100W SuperVOOC ಚಾರ್ಜಿಂಗ್ ಇರುವ ಈ ಮೊಬೈಲ್ ಬೆಲೆಯಲ್ಲಿ ಇಳಿಕೆ!
ಒನ್‌ಪ್ಲಸ್ ಸಂಸ್ಥೆಯ ಮೊಬೈಲ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಪಡೆದಿವೆ. ಆ ಪೈಕಿ ಸಂಸ್ಥೆಯು ಕೆಲವು ಫ್ಲ್ಯಾಗ್‌ಶಿಪ್ ಫೋನ್‌ಗಳು ಕ್ಯಾಮೆರಾ ಆಯ್ಕೆ ಹಾಗೂ ವೇಗದ ಪ್ರೊಸೆಸರ್ ಮೂಲಕ ಹೆಚ್ಚಿನ ಗಮನ ಸೆಳದಿವೆ. ಸದ್ಯ ಒನ್‌ಪ್ಲಸ್ 12R (OnePlus 12R) ಸ್ಮಾರ್ಟ್‌ಫೋನ್ ದೈತ್ಯ ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಇದೀಗ ಬೊಂಬಾಟ್ ಡಿಸ್ಕೌಂಟ್ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.
ಹೌದು, ಅಮೆಜಾನ್ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್ 12R (OnePlus 12R) ಮೊಬೈಲ್ ಆಕರ್ಷಕ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8GB RAM + 128GB ವೇರಿಯಂಟ್ ಅನ್ನು ಗ್ರಾಹಕರು 35,999ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಗ್ರಾಹಕರು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಂಡರೆ, ಇನ್ನಷ್ಟು ಡಿಸ್ಕೌಂಟ್ ಸಿಗಲಿದೆ.

ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯದ ಜೊತೆಗೆ 100W SuperVOOC ವೈರ್ಡ್ ಚಾರ್ಜಿಂಗ್ ವ್ಯವಸ್ಥೆ ಪಡೆದಿದೆ. ಅಲ್ಲದೇ ಇದು ಐರನ್ ಗ್ರೇ ಮತ್ತು ಕೋಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಅಮೆಜಾನ್ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್ 12R ಅನ್ನು ಸಖತ್ ಆಫರ್‌ನಲ್ಲಿ ಖರೀದಿಸಬಹುದು. ಇನ್ನುಳಿದಂತೆ ಒನ್‌ಪ್ಲಸ್ 12R ಮೊಬೈಲ್ ಇತರೆ ಯಾವೆಲ್ಲಾ ಫೀಚರ್ಸ್ ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ.
ಒನ್‌ಪ್ಲಸ್ 12R - ಫೀಚರ್ಸ್
ಒನ್‌ಪ್ಲಸ್ 12R ಮೊಬೈಲ್ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,264 x 2,780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 120Hz ProXDR ರಿಫ್ರೆಶ್ ರೇಟ್ ಜೊತೆಗೆ LTPO 4.0 ತಂತ್ರಜ್ಞಾನವನ್ನು ಹೊಂದಿದೆ. ಇದು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಲೇಯರ್ಡ್ ಆಗಿದೆ.
ಒನ್‌ಪ್ಲಸ್ 12R ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಇದು ಆಂಡ್ರಾಯ್ಡ್ 14 ಓಎಸ್ ಆಧಾರಿತ OxygenOS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8GB RAM + 128GB ಹಾಗೂ 16GB RAM + 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳನ್ನು ಒಳಗೊಂಡಿದೆ.
ಒನ್‌ಪ್ಲಸ್ 12R ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ 112 ಡಿಗ್ರಿ ಫೀಲ್ಡ್-ಆಫ್-ವ್ಯೂ, ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.
ಒನ್‌ಪ್ಲಸ್ 12R ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದು 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್ 5.3, 5G ಬೆಂಬಲ, ವೈ-ಫೈ 6E, ಬ್ಲೂಟೂತ್ 5.3, NFC, USB-C 3.2 ಜೆನ್ 2, ಜಿಪಿಎಸ್ ಅನ್ನು ಬೆಂಬಲ ಮಾಡಲಿದೆ. ಹಾಗೆಯೇ ಈ ಫೋನ್ ಅನ್ನು ಐರನ್ ಗ್ರೇ ಮತ್ತು ಕೋಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.


Click it and Unblock the Notifications








