Oppo: ಒಪ್ಪೋ A78 ಸ್ಮಾರ್ಟ್‌ಫೋನ್‌ಗೆ ಶಾಶ್ವತ ಬೆಲೆ ಕಡಿತ! ಪರಿಷ್ಕೃತ ದರ ಎಷ್ಟು?
ಒಪ್ಪೋ ಸ್ಮಾರ್ಟ್‌ಫೋನ್‌ಗಳು (Oppo smartphone) ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದ್ದು, ಈ ನಡುವೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡಿದ್ದ ಒಪ್ಪೋ A78 ಸ್ಮಾರ್ಟ್‌ಫೋನ್‌ಗೆ (Oppo A78 smartphone) ಬೆಲೆ ಇಳಿಕೆ ಮಾಡಲಾಗಿದೆ.
ಹೌದು, ಒಪ್ಪೋ ತನ್ನ A78 ಸ್ಮಾರ್ಟ್‌ಫೋನ್‌ಗೆ ಬೆಲೆ ಇಳಿಕೆ (price cut) ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಆಯ್ಕೆ ಹಾಗೂ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯ ಇದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ ಎಷ್ಟು?, ಇದೀಗ ಈ ಫೋನ್‌ಗೆ ನಿಗದಿ ಮಾಡಲಾದ ಬೆಲೆ ಇಳಿಕೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ A78 ಸ್ಮಾರ್ಟ್‌ಫೋನ್ ಬೆಲೆ ಇಳಿಕೆ: ಈ ಬಹುಬೇಡಿಕೆಯ ಸ್ಮಾರ್ಟ್‌ಫೋನ್‌ಗೆ ಇದೀಗ ಒಪ್ಪೋ ಅಧಿಕೃತವಾಗಿ ಬೆಲೆ ಇಳಿಕೆ ಮಾಡಿದೆ. ಅಂದರೆ ಈ ಫೋನ್ ಮೇಲೆ 3,500 ರೂಪಾಯಿಗಳಷ್ಟು ಬೆಲೆ ಕಡಿತ ಮಾಡಲಾಗಿದೆ. ಈ ಮೂಲಕ ಕೈಗೆಟುಕುವ ಬೆಲೆಯಲ್ಲಿ ಇನ್ಮುಂದೆ ಈ ಫೋನ್ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷ ಜನವರಿಯಲ್ಲಿ 18,999 ರೂ.ಗಳಿಗೆ ಲಾಂಚ್ ಮಾಡಲಾಗಿತ್ತು.
ಇನ್ನು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿದಾರರು 15,499 ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ವಿಶೇಷ ಫೋನ್ ಆಕ್ವಾ ಗ್ರೀನ್ ಮತ್ತು ಮಿಸ್ಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ. ಇಷ್ಟೊಂದು ಬೆಲೆ ಇಳಿಕೆ ಕಂಡ ಈ ಸ್ಮಾರ್ಟ್‌ಫೋನ್ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ತಿಳಿಸಿಕೊಟ್ಟಿದ್ದು, ಈ ಫೀಚರ್ಸ್ ನಿಮಗೆ ಇಷ್ಟ ಆದರೆ ಅಥವಾ ನಿಮ್ಮ ಬಜೆಟ್‌ಗೆ ಹೊಂದಿಕೆ ಆದರೆ ಈ ಫೋನ್ ಖರೀದಿಸಿ.

ಒಪ್ಪೋ A78 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 720x1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಹೊಂದಿದ್ದು, ಬಳಕೆದಾರರಿಗೆ ಗೇಮಿಂಗ್ ಹಾಗೂ ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ.
ಒಪ್ಪೋ A78 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದಿದೆ. ಅಲ್ಲದೆ 1TB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಲು ಎಸ್‌ಡಿ ಕಾರ್ಡ್ ಆಯ್ಕೆ ಸಹ ನೀಡಲಾಗಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ.
ಒಪ್ಪೋ A78 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒಪ್ಪೋ A78 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಸ್ಟಿರಿಯೊ ಸ್ಪೀಕರ್ ಆಯ್ಕೆ, 3.5 ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.3, A2DP, LE, aptX, ಯುಎಸ್‌ಬಿ ಟೈಪ್-ಸಿ 2.0, ಓಟಿಜಿ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.


Click it and Unblock the Notifications








