7000 ರೂ. ಬೆಲೆ ಇಳಿಕೆ! ಮತ್ತೆ ಇಷ್ಟು ಅಗ್ಗದ ದರದಲ್ಲಿ ಸಿಗಲ್ಲ.. ಯಾವ ಫೋನ್?
ಒನ್‌ಪ್ಲಸ್ (OnePlus) ಮೊಬೈಲ್ ಪ್ರಿಯರಿಗೆ ಎರಡು ಸಿಹಿ ಸುದ್ದಿ ಇದೆ. ಮೊದಲ ಸಿಹಿ ಸುದ್ದಿ ಎಂದರೆ, ಕಂಪನಿಯು ನಾಳೆ ಹೊಸ ನಾರ್ಡ್ ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಮತ್ತೊಂದು, ಈ ಹೊಸ ಫೋನ್ ಲಾಂಚ್‌ಗೂ ಮೊದಲೇ ತನ್ನ ಮೊತ್ತೊಂದು ಮೊಬೈಲ್ ಬೆಲೆಯನ್ನು ಕಡಿತಗೊಳಿಸಿದೆ. ಹೌದು, ಒನ್‌ಪ್ಲಸ್ ತನ್ನ OnePlus Nord 4 ಫೋನನ್ನು ನಾಳೆ (ಜುಲೈ 16) ಸಂಜೆ 6.30 ಕ್ಕೆ ಒನ್‌ಪ್ಲಸ್ ಸಮ್ಮರ್ ಲಾಂಚ್ ಈವೆಂಟ್‌ನಲ್ಲಿ (OnePlus Summer Launch Event) ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಮಧ್ಯೆಯೇ, ಒನ್‌ಪ್ಲಸ್‌ನ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್ OnePlus 12 ಮೇಲೆ 7,000 ರೂಪಾಯಿಗಳ ಬೆಲೆ ಕಡಿತವನ್ನು ಘೋಷಿಸಲಾಗಿದೆ.
ಒನ್‌ಪ್ಲಸ್ 12 ಫೋನ್ ಮೇಲಿನ ಈ ಆಫರ್ ಜನಪ್ರಿಯ ಇಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಇಂಡಿಯಾದಲ್ಲಿ (Amazon India) ಮೂಲಕ ಲಭ್ಯವಿದೆ. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 7,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಈ ಮೂಲಕ OnePlus 12 ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 64,999 ರೂ. ಬದಲಿಗೆ ಬ್ಯಾಂಕ್ ಆಫರ್‌ನೊಂದಿಗೆ 57,999 ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ.

26,000 ರೂ. ಎಕ್ಸ್‌ಚೇಂಜ್ ಬೋನಸ್ ಲಭ್ಯ!
ಬ್ಯಾಂಕ್ ಆಫರ್‌ನ ಹೊರತಾಗಿ, OnePlus 12 ಸ್ಮಾರ್ಟ್‌ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಎಕ್ಸ್‌ಚೇಂಜ್ ಆಫರ್‌ನ ಭಾಗವಾಗಿ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನಲ್ಲಿ ನೀವು 26,000 ರೂ. ವರೆಗೆ ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದು. ನೀವು ಎಕ್ಸ್‌ಚೇಂಜ್ ಮಾಡಿಕೊಳ್ಳುತ್ತಿರುವ ಹಳೆಯ ಸ್ಮಾರ್ಟ್‌ಫೋನ್‌ನ ಸ್ಥಿತಿಯ ಆಧಾರದ ಮೇಲೆ Amazonನ ಎಕ್ಸ್‌ಚೇಂಜ್ ಬೋನಸ್‌ನ ಮೌಲ್ಯವು ಬದಲಾಗುತ್ತದೆ ಎಂಬುವುದನ್ನು ಗಮನಿಸಬೇಕಿದೆ.
OnePlus 12 ಸ್ಮಾರ್ಟ್‌ಫೋನ್ ಖರೀದಿಸಬಹುದೇ?
