3000 ಅಗ್ಗ.. OnePlus ಫೋನಿನ ಬೆಲೆ ಭಾರೀ ಇಳಿಕೆ.. ಡಿಸ್ಕೌಂಟ್, ಹೊಸ ಬೆಲೆ ಎಷ್ಟು?
ಒನ್‌ಪ್ಲಸ್ ಮೊಬೈಲ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ, ಒನ್‌ಪ್ಲಸ್ ವಿಭಿನ್ನ ಮತ್ತು ಉತ್ತಮ ಗುಣಮಟ್ಟದ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಮಾರ್ಟ್‌ಫೋನ್ ಪ್ರಿಯರು ಸಹ ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿಸುತ್ತಾರೆ. ಪ್ರಸ್ತುತ, ಕಂಪನಿಯು ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G (OnePlus Nord CE 4 Lite 5G) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಈ ಫೋನ್ ಖರೀದಿಸಿದರೆ, ಶೇ.14 ರಷ್ಟು ರಿಯಾಯಿತಿ, ಶೇ.10 ರಷ್ಟು ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಲಾಭ ಪಡೆಯಬಹುದು.
ಕಂಪನಿಯು ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನನ್ನು 8GB + 128GB ಮತ್ತು 8GB + 256GB ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತಿದೆ. ಈ ಫೋನನ್ನು 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.6 ಇಂಚಿನ ಡಿಸ್ಪ್ಲೇ, 5500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ ತಿಳಿಯೋಣ ಬನ್ನಿ.

ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಬೆಲೆ ಮತ್ತು ಆಫರ್‌ಗಳು
ಕಂಪನಿಯು ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 19,999 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ, ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು, 3000 ರಿಯಾಯಿತಿಯೊಂದಿಗೆ 17,999 ರೂ.ಗೆ ಖರೀದಿಸಬಹುದು. ಎಸ್‌ಬಿಐ ಡೆಬಿಟ್ ಕಾರ್ಡ್ ಪಾವತಿ ಮೇಲೆ ಹೆಚ್ಚುವರಿಯಾಗಿ 500 ರೂ. ಡಿಸ್ಕೌಂಟ್ ಸಿಗುತ್ತದೆ. ಜೊತೆಗೆ 17,050 ರೂ.ಗಳ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ನೀವು, ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್ ಮತ್ತು ಮತ್ತು ಅಮೆಜಾನ್‌ನಲ್ಲಿ ಈ ಫೋನ್ ಕೊಳ್ಳಬಹುದು.
ಈ ಸುದ್ದಿ ಓದಿದ್ದೀರಾ?: ಜಸ್ಟ್ 6999 ರೂ.. 50MP ಕ್ಯಾಮೆರಾ.. 5000mAh ಬ್ಯಾಟರಿ; ಅದೂ Samsung ಫೋನ್!
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G: ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಮೊಬೈಲ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1080 × 2400 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನನ್ನು ಆಂಡ್ರಾಯ್ಡ್ 14 ಆಧಾರಿತ OxygenOS 14.0 ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಸ್ಮಾರ್ಟ್‌ಫೋನ್ 8GB RAMನೊಂದಿಗೆ ಬರುತ್ತದೆ. ಈ ಫೋನ್ 8GB ವರ್ಚುವಲ್ RAM ಸಹ ಹೊಂದಿದೆ. ನೀವು ಭೌತಿಕ RAM ಜೊತೆಗೆ 16GB ಅನ್ನು ಬಳಸಬಹುದು. ಜೊತೆಗೆ 256GB ಸ್ಟೋರೇಜ್ ಆಯ್ಕೆ ಮತ್ತು 2TB ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲ ಸಹ ಇದೆ.
ಕ್ಯಾಮೆರಾ ಸೆಟಪ್
ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ಮತ್ತು EIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಒನ್‌ಪ್ಲಸ್ ನಾರ್ಡ್ CE 4 ಲೈಟ್ 5G ಮೊಬೈಲ್‌ನಲ್ಲಿ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 5W ರಿವರ್ಸ್ ಚಾರ್ಜಿಂಗ್ ಸಹ ಲಭ್ಯವಿದೆ.


Click it and Unblock the Notifications








