OnePlus 11 5G ಬೆಲೆ ಭಾರೀ ಕುಸಿತ! 23,000 ಅಗ್ಗ.. ಹೊಸ ಬೆಲೆ ಎಷ್ಟು?
ಒನ್‌ಪ್ಲಸ್ ಅಭಿಮಾನಿಗಳಿಗೆ ಶುಭ ಸುದ್ದಿ ಇದೆ. ನೀವು ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ನಿಮಗಿದೆ ಸಖತ್ ಆಫರ್. ಹೌದು, ಒನ್‌ಪ್ಲಸ್ 11 5G (OnePlus 11 5G) ಫೋನ್ 23,000 ರೂಪಾಯಿ ಕಡಿಮೆ ಬೆಲೆಗೆ ಲಭ್ಯವಿದೆ. ಆನ್‌ಲೈನ್ ಶಾಪಿಂಗ್ ಸೈಟ್ ಅಮೇಜಾನ್‌ನಲ್ಲಿ ಈ ಡಿಸ್ಕೌಂಟ್ ಲಭ್ಯವಿದೆ. ಈ ಭಾರೀ ಆಫರ್‌ನೊಂದಿಗೆ ನೋ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ನಿಮ್ಮ ಬಜೆಟ್ ಕಡಿಮೆಯಿದ್ದರೆ, ಈ ಫೋನ್ ನಿಮಗೆ ಉತ್ತಮ ಆಯ್ಕೆಯಾಗಲಿದೆ.
ಒನ್‌ಪ್ಲಸ್ 11 5G ಫೋನನ್ನು 2023 ರಲ್ಲಿ 61,999 ರೂ. ಬೆಲೆಗೆ ಬಿಡುಗಡೆ ಮಾಡಲಾಯಿತು. ಪ್ರಸ್ತುತ 38,999 ರೂ.ಗೆ ಖರೀದಿಸುವ ಸುವರ್ಣಾವಕಾಶ ಇದೆ. ಇದು 16GB RAM ಮತ್ತು 256GB ಸ್ಟೋರೇಜ್ ಹೊಂದಿದೆ. Snapdragon 8 Gen 2 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಕೂಡ ಇದೆ. 5000mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಚಾರ್ಜಿಂಗ್ ಲಭ್ಯವಿದೆ.

ಒನ್‌ಪ್ಲಸ್ 11 5G ಫೋನಿನ ಬೆಲೆ ಮತ್ತು ಆಫರ್
ಒನ್‌ಪ್ಲಸ್ 11 5G ಹಳೆಯ ಬೆಲೆ = 61,999 ರೂ.
ಒನ್‌ಪ್ಲಸ್ 11 5G ಡಿಸ್ಕೌಂಟ್ ಬೆಲೆ = 38,999 ರೂ.
ಒನ್‌ಪ್ಲಸ್ 11 5G ಫೋನನ್ನು ಅಮೇಜಾನ್ ಪ್ಲಾಟ್‌ಫಾರ್ಮ್‌ನಲ್ಲಿ 38,999 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ಫೋನಿನ 16GB RAM ಮತ್ತು 256 GB ಸ್ಟೋರೇಜ್ ಆಯ್ಕೆಯ ಬೆಲೆಯಾಗಿದೆ. ಕಂಪನಿಯು ಫೋನ್ ಮೇಲೆ 23,000 ರೂ. ಡಿಸ್ಕೌಂಟ್ ನೀಡಿದೆ. ದೊಡ್ಡ ರಿಯಾಯಿತಿ ಜೊತೆಗೆ, ನೀವು ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ಪಡೆಯಬಹುದು. ನೀವು, ಹಳೆಯ ಫೋನ್ ಎಕ್ಸ್ ಚೇಂಜ್ ಮಾಡಿಕೊಳ್ಳಲು ಬಯಸಿದರೆ 31,500 ರೂ. ವರೆಗೆ ರಿಯಾಯಿತಿ ನೀಡಲಾಗುತ್ತದೆ.
ಒನ್‌ಪ್ಲಸ್ 11 5G ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ: ಒನ್‌ಪ್ಲಸ್ 11 5G ಫೋನ್ 6.7 ಇಂಚಿನ (QuadHD + Super Fluid) AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು 3216 x 1440 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಲ್ಪೇ ಭದ್ರತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಇದೆ.
ಪ್ರೊಸೆಸರ್: ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್ 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಈ ಮೊಬೈಲ್ 16GB LPDDR5X RAM ಮತ್ತು 256GB UFS4.0 ಇಂಟರ್ನಲ್ ಸ್ಟೋರೇಜ್ ತಂತ್ರಜ್ಞಾನದೊಂದಿಗೆ ಬರುತ್ತದೆ.
ಈ ಸುದ್ದಿ ಓದಿದ್ದೀರಾ?: ಬಿಡುಗಡೆಗೂ ಮೊದಲೇ.. Realme Note 60 ಸೇಲ್: 8,000ಕ್ಕಿಂತ ಕಡಿಮೆ.. ಯಾವಾಗ? ಎಲ್ಲಿ?
ಕ್ಯಾಮೆರಾ: ಒನ್‌ಪ್ಲಸ್ 11 5G ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು F/1.8 ಅಪರ್ಚರ್‌ನೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 48 ಮೆಗಾಪಿಕ್ಸೆಲ್ ಸೋನಿ IMX581 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಜೊತೆಗೆ F/2.2 ಅಪರ್ಚರ್ ಮತ್ತು 32 ಮೆಗಾಪಿಕ್ಸೆಲ್ ಸೋನಿ IMX709 ಟೆಲಿಫೋಟೋ ಲೆನ್ಸ್ ಜೊತೆಗೆ F/2.0 ಅಪರ್ಚರ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ F/2.45 ಅಪರ್ಚರ್‌ನೊಂದಿಗೆ 16 ಮೆಗಾಪಿಕ್ಸೆಲ್ ಸೋನಿ IMX471 ಕ್ಯಾಮೆರಾ ಇದೆ.
ಬ್ಯಾಟರಿ: ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 100W SuperVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications








