Motorola: ಮೊಟೊರೊಲಾ G8 ಪವರ್ ಲೈಟ್ ಸ್ಮಾರ್ಟ್‌ಫೋನ್ ಇದೀಗ ಅಗ್ಗದ ಬೆಲೆಗೆ! 64 GB ROM
ಮೊಟೊರೊಲಾ ಸ್ಮಾರ್ಟ್‌ಫೋನ್ (Motorola smartphone) ವಿಭಾಗದಲ್ಲಿ ಸಾಕಷ್ಟು ಫೋನ್‌ಗಳನ್ನು ಕಾಣಬಹುದು. ಅದರಂತೆ ಈಗ ಮೊಟೊರೊಲಾದ ಬಜೆಟ್ ಬೆಲೆಯ ಫೋನ್ ಭಾರೀ ಆಫರ್ ಪಡೆದಿದ್ದು, ಈ ಮೂಲಕ ಗ್ರಾಹಕರು ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ಮೊಟೊರೊಲಾ G8 ಪವರ್ ಲೈಟ್ ಸ್ಮಾರ್ಟ್‌ಫೋನ್ (Motorola G8 Power Lite Smartphone) ಈಗಾಗಲೇ ಬಜೆಟ್ ವಿಭಾಗದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಈ ಫೋನ್ 256 GB ವರೆಗಿನ ಸ್ಟೋರೇಜ್ ಆಯ್ಕೆ ಪಡೆದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಮೂಲಕ ಉತ್ತಮ ಫೋನ್ ಎನಿಸಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ವಿವರ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೊಟೊರೊಲಾ G8 ಪವರ್ ಲೈಟ್ ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 9,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗೆ 27% ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಮೂಲಕ ನೀವು ಇದನ್ನು 7,250 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಲ್ಲದೆ ಈ ಫೋನ್‌ಗೆ ಬ್ಯಾಂಕ್ ಕೊಡುಗೆ ಸಹ ಇದ್ದು, ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಲಭ್ಯ ಇದೆ.
ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, ಫ್ಲಿಪ್‌ಕಾರ್ಟ್ ಯುಪಿಐ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ತ್ವರಿತ ಡಿಸ್ಕೌಂಟ್ ಆಫರ್, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್ ಪೇ ಲೇಟರ್ ಪಾವತಿ ಮಾಡಿ ಖರೀದಿ ಮಾಡಿದ್ರೆ 20,000 ರೂ.ಗಳ ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆಯಬಹುದು.

ಮೊಟೊರೊಲಾ G8 ಪವರ್ ಲೈಟ್ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 82.2% ಸ್ಕ್ರೀನ್-ಟು-ಬಾಡಿ ಅನುಪಾತ, 269 ppi ಸಾಂದ್ರತೆ ಜೊತೆಗೆ ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ.
ಮೊಟೊರೊಲಾ G8 ಪವರ್ ಲೈಟ್ ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಂಡ್ರಾಯ್ಡ್ 9.0 (ಪೈ) ಓಎಸ್ ಅನ್ನು ರನ್ ಮಾಡಲಿದ್ದು, ಮೀಡಿಯಾಟೆಕ್ MT6765 ಹಿಲಿಯೋ P35 (12nm) ಪ್ರೊಸೆಸರ್ ಬಲ ಪಡೆದಿದ್ದು, ಪವರ್‌ವಿಆರ್ GE8320 ಜಿಪಿಯು ಬಲ ಪಡೆದುಕೊಂಡಿದೆ. ಇದರ ಜೊತೆಗೆ 4GB RAM ಹಾಗೂ 64GB ಇಂಟರ್ ಸ್ಟೋರೇಜ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ ಮೈಕ್ರೋ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.
ಮೊಟೊರೊಲಾ G8 ಪವರ್ ಲೈಟ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 16 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಹೊಂದಿದೆ. ಇದರೊಂದಿಗೆ ಈ ಫೋನ್‌ನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಮೊಟೊರೊಲಾ G8 ಪವರ್ ಲೈಟ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ 3.5 ಎಂಎಂ ಜ್ಯಾಕ್, ವೈ-ಫೈ 802.11 b/g/n, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 4.2, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಸ್ಥಾನೀಕರಣ ಸೇರಿದಂತೆ ಅನೇಕ ಫೀಚರ್ಸ್ ಅನ್ನು ಈ ಫೋನ್ ಹೊಂದಿದೆ.


Click it and Unblock the Notifications








