ಆಫರ್‌ಗಳ ಸುರಿಮಳೆ!..ಹೊಸ OnePlus ಫೋನ್ ಖರೀದಿಸುವ ಗ್ರಾಹಕರಿಗೆ ಹಬ್ಬ!
ಲೀಡಿಂಗ್ ಮೊಬೈಲ್ ಬ್ರ್ಯಾಂಡ್‌ಗಳ ಲಿಸ್ಟ್‌ನಲ್ಲಿ ಒನ್‌ಪ್ಲಸ್ (OnePlus) ಸಹ ಸ್ಥಾನ ಪಡೆದುಕೊಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಫೋನ್‌ಗಳಿಗೆ ಬೇಡಿಕೆ ಉತ್ತಮವಾಗಿ ಇದೆ. ಇನ್ನು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಈಗ ಭರ್ಜರಿ ಸಿಹಿಸುದ್ದಿ ಇದೆ. ಅರೇ ಅದೇನು ಅಂತೀರಾ.? ಒನ್‌ಪ್ಲಸ್ ಸಂಸ್ಥೆಯು ಇದೀಗ ಒನ್‌ಪ್ಲಸ್ ಕಮ್ಯೂನಿಟಿ ಸೇಲ್ (OnePlus Community sale) ಆರಂಭಿಸುವುದಾಗಿ ತಿಳಿಸಿದ್ದು, ಆಯ್ದ ಉತ್ಪನ್ನಗಳಿಗೆ ದೊಡ್ಡ ಡಿಸ್ಕೌಂಟ್ ಘೋಷಿಸಿದೆ.
ಹೌದು, ಒನ್‌ಪ್ಲಸ್ ಇದೀಗ ಒನ್‌ಪ್ಲಸ್ ಕಮ್ಯೂನಿಟಿ ಸೇಲ್ (OnePlus Community sale) ಇದೇ ಡಿಸೆಂಬರ್ 6 ರಿಂದ ಪ್ರಾರಂಭ ಆಗಲಿದೆ. ಒನ್‌ಪ್ಲಸ್ ( OnePlus.in ), ಅಮೆಜಾನ್, ಫ್ಲಿಪ್‌ಕಾರ್ಟ್, ಮಂತ್ರಾ, ಒನ್‌ಪ್ಲಸ್ ಆಫ್‌ಲೈನ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್, ಬಜಾಜ್ ಎಲೆಕ್ಟ್ರಾನಿಕ್ಸ್ ಹಾಗೂ ಇತರ ಪಾಲುದಾರ ರೀಟೇಲ್ ಸ್ಟೋರ್‌ಗಳಲ್ಲಿಯೂ ಕೂಡಾ ಆಫರ್ ಲಭ್ಯ ಇರಲಿದೆ ಎನ್ನಲಾಗಿದೆ.

ಇನ್ನು ಈ ಸೇಲ್‌ನಲ್ಲಿ ಬ್ಯಾಂಕ್ ಆಫರ್ ಸಹ ಲಭ್ಯ ಇರಲಿವೆ. ಗ್ರಾಹಕರು ICICI ಬ್ಯಾಂಕ್, OneCard ಹಾಗೂ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಹೆಚ್ಚುವರಿ ಇನ್‌ಸ್ಟಂಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಅಲ್ಲದೇ 9 ತಿಂಗಳವರೆಗೆ ನೋ ಕಾಸ್ಟ್ EMI ಪೇಮೆಂಟ್ ಆಯ್ಕೆಗಳು ಲಭ್ಯ ಇವೆ. ಹಾಗಾದರೇ ಒನ್‌ಪ್ಲಸ್ ಕಮ್ಯೂನಿಟಿ ಸೇಲ್‌ನಲ್ಲಿ ಲಭ್ಯ ಇರುವ ಡಿಸ್ಕೌಂಟ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಒನ್‌ಪ್ಲಸ್ 12 ಮೊಬೈಲ್
ಒನ್‌ಪ್ಲಸ್ 12 ಮೊಬೈಲ್ (OnePlus 12) ಆಕರ್ಷಕ ಆಫರ್ ಪಡೆದಿದೆ. ಇದು 7,000 ಇನ್‌ಸ್ಟಂಟ್ ರಿಯಾಯಿತಿ ಹಾಗೂ 7,000ರೂ ಬ್ಯಾಂಕ್ ಆಫರ್ ಲಭ್ಯ ಪಡೆದಿದೆ. ಅಂದಹಾಗೆ ಈ ಫೋನ್ ಬೆಲೆಯು 69,999ರೂ. ಆಗಿದ್ದು, ಖರೀದಿದಾರರು 55,999ರೂ. ಗಳಿಗೆ ಖರೀದಿಸಬಹುದು.
