ಜಸ್ಟ್ 5,999 ರೂ.! ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಆಫರ್.. ಅಗ್ಗದ ಬೆಲೆಗೆ ಈ ಸ್ಮಾರ್ಟ್ ಟಿವಿಗಳು ಸೇಲ್.. ಪಟ್ಟಿ ನೋಡಿ
ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ನೀವು ಈ ಅದ್ಭುತ ಸ್ಮಾರ್ಟ್ ಟಿವಿಯನ್ನು 5,999 ರೂ.ಗೆ ಖರೀದಿಸಬಹುದು! ಹೌದು, ಪ್ರಸ್ತುತ ಆನ್‌ಲೈನ್ ಶಾಪಿಂಟ್ ಸೈಟ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ (Flipkart Big Saving Days Sale) ಆಯೋಜಿಸಿದೆ. ಇಂದಿನಿಂದ (ಮಾರ್ಚ್ 7) ಈ ವಿಶೇಷ ಸೇಲ್ ಪ್ರಾರಂಭವಾಗಿದೆ. ಗ್ರಾಹಕರು ತಮ್ಮ ನೆಚ್ಚಿನ ಸ್ಮಾರ್ಟ್ ಟಿವಿಯನ್ನು (Smart TV) ರಿಯಾಯಿತಿ ದರದಲ್ಲಿ ಮನೆಗೆ ಕೊಂಡೊಯ್ಯಬಹುದು. ಬನ್ನಿ, ಯಾವೆಲ್ಲಾ ಸ್ಮಾರ್ಟ್ ಟಿವಿಗಳಿಗೆ ಆಫರ್ ನೀಡಲಾಗುತ್ತಿದೆ? ಹೊಸ ಬೆಲೆ ಎಷ್ಟು? ಎನ್ನುವುದನ್ನು ತಿಳಿಯೋಣ.
ನೀವು ಅಗ್ಗದ ಸ್ಮಾರ್ಟ್ ಟಿವಿ ಖರೀದಿಸಲು ಬಯಸಿದರೆ, ಈ ವಿಶೇಷ ಸೇಲ್ ಮಿಸ್ ಮಾಡಿಕೊಳ್ಳಬೇಡಿ. ಮಾರ್ಚ್ 13 ರವರೆಗೆ ಕೊಡಾಕ್ ಸ್ಮಾರ್ಟ್ ಟಿವಿಗಳು (Kodak Smart TV) ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತವೆ. 24 ಇಂಚಿನ ಸ್ಮಾರ್ಟ್‌ಟಿವಿಯನ್ನು ಕೇವಲ 5,999 ರೂ.ಗೆ ಖರೀದಿಸಬಹುದು. 32 ಇಂಚಿನ ಟಿವಿ 8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಹಾಗೆಯೇ 40 ಇಂಚಿನ ಟಿವಿ 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯಲ್ಲಿ ಲಭ್ಯವಿರುವ ಡೀಲ್‌ಗಳು ಮತ್ತು ಆಫರ್ ತಿಳಿಯಲು ಮುಂದೆ ಓದಿ.

ಅಗ್ಗದ ಬೆಲೆಗೆ ಲಭ್ಯವಿರುವ ಸ್ಮಾರ್ಟ್ ಟಿವಿಗಳಿವು
- 24 ಇಂಚಿನ HD ಟಿವಿ (24SE5002) = 5,999 ರೂ.
- 32 ಇಂಚಿನ HD ಟಿವಿ (32SE5001BL) = 7,999 ರೂ.
- 32 ಇಂಚಿನ HD ಟಿವಿ (32HDX7XPRO) = 9,799 ರೂ.
- 32 ಇಂಚಿನ HD ಟಿವಿ (329X5051) = 9,999 ರೂ.
- 43 ಇಂಚಿನ FHD ಟಿವಿ (43SE5004BL) = 14,499 ರೂ.
- 40 ಇಂಚಿನ FHD ಟಿವಿ (409X5061) = 14,999 ರೂ.
- 42 ಇಂಚಿನ FHD ಟಿವಿ (429X5071) = 15,499 ರೂ.
- 43 ಇಂಚಿನ FHD ಟಿವಿ (439X5081) = 16,999 ರೂ.
- 43 ಇಂಚಿನ 4K QLED ಟಿವಿ (43MT5055) = 20,999 ರೂ.
- 50 ಇಂಚಿನ 4K ಟಿವಿ (50CAPROGT5012) = 24,999 ರೂ.
- 50 ಇಂಚಿನ 4K QLED ಟಿವಿ (50MT5011) = 26,499 ರೂ.
- 55 ಇಂಚಿನ 4K QLED ಟಿವಿ (55MT5022) = 30,499 ರೂ.
- 65 ಇಂಚಿನ 4K QLED ಟಿವಿ (65MT5033) = 42,999 ರೂ.
ಕೊಡಾಕ್ ಸ್ಮಾರ್ಟ್‌ಟಿವಿಯನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂದಿನಿಂದ ಪ್ರಾರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ವಿಶೇಷ ಮಾರಾಟದಲ್ಲಿ ಈ ಟಿವಿಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಮಾರ್ಚ್ 13 ರವರೆಗೆ, ಕಂಪನಿಯು ಟಿವಿಗಳ ಮೇಲೆ ರಿಯಾಯಿತಿಗಳು ಮತ್ತು ಆಫರ್ ನೀಡುತ್ತದೆ.

