Home
Deal of the day

ಡ್ಯುಯಲ್‌ ಸ್ಕ್ರೀನ್‌ ಇರುವ ಈ ನೂತನ ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

ದೇಶಿಯ ಮೊಬೈಲ್‌ ಬ್ರ್ಯಾಂಡ್‌ ಎಂದು ಗುರುತಿಸಿಕೊಂಡಿರುವ ಲಾವಾ (Lava) ಸಂಸ್ಥೆಯು ಭಿನ್ನ ಶ್ರೇಣಿಯಲ್ಲಿ ಮೊಬೈಲ್‌ಗಳನ್ನು ಪರಿಚಯಿಸಿದೆ. ಆ ಪೈಕಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಲಾವಾ ಅಗ್ನಿ 3 (Lava Agni 3 5G) ಫೋನ್‌ ಸ್ಟೈಲಿಶ್‌ ಲುಕ್‌ ಹಾಗೂ ಬೊಂಬಾಟ್‌ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಸಖತ್ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಸಂತಸ ಎನಿಸಿದೆ

ಹೌದು, ಇ ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ತಾಣದಲ್ಲಿ ಲಾವಾ ಅಗ್ನಿ 3 (Lava Agni 3 5G) ಸ್ಮಾರ್ಟ್‌ಫೋನ್‌ ಶೇ. 18% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 8GB + 128GB ವೇರಿಯಂಟ್‌ 20,999ರೂ. ಗಳ ಆಫರ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಖರೀದಿದಾರರು ಇನ್ನಷ್ಟು ರಿಯಾಯಿತಿ ಪಡೆಯಲು ಲಭ್ಯ ಇರುವ ಬ್ಯಾಂಕ್‌ ಆಫರ್‌ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಳ್ಳಬಹುದು.

ಡ್ಯುಯಲ್‌ ಸ್ಕ್ರೀನ್‌ ಇರುವ ಈ ನೂತನ ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

ಅಂದಹಾಗೆ ಈ ಮೊಬೈಲ್‌ 4700 mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 66W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಅಮೆಜಾನ್‌ ತಾಣದಲ್ಲಿ ಲಾವಾ ಅಗ್ನಿ 3 ಫೋನ್‌ ಅನ್ನು ಆಕರ್ಷಕ ಆಫರ್‌ನಲ್ಲಿ ಖರೀದಿಸಬಹುದು. ಹಾಗಾದರೇ ಲಾವಾ ಅಗ್ನಿ 3 ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಲಾವಾ ಅಗ್ನಿ 3 ಫೋನ್‌ - ಫೀಚರ್ಸ್‌

ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್‌ ಡ್ಯುಯಲ್‌ ಡಿಸ್‌ಪ್ಲೇ ಸೆಟ್‌ಅಪ್‌ ಒಳಗೊಂಡಿದೆ. ಇದರ ಪ್ರಾಥಮಿಕ ಡಿಸ್‌ಪ್ಲೇಯು 6.78 ಇಂಚಿನ ಅಮೋಲೆಡ್‌ ಮಾದರಿಯಲ್ಲಿ ಇದ್ದು, ಇದು 1.5K ರೆಸಲ್ಯೂಶನ್ ಕರ್ವ್ಡ್ AMOLED ಡಿಸ್‌ಪ್ಲೇ ಆಗಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಹಾಗೆಯೇ ಇದರ ಸೆಕೆಂಡರಿ ಡಿಸ್‌ಪ್ಲೇಯು 1.74 ಇಂಚಿನ AMOLED ಸ್ಕ್ರೀನ್ ಆಗಿದ್ದು, ಫೋನಿನ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ನಲ್ಲಿ ನೀಡಲಾಗಿದೆ.

ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್ ಕೂಡಾ ಇದೆ. ಹಾಗೆಯೇ ಈ ಮೊಬೈಲ್‌ 8 GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿದೆ. ಅಲ್ಲದೇ ಲಾವಾ ಅಗ್ನಿ 3 ಫೋನ್ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್ (ಇತ್ತೀಚಿನ ಆಪಲ್‌ ಐಫೋನ್‌ನಲ್ಲಿ ಇರುವಂತೆ) ಅನ್ನು ಸಹ ಹೊಂದಿದೆ.

ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್‌ ಮೂರು ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಅಲ್ಲದೇ ಇದು OIS ಸೌಲಭ್ಯ ಸಹ ಪಡೆದಿದೆ. ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್‌ ಆಗಿದೆ. ಇನ್ನು ಈ ಫೋನ್‌ 4700 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಸಹ ಹೊಂದಿದೆ.

ಈ ಫೋನ್‌ 8GB + 128GB ವೇರಿಯಂಟ್‌ ಹಾಗೂ 8GB + 256GB ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯ ಇದೆ. ಇನ್ನು ಈ ಮೊಬೈಲ್‌ ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಆಸಕ್ತ ಖರೀದಿದಾರರು ಈ ಫೋನ್‌ ಅನ್ನು ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಖರೀದಿ ಮಾಡಬಹುದು.

Best Mobiles in India

English summary
Lava Agni 3 5G Price Drop on Amazon India. Explore mobile discount price, offer price, other specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+