MOTOROLA: ಮೊಟೊರೊಲಾದ 1,19,980 ರೂ. ಬೆಲೆಯ ಈ ಟಿವಿ ಈಗ 28,999ರೂ.ಗೆ! ಫೀಚರ್ಸ್ ಏನಿವೆ?
ಮೊಟೊರೊಲಾದ (MOTOROLA) ಸ್ಮಾರ್ಟ್‌ಫೋನ್‌ಗಳ ರೀತಿಯಲ್ಲೇ ಮೊಟೊರೊಲಾ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಆಫರ್ ಇದೆ. ಅದರಂತೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಬೃಹತ್ ಬೆಲೆ ಹೊಂದಿರುವ ಸ್ಮಾರ್ಟ್‌ಟಿವಿಯನ್ನು 28,999 ರೂ.ಗಳಿಗೆ ಸೇಲ್ ಮಾಡಲಾಗುತ್ತಿದೆ.
ಹೌದು, ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಆಫರ್ ನಿಮಗೆ ಉತ್ತಮ. ಯಾಕೆಂದರೆ ಲಕ್ಷ ಬೆಲೆಯ ಈ ಮೊಟೊರೊಲ ಎನ್ವಿಷನ್ X 140 cm (55 ಇಂಚು) QLED ಅಲ್ಟ್ರಾ ಹೆಚ್‌ಡಿ (4K) ಡಾಲ್ಬಿ ವಿಷನ್ ಅನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಟಿವಿಯನ್ನು ಬ್ಯಾಂಕ್ ಆಪರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಟಿವಿ 60 Hz ರಿಫ್ರೆಶ್ ರೇಟ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಪಡೆದಿದೆ. ಹಾಗಿದ್ರೆ, ಬನ್ನಿ ಇದರ ಆಫರ್ ಬೆಲೆ ವಿವರ ಹಾಗೂ ಫೀಚರ್ಸ್ ಏನಿದೆ ಅನ್ನೋದನ್ನು ನೋಡೋಣ.

ಮೊಟೊರೊಲಾ ಎನ್ವಿಷನ್ X 140 cm (55 ಇಂಚು) QLED ಅಲ್ಟ್ರಾ ಹೆಚ್‌ಡಿ (4K) ಡಾಲ್ಬಿ ವಿಷನ್ ಸ್ಮಾರ್ಟ್‌ಟಿವಿ ಬೆಲೆ: ಈ ಸ್ಮಾರ್ಟ್‌ಟಿವಿಗೆ ಮೊದಲೇ ತಿಳಿಸಿದಂತೆ 1,19,980 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಆದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 75% ರಿಯಾಯಿತಿ ಘೋಷಣೆ ಮಾಡಲಾಗಿದ್ದು, ನೀವೀಗ ಇದನ್ನು ಕೇವಲ 28,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ಈ ಟಿವಿ ಮೇಲೆ ಸಾಕಷ್ಟು ಬ್ಯಾಂಕ್ ಕೊಡುಗೆ ಇವೆ.
ಈ ಸ್ಮಾರ್ಟ್‌ಟಿವಿ ಖರೀದಿ ಮಾಡುವಾಗ ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ 10% ರಿಯಾಯಿತಿ, ಬ್ಯಾಂಕ್ ಆಫರ್ ಆಕ್ಸಿಸ್ ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವ್ಯವಹಾರದ ಮೇಲೆ 500 ರೂ. ರಿಯಾಯಿತಿ, ಎಸ್‌ಬಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 1500ರೂ.ಗಳು, ಟೈಮ್ ಪ್ರೈಮ್ ವಾರ್ಷಿಕ ಸದಸ್ಯತ್ವದ ಮೇಲೆ 600 ರಿಯಾಯಿತಿ, ನೋ ಕಾಸ್ಟ್ ಇಎಮ್‌ಐ ಆಯ್ಕೆ ಸೇರಿದಂತೆ ಸಾಕಷ್ಟು ಬ್ಯಾಂಕ್ ಆಫರ್ ಅನ್ನು ಪಡೆಯಬಹುದಾಗಿದೆ.

