Home
Deal of the day

MacBook Air: ಭಾರತದಲ್ಲಿ ಮ್ಯಾಕ್‌ಬುಕ್ ಏರ್ M2 ಬೆಲೆ ಕಡಿತ, ಅಷ್ಟಿಷ್ಟಲ್ಲ ಬರೋಬ್ಬರಿ 20,000 ರಿಯಾಯಿತಿ!

ಆಪಲ್‌ ಡಿವೈಸ್‌ಗಳು (Apple device) ಸಾಮಾನ್ಯವಾಗಿ ದುಬಾರಿ ಬೆಲೆ ಹೊಂದಿರುತ್ತವೆ. ಈ ಕಾರಣಕ್ಕೆ ಸಾಕಷ್ಟು ಜನರಿಗೆ ಇವುಗಳನ್ನು ಖರೀದಿ ಮಾಡಲು ಆಗುವುದಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಪ್ರಮುಖ ಇ ಕಾಮರ್ಸ್‌ ಸೈಟ್‌ಗಳು ಹಾಗೂ ಆಪಲ್‌ನ ಅಧಿಕೃತ ಸೈಟ್ ನಲ್ಲಿ ಆಫರ್ ಘೋ‍ಷಣೆ ಮಾಡುವ ಮೂಲಕ ಆಫರ್ ಬೆಲೆಗೆ ಈ ಡಿವೈಸ್‌ಗಳು ಜನರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಅದರಂತೆ ಈಗ ಆಪಲ್‌ ಅಧಿಕೃತವಾಗಿ ಮ್ಯಾಕ್‌ಬುಕ್ ಏರ್ M2 (MacBook Air M2) ಬೆಲೆ ಕಡಿತ ಮಾಡಿದೆ.

ಹೌದು, ಭಾರತದಲ್ಲಿ ಇದೀಗ ಮ್ಯಾಕ್‌ಬುಕ್ ಏರ್ M2 ಬೆಲೆ ಕಡಿತ ಮಾಡಲಾಗಿದೆ. ಈ ಮೂಲಕ ನೀವು ಬರೋಬ್ಬರಿ 20,000 ರಿಯಾಯಿತಿ ಪಡೆಯಬಹುದಾಗಿದೆ. ಆಪಲ್ ಇತ್ತೀಚಿನ ಏರ್ ಮಾದರಿಯನ್ನು M3 ಚಿಪ್‌ಸೆಟ್‌ನೊಂದಿಗೆ ಘೋಷಣೆ ಮಾಡಿದ್ದು, 13 ಇಂಚಿನ ಮ್ಯಾಕ್‌ಬುಕ್ ಏರ್ M2 (MacBook Air M2) ಮಾದರಿಯ ಬೆಲೆಯನ್ನು ಈ ಮೂಲಕ ಕಡಿಮೆ ಮಾಡಿದೆ. ಹಾಗಿದ್ರೆ, ಬನ್ನಿ ಇದರ ಆಫರ್ ಬೆಲೆ ಎಷ್ಟು?, ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.

ಭಾರತದಲ್ಲಿ ಮ್ಯಾಕ್‌ಬುಕ್ ಏರ್ M2 ಬೆಲೆ ಕಡಿತ, ಅಷ್ಟಿಷ್ಟಲ್ಲ ಬರೋಬ್ಬರಿ 20,000...

ಮ್ಯಾಕ್‌ಬುಕ್ ಏರ್ M2 ಬೆಲೆ ಕಡಿತ: ಕಂಪನಿಯು ಬಹಿರಂಗಪಡಿಸಿದ ಮಾಹಿತಿ ಪ್ರಕಾರ, ಮ್ಯಾಕ್‌ಬುಕ್ ಏರ್ M2 ಅಧಿಕೃತ ಆಪಲ್ ಸ್ಟೋರ್‌ಗಳಲ್ಲಿ 20,000 ರೂ.ಗಳ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಂಡಿದೆ. ಈ ಮೂಲಕ ನೀವು ಈ ಲ್ಯಾಪ್‌ಟಾಪ್‌ ಅನ್ನು 99,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 1,19,900 ರೂ.ಗಳಾಗಿದೆ. ವಿಶೇಷ ವಿಷಯ ಏನೆಂದರೆ ಶಿಕ್ಷಣ ಕೊಡುಗೆಯ ಭಾಗವಾಗಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಧಿಕೃತ ಆಪಲ್‌ ಸ್ಟೋರ್‌ ಮೂಲಕ ಇದನ್ನು 89,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಇನ್ನು ಹೊಸ ಮಾದರಿ M3 ಅನ್ನು ಘೋಷಣೆ ಮಾಡಿದ ಬೆನ್ನಲ್ಲೇ ಈ ಹಳೆಯ ಮಾದರಿಗೆ ಇಷ್ಟು ಪ್ರಮಾಣದ ಆಫರ್ ನೀಡಲಾಗಿದೆ. ಹೊಸ ಮಾದರಿ ಬಗ್ಗೆ ಹೇಳುವುದಾದರೆ 13 ಇಂಚಿನ ಮ್ಯಾಕ್‌ಬುಕ್ ಏರ್ 1,14,900 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಅದಾಗ್ಯೂ ಶಿಕ್ಷಣ ಉದ್ದೇಶಕ್ಕಾಗಿ ಬಳಕೆ ಮಾಡಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದನ್ನು ಖರೀದಿ ಮಾಡಲು ಮುಂದಾದರೆ 1,04,900 ರೂ. ಗಳ ಆಫರ್ ಬೆಲೆಗೆ ಲಭ್ಯ ಇದೆ. ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರ್ಚ್ 4 ರಿಂದ M3 ಅನ್ನು ಆರ್ಡರ್ ಮಾಡಬಹುದು.

