ಭಾರೀ ಡಿಸ್ಕೌಂಟ್‌ನಲ್ಲಿ iPhone 13 ಖರೀದಿಸಬೇಕೆ?..ಇಲ್ಲಿದೆ ನೋಡಿ ಬೆಸ್ಟ್ ಆಫರ್!
ಅಮೆಜಾನ್ ತಾಣದಲ್ಲಿ ಈಗ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಮಾರಾಟ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಈ ಸೇಲ್ ಮೇಳದಲ್ಲಿ ಮುಖ್ಯವಾಗಿ ಮೊಬೈಲ್‌ಗಳು ಅತ್ಯುತ್ತಮ ರಿಯಾಯಿತಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಫೋನ್ ಖರೀದಿಸುವ ಗ್ರಾಹಕರನ್ನು ಸೆಳೆಯುತ್ತಿದೆ. ಸದ್ಯ ಅಮೆಜಾನ್ ವೆಬ್‌ಸೈಟ್‌ನಲ್ಲಿ ಆಪಲ್ (Apple) ಸಂಸ್ಥೆಯ ಐಫೋನ್ 13 (iPhone 13) ಭಾರೀ ಇಳಿಕೆಯ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಆಪಲ್ ಐಫೋನ್ 13 (iPhone 13) ಮೊಬೈಲ್ ಶೇ. 30% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 128 GB ಸ್ಟೋರೇಜ್ ವೇರಿಯಂಟ್ 41,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಹೆಚ್ಚುವರಿಯಾಗಿ ಎಸ್‌ಬಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿ ಮಾಡಿದರೆ, 1250ರೂ. ಗಳ ಡಿಸ್ಕೌಂಟ್ ಸಹ ಪಡೆದುಕೊಳ್ಳಬಹುದಾಗಿದೆ.

ಆಪಲ್ ಐಫೋನ್ 13 ಮೊಬೈಲ್ ಮೀಡ್‌ನೈಟ್ ಬ್ಲ್ಯಾಕ್, ರೆಡ್, ಬ್ಲೂ, ಗ್ರೀನ್, ಪಿಂಕ್ ಹಾಗೂ ಸ್ಟಾರ್ ಲೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಈ ಫೋನ್ iOS 14 ಓಎಸ್ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಮೊಬೈಲ್ 256GB ಹಾಗೂ 512GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿಯೂ ಲಭ್ಯ. ಹಾಗಾದರೇ ಐಫೋನ್ 13 (iPhone 13) ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಫೋನ್ 13 ಮೊಬೈಲ್ ಫೀಚರ್ಸ್ ಮಾಹಿತಿ
ಐಫೋನ್ 13 (iPhone 13) ಮೊಬೈಲ್ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಸೌಲಭ್ಯವನ್ನು ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇದರ ಜೊತೆಗೆ 1200 nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಆಪಲ್ ಐಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಸೌಲಭ್ಯ ಅನ್ನು ಹೊಂದಿದೆ. ಇದು 5G ಅನ್ನು ಸಪೋರ್ಟ್ ಮಾಡುತ್ತದೆ.
ಐಫೋನ್ 13 (iPhone 13) ಫೋನ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಪಡೆದಿದೆ. ಅಲ್ಲದೇ ಇದರ ಸೆಕೆಂಡರಿ ಕ್ಯಾಮೆರಾವು ಸಹ 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇದು ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದು ಒಳಗೊಂಡಿದೆ.
ಅಂದಹಾಗೆ ಆಪಲ್ ಸಂಸ್ಥೆಯು ಇತ್ತೀಚಿಗೆ ತನ್ನ ಐಫೋನ್ 16 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಸರಣಿ ಲಾಂಚ್ ಬಳಿಕ ತನ್ನ ಐಫೋನ್ 13 (iPhone 13) ಸೇರಿದಂತೆ ಇತರೆ ಕೆಲವು ಐಫೋನ್‌ಗಳನ್ನು ಅನ್ನು ಅಧಿಕೃತ ಲಿಸ್ಟ್‌ನಿಂದ ತೆಗೆದುಹಾಕಿದೆ. ಹೀಗಾಗಿ ಈ ಫೋನ್ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯ ಇದೆ. ಸದ್ಯ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮಾತ್ರ ಸಖತ್ ಡಿಸ್ಕೌಂಟ್ ದರದಲ್ಲಿ ಖರೀದಿಸಬಹುದು.
ಇತ್ತೀಚಿನ ಹೊಸ ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಅಲ್ಲದೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್ (Dynamic Island) ಆಯ್ಕೆಯನ್ನು ಪಡೆದಿದೆ.


Click it and Unblock the Notifications