ಕೊಡಾಕ್ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು
ಕೊಡಾಕ್‌ನ QLED ಟಿವಿಯು ಗೂಗಲ್ ಟಿವಿ ಓಎಸ್ ಹೊಂದಿದೆ. ಇದು ಸರಾಗವಾಗಿ ಕೆಲಸ ನಿರ್ವಹಿಸುತ್ತದೆ. ನೀವು Gmail ಖಾತೆಗೆ ಲಿಂಕ್ ಮಾಡುವ ಮೂಲಕ ಇತರೆ ವೈಶಿಷ್ಟ್ಯಗಳನ್ನು ಸಹ ಬಳಸಬಹುದು. ಈ ಅಗ್ಗದ ಟಿವಿಗಳು DTS ಧ್ವನಿ, 1.1 ಬಿಲಿಯನ್ ಬಣ್ಣಗಳು, ಡಾಲ್ಬಿ ಅಟ್ಮಾಸ್ ಮತ್ತು HDR10 ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಇದು 2GB RAM ಮತ್ತು 16GB ಆಂತರಿಕ ಸ್ಟೋರೇಜ್ ಆಯ್ಕೆ ಹೊಂದಿದೆ.
ಕೊಡಾಕ್ SE ಸರಣಿಯ ಟಿವಿಯಲ್ಲಿ 24 ಇಂಚಿನ, 32 ಇಂಚಿನ ಮತ್ತು 43 ಇಂಚಿನ ರೂಪಾಂತರಗಳನ್ನು ಖರೀದಿಸಬಹುದು. ಇದು 30W ವರೆಗಿನ ಶಕ್ತಿಶಾಲಿ ಆಡಿಯೋ ಅನುಭವವನ್ನು ಒದಗಿಸುತ್ತದೆ. ಹಾಗೆಯೇ 4GB ಸ್ಟೋರೇಜ್ ಆಯ್ಕೆ ಹೊಂದಿದೆ. ಈ ಟಿವಿಗಳು ಯೂಟ್ಯೂಬ್ (YouTube), ಪ್ರೈಮ್ ವಿಡಿಯೋ (Prime Video), ಜೀ5 (Zee5) ಸೇರಿದಂತೆ ಹಲವು ಅಪ್ಲಿಕೇಶನ್‌ಗಳೊಂದಿಗೆ ಬರುತ್ತವೆ.
ನಿವು ಕೊಡಾಕ್ 9XPRO ಸರಣಿಯ ಹೆಚ್‌ಡಿ ರೆಡಿ ಮತ್ತು ಫುಲ್ ಹೆಚ್‌ಡಿ ಎರಡೂ ಟಿವಿಗಳನ್ನು ಖರೀದಿಸಬಹುದು. ಈ ಅಗ್ಗದ ಸ್ಮಾರ್ಟ್ ಟಿವಿಗಳು ರಿಯಲ್‌ಟೆಕ್ ಪ್ರೊಸೆಸರ್ ಹೊಂದಿದೆ. ಹಾಗೆಯೇ ಆಂಡ್ರಾಯ್ಡ್ 11 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತವೆ. ಈ ಆಂಡ್ರಾಯ್ಡ್ ಟಿವಿಯಲ್ಲಿ ಗೂಗಲ್ ಅಸಿಸ್ಟೆಂಟ್ ಮತ್ತು ಕ್ರೋಮ್‌ಕಾಸ್ಟ್ ಬೆಂಬಲವೂ ಲಭ್ಯವಿದೆ. ಇದು ನೆಟ್‌ಫ್ಲಿಕ್ಸ್ ಸೇರಿದಂತೆ OTT ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ.


Click it and Unblock the Notifications








