OnePlus 12 ಬೆಲೆ ಕುಸಿತ: 9000 ಅಗ್ಗ.. 8000 ರೂ.ನ ಇಯರ್‌ಬಡ್ ಉಚಿತ
ಒನ್‌ಪ್ಲಸ್ (OnePlus) ಶೀಘ್ರದಲ್ಲೇ ತನ್ನ ನಂಬರ್ ಸರಣಿಯನ್ನು ವಿಸ್ತರಿಸಲಿದೆ. ಇದರ ಅಡಿಯಲ್ಲಿ ಒನ್‌ಪ್ಲಸ್ 13 (OnePlus 13) ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಈ ಫೋನಿನ ಬಿಡುಗಡೆಗೂ ಮೊದಲೇ, ಈ ಹಿಂದೆ ಪರಿಚಯಿಸಿದ್ದ ಒನ್‌ಪ್ಲಸ್ 12 5G (OnePlus 12 5G) ಮೊಬೈಲ್ ಅನ್ನು 9,000 ರೂ. ಅಗ್ಗವಾಗಿ ಮಾರಾಟ ಮಾಡಲಾಗುತ್ತಿದೆ. ವಿಶೇಷವೆಂದರೆ, ಈ ಫೋನ್ ಜೊತೆಗೆ ಕಂಪನಿಯು 7,999 ರೂ. ಮೌಲ್ಯದ ಇಯರ್‌ಬಡ್‌ಗಳನ್ನು ಉಚಿತ ನೀಡುತ್ತಿದೆ. ಒನ್‌ಪ್ಲಸ್ ಪ್ರಿಯರಿಗೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.
ಹೌದು, ಕಂಪನಿಯ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್ 12 5G ಫೋನ್ ಖರೀದಿ ಮೇಲೆ 2,000 ರೂ.ಗಳ ಫ್ಲಾಟ್ ರಿಯಾಯಿತಿ ಮತ್ತು 7,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್ ನೀಡಲಾಗುತ್ತಿದೆ. ಡಿಸ್ಕೌಂಟ್‌ನೊಂದಿಗೆ ನೀವು 55,999 ರೂ. ಬೆಲೆಯಲ್ಲಿ ಈ ಫೋನ್ ಖರೀದಿಬಹುದು. ನೀವು ಐಸಿಐಸಿಐ, ಒನ್ ಕಾರ್ಡ್, ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಈ ಆಫರ್ ಪಡೆಯಬಹುದು. ಜೊತೆಗೆ, ಕಂಪನಿಯು 7,999 ರೂ.ಗಳ OnePlus Buds Pro 2 ಅನ್ನು ಉಚಿತವಾಗಿ ನೀಡುತ್ತಿದೆ.

ನಿಮಗೆ ನೋ ಕಾಸ್ಟ್ ಇಎಂಐ ಆಯ್ಕೆಯು ಸಿಗುತ್ತದೆ. 3 ರಿಂದ 6 ತಿಂಗಳವರೆಗೆ ಸುಲಭ ಕಂತುಗಳಲ್ಲಿ ಈ ಫೋನ್ ಖರೀದಿಸಬಹುದು. ಬಿಡುಗಡೆಯ ಸಮಯದಲ್ಲಿ, ಒನ್‌ಪ್ಲಸ್ 12 5G ಫೋನಿನ 12GB + 256GB ಸ್ಟೋರೇಜ್ ಬೆಲೆ 64,999 ರೂ. ಇತ್ತು. 16GB + 512GB ಸ್ಟೋರೇಜ್ ಆಯ್ಕೆಯ ಬೆಲೆ 69,999 ರೂ. ಇತ್ತು. ಪ್ರಸ್ತುತ ಈ ಫೋನ್ ಸಿಲ್ಕಿ ಬ್ಲಾಕ್, ಫ್ಲೋವಿ ಎಮರಾಲ್ಡ್ ಮತ್ತು ಗ್ಲೇಶಿಯಲ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಅಮೆಜಾನ್‌ನಲ್ಲಿಯೂ ಬಂಪರ್ ಆಫರ್
ಅಮೆಜಾನ್‌ನಲ್ಲಿ ಒನ್‌ಪ್ಲಸ್ 12 5G ಸ್ಮಾರ್ಟ್‌ಫೋನ್ ಮೇಲೆ ಪ್ರಸ್ತುತ 2,000 ರೂ.ಗಳ ಫ್ಲಾಟ್ ಕೂಪನ್ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ 6,000 ರೂ.ಗಳ ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ಒಟ್ಟು 8,000 ರೂ.ಗಳ ರಿಯಾಯಿತಿ ಸಿಗುತ್ತದೆ. ಕೂಪನ್‌ಗಳು ಮತ್ತು ಬ್ಯಾಂಕ್ ರಿಯಾಯಿತಿಗಳ ಬಳಿಕ, ಈ ಫೋನಿನ ಬೆಲೆ 56,998 ರೂ.ಗೆ ಇಳಿಕೆಯಾಗಲಿದೆ. ಈ ಫೋನ್ ಖರೀದಿಸಿದ ಗ್ರಾಹಕರಿಗೆ ಕಂಪನಿಯು 7,999 ರೂ.ಗಳ OnePlus Buds Pro 2 ಅನ್ನು ಉಚಿತವಾಗಿ ನೀಡುತ್ತಿದೆ.
ನೀವು ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನವನ್ನು ಪಡೆಯಬಹುದು. ಅಂದರೆ, ಈ ಫೋನನ್ನು 3 ರಿಂದ 6 ತಿಂಗಳ ಸುಲಭ ಕಂತುಗಳಲ್ಲಿ ಖರೀದಿಸಬಹುದು. ಕಂಪನಿಯು ಒನ್‌ಪ್ಲಸ್ 12 5G ಸ್ಮಾರ್ಟ್‌ಫೋನ್ ಮೇಲೆ ಎಕ್ಸ್‌ಚೇಂಜ್ ಆಫರ್‌ಗಳನ್ನು ಸಹ ನೀಡುತ್ತಿದೆ. ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡಲು ಬಯಸಿದರೆ, 36,400 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಒನ್‌ಪ್ಲಸ್ 12 5G ಫೋನಿನ ವೈಶಿಷ್ಟ್ಯಗಳು
ಒನ್‌ಪ್ಲಸ್ 12 5G ಫೋನ್ 6.82 ಇಂಚಿನ ಕ್ವಾಡ್ ಎಚ್‌ಡಿ + 2K ಡಿಸ್ಪ್ಲೇಯನ್ನು ಹೊಂದಿದೆ. ಇದು LTPO+ ಪ್ಯಾನೆಲ್ ಆಗಿದೆ. 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಡಿಸ್ಪ್ಲೇ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೀಡಲಾಗಿದೆ.
ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 3 ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಅತ್ಯಂತ ವೇಗದ ಚಿಪ್‌ಸೆಟ್ ಆಗಿದೆ. ಗ್ರಾಫಿಕ್ಸ್‌ಗಾಗಿ Adreno 750 GPU ಮತ್ತು ಗೇಮಿಂಗ್‌ಗಾಗಿ ಸುಧಾರಿತ ಆವಿ ಕೂಲಿಂಗ್ ವ್ಯವಸ್ಥೆಗೆ ಲಭ್ಯವಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 16GB ವರೆಗೆ RAM ಮತ್ತು 512GB ವರೆಗೆ ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 64 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್, 50 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಮತ್ತು 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಒದಗಿಸಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಮೊಬೈಲ್ 5,400 mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಒದಗಿಸಲಾಗಿದೆ.


Click it and Unblock the Notifications