ಪ್ರಸ್ತುತ ನೀವು ಕೆಲವು ತಿಂಗಳ ಹಳೆಯ OnePlus 12 ಸ್ಮಾರ್ಟ್‌ಫೋನ್ ಖರೀದಿಸಬಹುದೇ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ಸಂಶಯಬೇಡ. ನೀವು ಕಣ್ಣು ಮುಚ್ಚಿ OnePlus 12 ಸ್ಮಾರ್ಟ್‌ಫೋನ್ ಖರೀದಿಸಬಹುದು. ಏಕೆಂದರೆ, ಇದು ವಿನ್ಯಾಸದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದೆ. ಇದು ProXDR ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ 6.82 ಇಂಚಿನ LDPO ಡಿಸ್ಪ್ಲೇ ಹೊಂದಿದೆ.
ಈ ಫೋನ್ Qualcomm Snapdragon 8 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಕಾರ್ಯಕ್ಷಮತೆಯ ವಿಷಯದಲ್ಲಿ ನಿಜವಾಗಿಯೂ ಅದ್ಭುತವಾಗಿದೆ. ಅಲ್ಲದೆ, ಇದು ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ 14 ಓಎಸ್‌ನೊಂದಿಗೆ ಬರುತ್ತದೆ. ಇದು ಕ್ಲೀನ್ ಇಂಟರ್ಫೇಸ್ ಅನ್ನು ದೃಢಪಡಿಸುತ್ತದೆ. ಇದು ದೊಡ್ಡ 5400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 100W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ.
ಈ ಫೋನಿನಲ್ಲಿದೆ ಅದ್ಭುತ ಕ್ಯಾಮೆರಾ ಸೆಟಪ್
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್‌ನ ವಿಶೇಷತೆ ಎಂದರೆ, ಇದು ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ 50MP ಮುಖ್ಯ ಕ್ಯಾಮೆರಾ, 48MP ವೈಡ್ಆಂ ಗಲ್ ಲೆನ್ಸ್ ಕ್ಯಾಮೆರಾ ಮತ್ತು 64MP ಟೆಲಿಫೋಟೋ ಲೆನ್ಸ್ ಕ್ಯಾಮೆರಾವನ್ನು ಆಪ್ಟಿಕಲ್ ಜೂಮ್ (3x ಪೆರಿಸ್ಕೋಪ್) ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಮುಖ್ಯ ಕ್ಯಾಮೆರಾ ಉತ್ತಮ ಬೆಳಕಿನಲ್ಲಿ ಮಾತ್ರವಲ್ಲದೆ ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಫೋಟೋಗಳನ್ನು ಸೆರೆಹಿಡಿಯುತ್ತದೆ. ಈ ಮೊಬೈಲ್ 4 ವರ್ಷಗಳ OS ಅಪ್ಡೇಟ್‌ಗಳನ್ನು ಮತ್ತು 6 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಹೊಂದಿದೆ.
OnePlus 12ಗಿಂತ iQOO 12 ಬೆಸ್ಟ್ ಇರಬಹುದಾ?
ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, ನಿಮ್ಮ ಬಜೆಟ್‌ಗೆ OnePlus 12 ಉತ್ತಮ ಆಯ್ಕೆಯಾಗಿದೆ. ಇನ್ನೂ ಕಡಿಮೆ ಬೆಲೆಗೆ ಬರುವ ಮತ್ತೊಂದು ಸ್ಮಾರ್ಟ್‌ಫೋನ್ ಇದೆ. OnePlus 12ಗೆ ನೇರ ಪ್ರತಿಸ್ಪರ್ಧಿಯಾಗಿರುವ iQOO 12 ಅನ್ನು ನೀವು ಖರೀದಿಸಬಹುದು. ಆದರೆ, OnePlus 12 ಸ್ಮಾರ್ಟ್‌ಫೋನ್ ಉತ್ತಮ ಕ್ಯಾಮೆರಾ ಮತ್ತು ಡಿಸ್ಲ್ಪೇಯನ್ನು ಹೊಂದಿದೆ. ಹೀಗಾಗಿ, ನೀವು ಯಾವುದೇ ಅನುಮಾನವಿಲ್ಲದೆಯೇ ಈ ಫೋನ್ ಅನ್ನು ಆಯ್ಕೆ ಮಾಡಬಹುದು.


Click it and Unblock the Notifications