ಒನ್‌ಪ್ಲಸ್ 12R ಮೊಬೈಲ್
ಒನ್‌ಪ್ಲಸ್ 12R ಮೊಬೈಲ್ (OnePlus 12R) ಭರ್ಜರಿ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇದು 6,000 ಇನ್‌ಸ್ಟಂಟ್ ರಿಯಾಯಿತಿ ಹಾಗೂ 3,000ರೂ ಬ್ಯಾಂಕ್ ಆಫರ್ ಲಭ್ಯ ಪಡೆದಿದೆ. ಅಂದಹಾಗೆ ಈ ಮೊಬೈಲ್ ಬೆಲೆಯು 39,999ರೂ. ಆಗಿದ್ದು, ಖರೀದಿದಾರರು 30,999ರೂ. ಗಳಿಗೆ ಖರೀದಿಸಬಹುದು.
ಒನ್‌ಪ್ಲಸ್ ನಾರ್ಡ್ 4 ಮೊಬೈಲ್
ಒನ್‌ಪ್ಲಸ್ ನಾರ್ಡ್ 4 (OnePlus Nord 4) ಫೋನ್ ಆಕರ್ಷಕ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇದು 3,000 ಇನ್‌ಸ್ಟಂಟ್ ರಿಯಾಯಿತಿ ಹಾಗೂ 2,000ರೂ ಬ್ಯಾಂಕ್ ಆಫರ್ ಲಭ್ಯ ಪಡೆದಿದೆ. ಅಂದಹಾಗೆ ಈ ಮೊಬೈಲ್ ಬೆಲೆಯು 29,999ರೂ. ಆಗಿದ್ದು, ಖರೀದಿದಾರರು 24,999ರೂ. ಗಳಿಗೆ ಖರೀದಿಸಬಹುದು.
ಒನ್‌ಪ್ಲಸ್ ನಾರ್ಡ್ CE 4 ಮೊಬೈಲ್
ಒನ್‌ಪ್ಲಸ್ ನಾರ್ಡ್ CE 4 (OnePlus Nord CE 4) ಸ್ಮಾರ್ಟ್‌ಫೋನ್ ಜಬರ್ದಸ್ತ್ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದು 2,000 ಇನ್‌ಸ್ಟಂಟ್ ರಿಯಾಯಿತಿ ಹಾಗೂ 1,000ರೂ ಬ್ಯಾಂಕ್ ಆಫರ್ ಲಭ್ಯ ಪಡೆದಿದೆ. ಅಂದಹಾಗೆ ಈ ಮೊಬೈಲ್ ಬೆಲೆಯು 24,999ರೂ. ಆಗಿದ್ದು, ಖರೀದಿದಾರರು 21,999ರೂ. ಗಳಿಗೆ ಖರೀದಿಸಬಹುದು. ಅಲ್ಲದೇ ಉಚಿತ ನಾರ್ಡ್ ಬಡ್ಸ್ 2R ಇಯರ್‌ಬಡ್ಸ್ ಕೂಡಾ ಲಭ್ಯ ಆಗಲಿದೆ.
ಒನ್‌ಪ್ಲಸ್ ನಾರ್ಡ್ CE 4 ಲೈಟ್ ಮೊಬೈಲ್
ಒನ್‌ಪ್ಲಸ್ ನಾರ್ಡ್ CE 4 ಲೈಟ್ (OnePlus Nord CE 4 Lite) ಮೊಬೈಲ್ ಬಿಗ್ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದು 2,000 ಇನ್‌ಸ್ಟಂಟ್ ರಿಯಾಯಿತಿ ಹಾಗೂ 1,000ರೂ ಬ್ಯಾಂಕ್ ಆಫರ್ ಲಭ್ಯ ಪಡೆದಿದೆ. ಅಂದಹಾಗೆ ಈ ಮೊಬೈಲ್ ಬೆಲೆಯು 19,999ರೂ. ಆಗಿದ್ದು, ಖರೀದಿದಾರರು 16,999ರೂ. ಗಳಿಗೆ ಖರೀದಿಸಬಹುದು. ಅಲ್ಲದೇ ಉಚಿತ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z2 ಇಯರ್‌ಬಡ್ಸ್ ಸಹ ಸಿಗಲಿದೆ.


Click it and Unblock the Notifications








