Home
Deal of the day

8,000 ರಿಯಾಯಿತಿ! ಯುವಕರ ಹಾಟ್‌ ಫೆವರೆಟ್‌.. ಈ OnePlus ಫೋನಿನ ಮುಗಿಬಿದ್ದ ಜನ.. ಹೊಸ ಬೆಲೆ, ವಿಶೇಷತೆಗಳೇನು?

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಈ ಪೈಕಿ ಒನ್‌ಪ್ಲಸ್ ನಾರ್ಡ್‌ 4 5G (OnePlus Nord 4 5G) ಮೊಬೈಲ್ ಸಹ ಒಂದಾಗಿದೆ. ಪ್ರಸ್ತುತ, ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ 4,000 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಬ್ಯಾಂಕ್ ಡಿಸ್ಕೌಂಟ್‌ ಸಹ ಲಭ್ಯವಿದೆ. ನೀವು ಎರಡೂ ರಿಯಾಯಿತಿಯ ನಂತರ, ಒಟ್ಟು 8,000 ರೂ. ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಖರೀದಿ ಮೇಲೆ ಲಭ್ಯವಿರುವ ಆಫರ್ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ.

ನೀವು ಕಡಿಮೆ ಬೆಲೆಗೆ ಅತ್ಯುತ್ತಮ ಒನ್‌ಪ್ಲಸ್ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಒನ್‌ಪ್ಲಸ್ ನಾರ್ಡ್‌ 4 5G ಉತ್ತಮ ಆಯ್ಕೆಯಾಗಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಒನ್‌ಪ್ಲಸ್ ಮೊಬೈಲ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 12GB RAM + 256GB ಸ್ಟೋರೇಜ್, 5500mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿದೆ.

OnePlus: 8000 ರಿಯಾಯಿತಿ! ಯುವಕರ ಫೆವರೆಟ್‌..ಈ OnePlus ಫೋನಿನ ಮುಗಿಬಿದ್ದ ಜನ

ಒನ್‌ಪ್ಲಸ್ ನಾರ್ಡ್‌ 4 5G ಆಫರ್‌ಗಳು

ಒನ್‌ಪ್ಲಸ್ ನಾರ್ಡ್‌ 4 5G ಫೋನಿನ ​​ಆರಂಭಿಕ ಬೆಲೆ 32,999 ರೂ. ಆಗಿದೆ. ಪ್ರಸ್ತುತ, ಇದರ ಬೆಲೆಯನ್ನು 4,000 ರೂ. ಕಡಿಮೆ ಮಾಡಲಾಗಿದೆ. ನೀವು ಬೆಲೆ ಕಡಿತದೊಂದಿಗೆ 28,998 ರೂ.ಗೆ ಖರೀದಿಸಬಹುದು. ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ, ನಿಮಗೆ 4000 ರೂ. ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಅಂದರೆ ಈ ಒನ್‌ಪ್ಲಸ್ ಫೋನನ್ನು ಕೇವಲ 23,998 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಇದಲ್ಲದೆ, ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಕಂಪನಿಯು ನಿಮ್ಮ ಹಳೆಯ ಫೋನ್ ಮೇಲೆ 22,800 ರೂ.ಗಳ ಎಕ್ಸ್‌ಚೇಂಜ್ ಆಫರ್ ನೀಡುತ್ತಿದೆ.

ಒನ್‌ಪ್ಲಸ್ ನಾರ್ಡ್‌ 4 ವೈಶಿಷ್ಟ್ಯಗಳು

ಒನ್‌ಪ್ಲಸ್ ನಾರ್ಡ್‌ 4 5G ಮೊಬೈಲ್ 6.74 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,772 × 1,240 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಸ್ಕ್ರೀನ್ 120Hz ರಿಫ್ರೆಶ್ ದರ ಮತ್ತು 2,150 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಒನ್‌ಪ್ಲಸ್ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಪ್ರೊಸೆಸರ್‌ 4 ನ್ಯಾನೋಮೀಟರ್‌ಗಳ ಮೇಲೆ ತಯಾರಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ OxygenOS 14.0 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

OnePlus: 8000 ರಿಯಾಯಿತಿ! ಯುವಕರ ಫೆವರೆಟ್‌..ಈ OnePlus ಫೋನಿನ ಮುಗಿಬಿದ್ದ ಜನ

ಒನ್‌ಪ್ಲಸ್ ನಾರ್ಡ್‌ 4 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಮತ್ತು EIS ಬೆಂಬಲದೊಂದಿಗೆ ಬರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಒನ್‌ಪ್ಲಸ್ ಫೋನ್ 8GB + 12GB RAM, 128GB + 256GB ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ವರ್ಚುವಲ್ RAM ವೈಶಿಷ್ಟ್ಯವನ್ನು ಸಹ ಹೊಂದಿದೆ.

ಒನ್‌ಪ್ಲಸ್ ನಾರ್ಡ್‌ 4 5G ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W ಸೂಪರ್‌ವೂಕ್‌ ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್ 5.4, ವೈ-ಫೈ 6, ಅಲರ್ಟ್‌ ಸ್ಲೈಡರ್, ಯುಎಸ್‌ಬಿ ಟೈಪ್ ಸಿ 2.0, ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
OnePlus Nord 4 5G Available With Rs 8000 Discount on Amazon sale: check new price, offers, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+