Realme: 128 GB ಸ್ಟೋರೇಜ್ ಆಯ್ಕೆಯ ಈ ರಿಯಲ್‌ಮಿಯ ಫೋನ್‌ಗೆ ಭಾರೀ ಡಿಸ್ಕೌಂಟ್! 108MP ಮುಖ್ಯ ಕ್ಯಾಮೆರಾ...
ಹೊಸ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಕೆಲವು ಸಮಸ್ಯೆಗಳಿಂದ ಐದಾರು ವರ್ಷದ ಹಳೆಯ ಫೋನ್ ಅನ್ನೇ ಬಳಕೆ ಮಾಡುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ, ಕೆಲವು ಫೋನ್‌ಗಳಿಗೆ ಭರ್ಜರಿ ಆಫರ್ ಸಿಗುತ್ತಿದ್ದು, ಈ ಮೂಲಕ ಜನರು ಫೋನ್ ಅನ್ನು ಸುಲಭವಾಗಿ ಖರೀದಿ ಮಾಡಬಹುದಾಗಿದೆ.
ಹೌದು, ನೀವು ಏನಾದರೂ ತುಂಬಾ ಹಳೆಯ ಫೋನ್ ಬಳಕೆ ಮಾಡುತ್ತಿದ್ದು, ಇತ್ತೀಚಿನ ಫೋನ್‌ಗೆ ಅಪ್‌ಗ್ರೇಡ್ ಆಗಬೇಕು ಎಂದುಕೊಂಡಿದ್ದರೆ ರಿಯಲ್‌ಮಿ C53 ಸ್ಮಾರ್ಟ್‌ಫೋನ್ (Realme C53 smartphone) ಅನ್ನು ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಬರೋಬ್ಬರಿ 34% ರಿಯಾಯಿತಿ ನೀಡಲಾಗಿದೆ. ಇನ್ನು ಈ ಫೋನ್ 2 TB ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಲು ಸಹ ಅನುವು ಮಾಡಿಕೊಡುತ್ತದೆ. ಹಾಗಿದ್ರೆ, ಇದರ ಆಪರ್ ಬೆಲೆ ಏನು?, ಇದರ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ C53 ಆಫರ್ ಬೆಲೆ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ನೀವೀಗ 9,199 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಪ್ರೀಮಿಯಂ ಫೀಚರ್ಸ್ ಆಯ್ಕೆ ಪಡೆದಿದ್ದು, ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ (Flipkart) ಇದಕ್ಕೆ 34% ರಿಯಾಯಿತಿ ನೀಡಿದೆ. ಅಂದರೆ ಇದರ ಸಾಮಾನ್ಯ ದರ 13,999ರೂ.ಗಳಾಗಿದೆ. ಅಲ್ಲದೆ ನೀವು ಕೆಲವು ಬ್ಯಾಂಕ್ ಆಫರ್ ಸಹ ಪಡೆದು ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದು.
ಬ್ಯಾಂಕ್ ವಿಚಾರಕ್ಕೆ ಬಂದರೆ ಫ್ಲಿಪ್‌ಕಾರ್ಟ್ ಯುಪಿಐ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 25ರೂ.ಗಳ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ, ಇದರ ಜೊತೆಗೆ ಪಾರ್ಟ್ನರ್ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್ ಪೇ ಲೇಟರ್ ಮೂಲಕ ಖರೀದಿ ಮಾಡಿದ್ರೆ 10,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಪ್ರಯೋಜನ ಸಹ ಪಡೆದುಕೊಳ್ಳಬಹುದು. ಇದರೊಂದಿಗೆ 324 ರೂ.ಗಳಿಂದ ಆರಂಭ ಆಗುವ ಇಎಂಐ ಆಯ್ಕೆ ಸಹ ಲಭ್ಯ ಇದೆ. ಹಾಗಿದ್ರೆ, ಈ ಬೆಲೆಗೆ ಈ ಫೋನ್ ಸೂಕ್ತವೇ ಅನ್ನೋದನ್ನು ಪರಿಶೀಲಿಸೋಣ ಬನ್ನಿ.

ರಿಯಲ್‌ಮಿ C53 ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.74 ಇಂಚಿನ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ರಿಫ್ರೆಶ್ ರೇಟ್ ಮತ್ತು 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಗೇಮಿಂಗ್ ಪ್ರಿಯರಿಗೆ ಹಾಗೂ ವಿಡಿಯೋ ವೀಕ್ಷಕರಿಗೆ ಉತ್ತಮ ಅನುಭವ ಸಿಗಲಿದೆ.
ರಿಯಲ್‌ಮಿ C53 ಪ್ರೊಸೆಸರ್ ವಿವರ: ಈ ಫೋನ್ ಆಂಡ್ರಾಯ್ಡ್ 13 ಅನ್ನು ರನ್ ಮಾಡಲಿದ್ದು, ಯುನಿಸಾಕ್ ಟೈಗರ್ T612 (12 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಮಾಲಿ-G57 ಜಿಪಿಯು ಬಲ ಪಡೆದುಕೊಂಡಿದ್ದು, 6GB RAM ಮತ್ತು 128GB ಇಂಟರ್ ಸ್ಟೋರೇಜ್ ಬೆಂಬಲ ಪಡೆದಿದೆ. ಅಲ್ಲದೆ ಮೊದಲೇ ತಿಳಿಸಿದಂತೆ ಮೈಕ್ರೋ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು 2 TB ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು.

ರಿಯಲ್‌ಮಿ C53 ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೆನ್ಸರ್ ಪಡೆದುಕೊಂಡಿದೆ. ಈ ಸೆನ್ಸರ್‌ಗಳು ನೋರಮಿಕ್ ವ್ಯೂ, ಎಕ್ಸ್‌ಪರ್ಟ್, ಟೈಮ್‌ಲ್ಯಾಪ್ಸ್, ಪೋರ್ಟ್ರೇಟ್ ಮೋಡ್, ಹೆಚ್‌ಡಿಆರ್, ಎಐ ಸೀನ್ ರೆಕಗ್ನಿಶನ್ , ಫಿಲ್ಟರ್, ಸ್ಲೋ ಮೋಷನ್, ಬೊಕೆ ಎಫೆಕ್ಟ್ ಕಂಟ್ರೋಲ್ ಸೇರಿದಂತೆ ಅನೇಕ ಫೀಚರ್ಸ್ ಪಡೆದಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ C53 ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಫಿಂಗರ್‌ಪ್ರಿಂಟ್ ಸೆನ್ಸರ್ (ಸೈಡ್-ಮೌಂಟೆಡ್), ಅಕ್ಸೆಲೆರೊಮೀಟರ್, ಗೈರೊ, 4G LTE, GSM, WCDMA ಬೆಂಬಲಿತ ನೆಟ್‌ವರ್ಕ್, ಯುಎಸ್‌ಬಿ ಟೈಪ್-ಸಿ 2.0, ಬ್ಲೂಟೂತ್ ಆವೃತ್ತಿ v5.0, ವೈ-ಫೈ ಆವೃತ್ತಿ IEEE 802.11 a/b/g/n/ac) ಆಡಿಯೋ ಜ್ಯಾಕ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದುಕೊಂಡಿದೆ. ನಿಮಗೆ ಈ ಫೋನ್ ಇಷ್ಟವಾದರೆ ಇದನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಬಹುದು. ಅಮೆಜಾನ್‌ನಲ್ಲೂ ಸಹ ಇತರೆ ವೇರಿಯಂಟ್‌ಗೆ ಉತ್ತಮ ಆಫರ್ ಇದೆ ಗಮನಿಸಿ.


Click it and Unblock the Notifications








