ಕೈಗೆಟಕುವ ಬೆಲೆಯಲ್ಲಿ ಶಿಯೋಮಿ 5A ಪ್ರೊ 32 ಸ್ಮಾರ್ಟ್‌ಟಿವಿ ಬಿಡುಗಡೆ!

|

ಭಾರತದ ಟೆಕ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ಪ್ರತಿಷ್ಠಿತ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಶಿಯೋಮಿ ಕಂಪೆನಿಯ ಸ್ಮಾರ್ಟ್‌ಟಿವಿಗಳು, ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಉತ್ತಮವಾದ ಮಾರುಕಟ್ಟೆಯಿದೆ. ಜೊತೆಗೆ ಶಿಯೋಮಿ ಬ್ರ್ಯಾಂಡ್‌ನ ಉತ್ಪನ್ನಗಳಿಗೆ ಭಾರತದಲ್ಲಿ ಸಾಕಷ್ಟು ಬೇಡಿಕೆ ಕೂಡ ಇದೆ. ಇದೇ ಕಾರಣಕ್ಕೆ ಶಿಯೋಮಿ ಕಂಪೆನಿ ಹೊಸ ಮಾದರಿಯ ಡಿವೈಸ್‌ಗಳನ್ನು ಭಾರತದಲ್ಲಿ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಶಿಯೋಮಿ ಟಿವಿ 5A ಪ್ರೊ 32 ಅನ್ನು ಲಾಂಚ್‌ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ಹೊಸ ಶಿಯೋಮಿ 5A ಪ್ರೊ 32 ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ಬಜೆಟ್‌ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ ಆಗಿದೆ. ಇದು 24W ಸ್ಪೀಕರ್ ಸೆಟಪ್ ಮತ್ತು ಡಾಲ್ಬಿ ಆಡಿಯೋ ಹಾಗೂ DTS:X ತಂತ್ರಜ್ಞಾನವನ್ನು ಬೆಂಬಲಿಸುವ ಡ್ಯುಯಲ್‌ ಸ್ಪೀಕರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ ಶಿಯೋಮಿಯ ಕಂಟೆಂಟ್ ಅಗ್ರಿಗೇಟರ್ ಪ್ಯಾಚ್‌ವಾಲ್ UI ಅನ್ನು ಹೊಂದಿದೆ. ಹಾಗಾದ್ರೆ ಶಿಯೋಮಿ 5A ಪ್ರೊ 32 ಸ್ಮಾರ್ಟ್‌ಟಿವಿ ವಿಶೇಷತೆ ಏನು? ಇದರ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ 5A ಪ್ರೊ 32

ಶಿಯೋಮಿ 5A ಪ್ರೊ 32 ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪ್ರೀಮಿಯಂ ಮೆಟಾಲಿಕ್ ಕೇಸಿಂಗ್ ಮತ್ತು ಬೆಜೆಲ್-ಲೆಸ್ ಡಿಸ್‌ಪ್ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇ 1366x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ ವಿವಿಡ್ ಪಿಕ್ಚರ್ ಇಂಜಿನ್ ಬೇಕ್-ಇನ್ ಆಗಿದೆ. ಇದು ಕ್ವಾಡ್-ಕೋರ್ ಕಾರ್ಟೆಕ್ಸ್ A55 CPU ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 1.5GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಆಟೋ ಲೋ ಲೇಟೆನ್ಸಿ ಮೋಡ್ ಅನ್ನು ಒಳಗೊಂಡಿದೆ.

ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ 24W ಸ್ಪೀಕರ್ ಸೆಟಪ್ ಮತ್ತು ಡಾಲ್ಬಿ ಆಡಿಯೋ ಮತ್ತು DTS:Xಟೆಕ್ನಾಲಜಿ ಬೆಂಬಲದೊಂದಿಗೆ ಡ್ಯುಯಕ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ ಟಿವಿ 11 ಬೆಂಬಲದೊಂದಿಗೆ ರನ್‌ ಆಘಲಿದ್ದು, ಶಿಯೋಮಿಯ ಕಂಟೆಂಟ್ ಅಗ್ರಿಗೇಟರ್ ಪ್ಯಾಚ್‌ವಾಲ್ UI (ಆವೃತ್ತಿ 4) ಸಹ ಸ್ವತಂತ್ರ ಸ್ಕಿನ್ ಆಗಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 2x HDMI 2.0 (1x ARC), 2x USB, ಈಥರ್ನೆಟ್, AV ಮತ್ತು ಹೆಡ್‌ಫೋನ್ ಜ್ಯಾಕ್ ಜೊತೆಗೆ ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ 5.0 ಬೆಂಬಲಿಸಲಿದೆ. ಜೊತೆಗೆ "OK Google" ಧ್ವನಿ ಮತ್ತು ಕ್ರೋಮಾಕಾಸ್ಟ್‌ ಇಂಟರ್‌ಬಿಲ್ಟ್‌ ಬೆಂಬಲವನ್ನು ಕೂಡ ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ ಸ್ಮಾರ್ಟ್‌ TV 5A ಪ್ರೊ 32 ಭಾರತದಲ್ಲಿ 16,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಟಿವಿ ಮಿ.ಕಾಮ್‌, ಮಿ ಹೋಮ್ಸ್‌, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ರಿಟೇಲ್ ಸ್ಟೋರ್‌ಗಳಿಂದ ಲಭ್ಯವಾಗಲಿದೆ. ಸದ್ಯ ಈ ಸ್ಮಾರ್ಟ್‌ಟಿವಿ ಫಸ್ಟ್‌ ಸೇಲ್‌ ಶೀಘ್ರದಲ್ಲೇ ಬರಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಆದರೆ ಸ್ಮಾರ್ಟ್‌ಟಿವಿಯ ಫಸ್ಟ್‌ ಸೇಳ್‌ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಶಿಯೋಮಿ

ಇನ್ನು ಶಿಯೋಮಿ ಕಂಪೆನಿ ಈಗಾಗಲೇ ಶಿಯೋಮಿ ಸ್ಮಾರ್ಟ್ ಟಿವಿ 5A ಸರಣಿಯನ್ನು ಪರಿಚಯಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿ ಮೂರು ವೇರಿಯಂಟ್‌ಗಳ ಆಯ್ಕೆ ಪಡೆದಿದೆ. ಇವುಗಳು ಕ್ರಮವಾಗಿ 32-ಇಂಚಿನ, 40-ಇಂಚಿನ ಮತ್ತು 43-ಇಂಚಿನ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಬೆಜೆಲ್-ಲೆಸ್ ಮೆಟಾಲಿಕ್ ವಿನ್ಯಾಸದೊಂದಿಗೆ ಫುಲ್‌ HD ಡಿಸ್‌ಪ್ಲೇ ಆಯ್ಕೆ ಅನ್ನು ಪಡೆದಿದೆ. ಹಾಗೆಯೇ ಇದು ಕಾರ್ಟೆಕ್ಸ್ A55 ಸಿಸ್ಟಮ್-ಆನ್-ಚಿಪ್‌ನಿಂದ 1.5GB RAM ಅನ್ನು ಹೊಂದಿದೆ, ಇದು 50% ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Best Mobiles in India

English summary
Xiaomi Smart TV 5A Pro 32 (32-inch) has been launched in India at a highly aggressive price of Rs 16,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X