Home
Deal of the day

ಅಗ್ಗದ ಈ ಮೊಬೈಲ್‌ ಬೆಲೆಯಲ್ಲಿ ಮತ್ತೆ ಸಖತ್‌ ಇಳಿಕೆ; ಗ್ರಾಹಕರಿಗೆ ಖುಷಿ!

ಲೀಡಿಂಗ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ (Flipkart) ಆನ್‌ಲೈನ್‌ ಖರೀದಿದಾರರರಿಗೆ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದೆ. ಈ ತಾಣವು ಮುಖ್ಯವಾಗಿ ಮೊಬೈಲ್‌ಗಳಿಗೆ ಆಕರ್ಷಕ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಇದೀಗ ಪೊಕೊ ಸಂಸ್ಥೆಯ ಪೊಕೊ C61 ಸ್ಮಾರ್ಟ್‌ಫೋನ್‌ ಭಾರೀ ಬೆಲೆ ಇಳಿಕೆಯ ದರದಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಈ ಎಂಟ್ರಿ ಲೆವೆಲ್‌ ಫೋನಿನತ್ತ ಹುಬ್ಬೇರಿಸಿ ನೋಡುವಂತಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಪೊಕೊ C61 (POCO C61) ಮೊಬೈಲ್‌ ಶೇ. 33% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನಿನ 4 GB RAM + 64 GB ಸ್ಟೋರೇಜ್‌ ವೇರಿಯಂಟ್‌ 5,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರ ಜೊತೆಗೆ ಇತರೆ ಆಯ್ದ ಬ್ಯಾಂಕ್‌ ಆಫರ್‌ಗಳು ಕೂಡಾ ಗ್ರಾಹಕರಿಗೆ ಲಭ್ಯ ಆಗಲಿವೆ.

ಅಗ್ಗದ ಈ ಮೊಬೈಲ್‌ ಬೆಲೆಯಲ್ಲಿ ಮತ್ತೆ ಸಖತ್‌ ಇಳಿಕೆ; ಗ್ರಾಹಕರಿಗೆ ಖುಷಿ!

ಇಷ್ಟಲ್ಲದೇ ಈ ಮೊಬೈಲ್‌ ಡೈಮಂಡ್ ಡಸ್ಟ್ ಬ್ಲಾಕ್, ಎಥೆರಿಯಲ್ ಬ್ಲೂ ಮತ್ತು ಮಿಸ್ಟಿಕಲ್ ಗ್ರೀನ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಜೊತೆಗೆ 4GB + 64GB ಹಾಗೂ 6GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. ಹಾಗಾದರೇ ಪೊಕೊ C61 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಪೊಕೊ C61 ಸ್ಮಾರ್ಟ್‌ಫೋನ್‌ ಫೀಚರ್ಸ್

ಪೊಕೊ C61 ಮೊಬೈಲ್‌ 6.71 ಇಂಚಿನ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಅನ್ನು ಹೊಂದಿದ್ದು, 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಒಳಗೊಂಡಿದೆ. ಇದರ ಜೊತೆಗೆ 90Hz ರಿಫ್ರೆಶ್ ರೇಟ್‌ ಮತ್ತು 180Hz ಟಚ್‌ ಸ್ಯಾಂಪಲಿಂಗ್‌ ರೇಟ್‌ ಒಳಗೊಂಡಿದೆ.

ಪೊಕೊ C61 ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G36 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದ್ದು, ವಿಆರ್ GE8320 ಜಿಪಿಯು ಸಪೋರ್ಟ್‌ನೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ ಇದು ಆಂಡ್ರಾಯ್ಡ್ 14 ಓಎಸ್‌ ಬೆಂಬಲ ಒಳಗೊಂಡಿದೆ. ಅಲ್ಲದೇ ಈ ಫೋನ್‌ 4GB + 64GB ಹಾಗೂ 6GB + 128GB ಸ್ಟೋರೇಜ್‌ ವೇರಿಯಂಟ್‌ ಒಳಗೊಂಡಿದ್ದು, 6GB ವರೆಗಿನ ವರ್ಚುವಲ್ RAM ಆಯ್ಕೆ ಸಹ ಹೊಂದಿದೆ.

ಪೊಕೊ C61 ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಸೌಲಭ್ಯ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಎರಡನೇ ಕ್ಯಾಮೆರಾ ಬೇಸಿಕ್‌ ಲೆನ್ಸ್‌ ಸಪೋರ್ಟ್‌ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 5 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಪೊಕೊ C61 ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದರ ಜೊತೆಗೆ 10W ವೈರ್ಡ್ ಚಾರ್ಜಿಂಗ್ ಆಯ್ಕೆ ಒಳಗೊಂಡಿದೆ. ಅಲ್ಲದೇ ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್, 3.5mm ಆಡಿಯೊ ಜಾಕ್ ಆಯ್ಕೆ ಸಹ ಒಳಗೊಂಡಿದೆ.

ಇದಲ್ಲದೇ ಈ ಫೋನ್‌ 4G LTE, ಬ್ಲೂಟೂತ್ ಆವೃತ್ತಿ 5.4, ವೈ-ಫೈ 5 ಆಯ್ಕೆಗಳು ಸಹ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ ಡೈಮಂಡ್ ಡಸ್ಟ್ ಬ್ಲಾಕ್, ಎಥೆರಿಯಲ್ ಬ್ಲೂ ಮತ್ತು ಮಿಸ್ಟಿಕಲ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಗ್ರಾಹಕರ ಖರೀದಿ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಫೋನ್‌ ಲಭ್ಯ. ಇನ್ನು ಈ ಫೋನ್ ಏರ್‌ಟೆಲ್ ಪ್ರಿಪೇಯ್ಡ್‌ನೊಂದಿಗೆ ಲಾಕ್ ಮಾಡಲಾಗಿದೆ.

Best Mobiles in India

English summary
POCO C61 received fabulous price drop on flipkart website. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+