ಮೊಟೊರೊಲಾ ಎನ್ವಿಷನ್ X QLED ಅಲ್ಟ್ರಾ ಹೆಚ್‌ಡಿ (4K) ಡಾಲ್ಬಿ ವಿಷನ್ ಸ್ಮಾರ್ಟ್‌ಟಿವಿ ಫೀಚರ್ಸ್: ಈ ಸ್ಮಾರ್ಟ್‌ಟಿವಿ ಸ್ಫಟಿಕ-ಸ್ಪಷ್ಟ ಪ್ರದರ್ಶನವನ್ನು ನೀಡಲಿದ್ದು 1.07 ಬಿಲಿಯನ್ ರೋಮಾಂಚಕ ಬಣ್ಣಗಳನ್ನು ಬೆಂಬಲಿಸಲಿದೆ. ಇದರ ಜೊತೆಗೆ 178 ಡಿಗ್ರಿ ವೀಕ್ಷಣಾ ಕೋನದೊಂದಿಗೆ ನೀವು ಇದರಲ್ಲಿ ಉತ್ತಮ ಅನುಭವ ಪಡೆಯಬಹುದು. ಹಾಗೆಯೇ 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ 60 Hz ರಿಫ್ರೆಶ್ ದರ ಅನ್ನು ಈ ಟಿವಿ ಹೊಂದಿದೆ.
ಇದರ ಜೊತೆಗೆ ಈ ಟಿವಿಯಲ್ಲಿ ನೀವು ಬೂಮಿಂಗ್ ಸೌಂಡ್ ಅನುಭವ ಪಡೆಯಬಹುದಾಗಿದೆ. ಅಂದರೆ ಡಾಲ್ಬಿ ತಂತ್ರಜ್ಞಾನದ ಸೌಂಡ್ ಅನುಭವ ಸಿಗಲಿದ್ದು, 20 ವ್ಯಾಟ್ ಸ್ಪೀಕರ್‌ಗಳು ಅತ್ಯಂತ ಶಕ್ತಿಶಾಲಿ ಮತ್ತು ದೊಡ್ಡ ಮಟ್ಟದ ಸೌಂಡ್ ಅನ್ನು ಉತ್ಪಾದಿಸುತ್ತವೆ. ಇದರ ಜೊತೆಗೆ 3D ಆಡಿಯೊ ಹಾಗೂ 4 ಸೌಂಡ್ ಮೋಡ್ ಆಯ್ಕೆ ನಿಮ್ಮನ್ನು ಸಿನಿಮಾ ಥಿಯೇಟರ್‌ನಲ್ಲಿ ಇರುವಂತೆ ಮಾಡುತ್ತದೆ.

ಇದೆಲ್ಲದರ ಜೊತೆಗೆ ಈ ಸ್ಮಾರ್ಟ್‌ಟಿವಿ 2 GB RAM ಮತ್ತು 16 GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಮೀಡಿಯಾಟೆಕ್ 9602 (A53 ಕ್ವಾಡ್ ಕೋರ್ 1.5 GHz) ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ಬಳಕೆದಾರರು ತಡೆರಹಿತ ನ್ಯಾವಿಗೇಶನ್ ಅನುಭವ ಪಡೆಯಬಹುದಾಗಿದೆ. ಅಲ್ಲದೆ ಬಳಕೆದಾರರಿಗೆ ಬಹುಕಾರ್ಯವನ್ನು ಅನುಮತಿಸುತ್ತದೆ ಮತ್ತು ಈ ಸ್ಮಾರ್ಟ್‌ಟಿವಿಯಲ್ಲಿ ಮಾಲಿ - G52 MC1 ಗ್ರಾಫಿಕ್ಸ್ ನಿಮ್ಮ ಟಿವಿ ವೀಕ್ಷಣೆಯ ಅನುಭವವನ್ನು ಇನ್ನಷ್ಟು ಸುಧಾರಿಸಲಿದೆ.
ಇದರೊಂದಿಗೆ ಈ ಸ್ಮಾರ್ಟ್‌ಟಿವಿ ಇನ್‌ಬಿಲ್ಟ್ ಕ್ರೋಮಾಕಾಸ್ಟ್ ಸೌಲಭ್ಯ ಪಡೆದಿದೆ. ಈ ಮೂಲಕ ನಿಮ್ಮ ಸ್ಮಾರ್ಟ್‌ಟಿವಿ ಹಾಗೂ ಫೋನ್ ಅನ್ನು ಮನಬಂದಂತೆ ಕನೆಕ್ಟ್ ಮಾಡಬಹುದಾಗಿದೆ. ಅಂದರೆ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಎಲ್ಲವನ್ನು ದೊಡ್ಡ ಸ್ಕ್ರೀನ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಉಳಿದಂತೆ ಈ ಟಿವಿ ಮೂರು ಹೆಚ್‌ಡಿಎಂಐ ಪೋರ್ಟ್, ಎರಡು ಯುಎಸ್‌ಬಿ ಪೋರ್ಟ್ ,ಡ್ಯುಯಲ್ ಬ್ಯಾಂಡ್ ವೈ-ಫೈ 2.4 GHz + 5 GHz ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದಿದೆ.


Click it and Unblock the Notifications








