Home
Deal of the day

256GB ಸ್ಟೋರೇಜ್‌ನ ಈ ಫೋನಿಗೆ ಭಾರೀ ಡಿಸ್ಕೌಂಟ್‌!..ಸ್ನ್ಯಾಪ್‌ಡ್ರಾಗನ್‌ 8 Gen 3 ಪ್ರೊಸೆಸರ್‌ ಇದೆ!

ಆನ್‌ಲೈನ್‌ ಶಾಪಿಂಗ್‌ ಪ್ರಿಯರನ್ನು ಸೆಳೆಯಲು ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್‌ ಆಯೋಜಿಸಿ ಉತ್ಪನ್ನಗಳಿಗೆ ಬಿಗ್ ಡಿಸ್ಕೌಂಟ್‌ ಲಭ್ಯ ಮಾಡಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳು ಬಲು ಆಕರ್ಷಕ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಹೊಸ ಫೋನ್‌ ಖರೀದಿಸುವ ಗ್ರಾಹಕರನ್ನು ಸೆಳೆಯುವಂತಿವೆ. ಆ ಪೈಕಿ ಪೊಕೊ ಸಂಸ್ಥೆಯು ಪೊಕೊ F6 (POCO F6 5G) ಮೊಬೈಲ್‌ ಜಬರ್ದಸ್ತ್‌ ಡಿಸ್ಕೌಂಟ್‌ ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಪೊಕೊ F6 (POCO F6 5G) ಫೋನ್‌ ಶೇ. 29% ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 8GB + 256 GB ವೇರಿಯಂಟ್‌ 23,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಗ್ರಾಹಕರು ಲಭ್ಯ ಇರುವ ಬ್ಯಾಂಕ್‌ ಆಫರ್‌ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಂಡರೆ, ಈ ಮೊಬೈಲ್‌ ಅನ್ನು ಇನ್ನಷ್ಟು ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಸಿಗಲಿದೆ.

256GB ಸ್ಟೋರೇಜ್‌ನ ಈ ಫೋನಿಗೆ ಭಾರೀ ಡಿಸ್ಕೌಂಟ್‌!..ಸ್ನ್ಯಾಪ್‌ಡ್ರಾಗನ್‌ 8 Gen 3!

ಅಂದಹಾಗೆ ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದೆ. ಜೊತೆಗೆ 8GB + 256GB, 8GB + 256GB ಹಾಗೂ 12GB + 512GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಹಾಗಾದರೇ ಪೊಕೊ F6 (POCO F6 5G) ಮೊಬೈಲ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಪೊಕೊ F6 - ಫೀಚರ್ಸ್ ಹೀಗಿವೆ

ಪೊಕೊ F6 (POCO F6 5G) ಮೊಬೈಲ್‌ 6.67 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2712 x 1220 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇಯು 2400 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದ್ದು, ಇದರ ಜೊತೆಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಸಹ ಇದೆ. ಅಲ್ಲದೇ HRD+, ಡಾಲ್ಬಿ ವಿಷನ್‌ ಆಯ್ಕೆಗಳು ಇವೆ.

ಪೊಕೊ F6 ಮೊಬೈಲ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 OS ಸಪೋರ್ಟ್‌ ಸಹ ಇದೆ. ಇನ್ನು ಈ ಮೊಬೈಲ್‌ ಮೂರು ವೇರಿಯಂಟ್‌ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB + 256 GB, 8GB + 256 GB ಹಾಗೂ 12GB + 512 GB ಸ್ಟೋರೇಜ್‌ ವೇರಿಯಂಟ್‌ ಸಾಮರ್ಥ್ಯದ ಆಯ್ಕೆಯಲ್ಲಿ ಇವೆ.

ಪೊಕೊ F6 ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಸಾಮರ್ಥ್ಯದಲ್ಲಿ ಇದೆ. ಇನ್ನು ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಅನ್ನು ಪಡೆದಿದೆ. ಇದರ ಜೊತೆಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 20 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದೆ.

ಪೊಕೊ F6 ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 90W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ನೀಡಲಿದೆ. ಅಲ್ಲದೇ 120W ಫಾಸ್ಟ್‌ ಚಾರ್ಜಿಂಗ್ ಅಡಾಪ್ಟರ್ ಸೌಲಭ್ಯ ಇದ್ದು, 35 ನಿಮಿಷಗಳಲ್ಲಿ ಬ್ಯಾಟರಿ ಪೂರ್ಣ 100% ಚಾರ್ಜ್ ಮಾಡಲಿದೆ ಎನ್ನಲಾಗಿದೆ.

ಪೊಕೊ F6 ಮೊಬೈಲ್‌ 8GB + 256GB ವೇರಿಯಂಟ್‌, 8GB + 256GB ವೇರಿಯಂಟ್‌ ಹಾಗೂ 12GB + 512GB ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ. ಅಲ್ಲದೇ ಟೈಟಾನಿಮ್‌ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Huge Price Drop on POCO F6 5G on Flipkart Diwali Sale. check out offer price, discount, camera and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+