಗಳು, ಮ್ಯೂಸಿಕ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ನಿಂದ ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ದೊಡ್ಡ ಡಿಸ್‌ಪ್ಲೇನಲ್ಲಿ ವೀಕ್ಷಿಸಲು ನಿಮ್ಮ ಫೋನ್‌ನಿಂದ ನಿಮ್ಮಿಷ್ಟದ ಕಂಟೆಂಟ್ ಅನ್ನು ಯಾವುದೇ ಸಮಯದಲ್ಲಿ ಸ್ಟ್ರೀಮ್ ಮಾಡಬಹುದಾಗಿದೆ.

ಇದು ಟಿವಿಗೆ ಮಾತ್ರವಲ್ಲದೆ ವಿವಿಧ ರೀತಿಯಲ್ಲೂ ಬಳಕೆಗೆ ಬರಲಿದೆ. ಜೊತೆಗೆ ತೆಳುವಾದ ಬಜೆಲ್ ವಿನ್ಯಾಸದೊಂದಿಗೆ ಕಾಣಿಸಿಕೊಂಡಿರುವ ಈ ಸ್ಮಾರ್ಟ್‌ಟಿವಿ ದೃಶ್ಯ ಅನುಭವವನ್ನು ಹೆಚ್ಚು ಮಾಡಲಿದೆ. ಹಾಗೆಯೇ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಎಂಟ್ರಿ ನೀಡಲು ಸುಲಭ ಅನುಕೂಲ ಮಾಡಿಕೊಡಲಾಗಿದ್ದು, ನಿಮ್ಮಿಷ್ಟದ ಶೋಗಳನ್ನು ಮನಬಂದಂತೆ ವೀಕ್ಷಣೆ ಮಾಡಬಹುದಾಗಿದೆ.


Click it and Unblock the Notifications