ಭಾರತದಲ್ಲಿ ಮ್ಯಾಕ್‌ಬುಕ್ ಏರ್ M2 ಬೆಲೆ ಕಡಿತ, ಅಷ್ಟಿಷ್ಟಲ್ಲ ಬರೋಬ್ಬರಿ 20,000...

ಆಪಲ್ ಮ್ಯಾಕ್‌ಬುಕ್ ಏರ್ M2 ಆಫರ್ ಬೆಲೆಗೆ ಖರೀದಿಸಲು ಯೋಗ್ಯವಾಗಿದೆಯೇ? : ನಿಗದಿತ ಬಜೆಟ್‌ ಇದ್ದರೆ ಮ್ಯಾಕ್‌ಬುಕ್ ಏರ್ M2 ಅನ್ನು ಖರೀದಿ ಮಾಡಬಹುದು. ಆದರೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನ್ವಯವಾಗುವ ಆಪಲ್‌ನ ಶಿಕ್ಷಣ ಕೊಡುಗೆ ನೀತಿಯಡಿಯಲ್ಲಿ 1,04,900ರೂ.ಗಳಿಗೆ ಲಭ್ಯವಿರುವುದರಿಂದ ಹೆಚ್ಚಿನ ಹಣ ನಿಮ್ಮ ಬಳಿ ಏನಾದರೂ ಇದ್ದರೆ ಹೊಸ ಮಾದರಿಯನ್ನು ಈ ಆಫರ್ ಮೂಲಕ ಖರೀದಿ ಮಾಡಬಹುದಾಗಿದೆ. ಆದರೆ, ನೀವು ಅಧಿಕೃತ ಶಾಲಾ ಐಡಿ ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಇನ್ನು ಮ್ಯಾಕ್‌ಬುಕ್ ಏರ್ M2 ಹಗುರ ವಿನ್ಯಾಸ ಹೊಂದಿದ್ದು, ಇದು ಟ್ರಿಮ್ ಮಾಡಿದ ಬೆಜೆಲ್‌ಗಳೊಂದಿಗೆ ಪ್ರಕಾಶಮಾನವಾದ ಮತ್ತು ದೊಡ್ಡ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ ಆಪಲ್‌ನ ಹೆಚ್ಚು ಶಕ್ತಿಶಾಲಿ M2 ಪ್ರೊಸೆಸರ್‌ನಿಂದ ಈ ಡಿವೈಸ್‌ ಕಾರ್ಯನಿರ್ವಹಿಸಲಿದ್ದು, ಇದುವರೆಗಿನ ವಿಮರ್ಶೆಗಳ ಪ್ರಕಾರ ಈ ಲ್ಯಾಪ್‌ಟಾಪ್ ನಿಯಮಿತ ಕಾರ್ಯಗಳಿಗೆ ಉತ್ತಮವಾಗಿದೆ ಎನ್ನಲಾಗಿದೆ. ಆದರೆ, ತೀವ್ರವಾದ ಕೆಲಸದ ಹೊರೆಗಳನ್ನು ನಿಭಾಯಿಸಲು ಸ್ವಲ್ಪ ಕಷ್ಟವಾಗುತ್ತದಂತೆ.

ಭಾರತದಲ್ಲಿ ಮ್ಯಾಕ್‌ಬುಕ್ ಏರ್ M2 ಬೆಲೆ ಕಡಿತ, ಅಷ್ಟಿಷ್ಟಲ್ಲ ಬರೋಬ್ಬರಿ 20,000...

ಈ ಮ್ಯಾಕ್‌ಬುಕ್ ಏರ್ M2 ಮಾದರಿಯು 1080p ಕ್ಯಾಮೆರಾವನ್ನು ಹೊಂದಿದ್ದು, ಬಳಕೆದಾರರು ಈ ಮಾದರಿಯೊಂದಿಗೆ ಸಾಕಷ್ಟು ಉತ್ತಮ ಗುಣಮಟ್ಟದ ಕ್ಯಾಮರಾ ಅನುಭವವನ್ನು ಪಡೆಯಬಹುದಾಗಿದೆ. ಇನ್ನು ಈ 2022 ಮಾದರಿಯಲ್ಲಿ ಯಾವುದೇ ಸ್ಪೀಕರ್ ಗ್ರಿಲ್‌ಗಳಿಲ್ಲ ಮತ್ತು ಕಂಪನಿಯು ಅಚ್ಚುಕಟ್ಟಾಗಿ ನೋಟವನ್ನು ನೀಡಲು ಕೀಬೋರ್ಡ್ ಮತ್ತು ಡಿಸ್‌ಪ್ಲೇ ನಡುವೆ ಎರಡು ಟ್ವೀಟರ್‌ಗಳು ಮತ್ತು ಎರಡು ವೂಫರ್‌ಗಳನ್ನು ಇರಿಸಿದೆ. ಡಾಲ್ಬಿ ಅಟ್ಮಾಸ್ ಬೆಂಬಲದ ಜೊತೆಗೆ ಪ್ರಾದೇಶಿಕ ಆಡಿಯೊ ತಂತ್ರಜ್ಞಾನದ ಬೆಂಬಲ ಪಡೆದಿದೆ.

Best Mobiles in India

English summary
MacBook Air M2 price cut in India now. Through this you can get a discount of 20,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+