Home
Deal of the day

ವಾವ್! 10,000 ರಿಯಾಯಿತಿ.. 5500mAh ಬ್ಯಾಟರಿ.. 512GB ಸ್ಟೋರೇಜ್.. ಈ Realme ಫೋನಿಗೆ ಬಿಗ್ ಆಫರ್

ರಿಯಲ್‌ಮಿ ಪ್ರಿಯರಿಗೆ ಇಲ್ಲಿದೆ ವ್ಯಾಲೆಂಟೈನ್ಸ್ ಡೇ ಬಿಗ್ ಆಫರ್‌! ಬರೋಬ್ಬರಿ 10,000 ರೂ.ಗಳ ರಿಯಾಯಿತಿಯೊಂದಿಗೆ ಈ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಲಭ್ಯವಿದೆ. ಹೌದು, ನಾವು ರಿಯಲ್‌ಮಿ GT 6T 5G (Realme GT 6T 5G) ಸ್ಮಾರ್ಟ್‌ಫೋನ್ ಬಗ್ಗೆ ಹೇಳುತ್ತಿದ್ದೇವೆ. ಪ್ರಸ್ತುತ, ಅಮೆಜಾನ್ ವ್ಯಾಲೆಂಟೈನ್ಸ್ ಡೇ ಸೇಲ್‌ನಲ್ಲಿ (amazon valentines day sale) ಈ ಸ್ಮಾರ್ಟ್‌ಫೋನ್‌ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬನ್ನಿ, ಈ ಫೋನಿನ ಮೂಲ ಬೆಲೆ ಎಷ್ಟು? ಆಫರ್ ಬೆಲೆ ಎಷ್ಟು? ಇದು ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ತಿಳಿಯೋಣ.

ರಿಯಲ್‌ಮಿ GT 6T 5G ಸ್ಮಾರ್ಟ್‌ಫೋನ್‌ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 12GB RAM + 512GB ಸ್ಟೋರೇಜ್‌, 5500mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಪ್ರಸ್ತುತ, ಈ ಫೋನಿಗೆ ಯಾವೆಲ್ಲಾ ಆಫರ್‌ ಲಭ್ಯವಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

10000 ರಿಯಾಯಿತಿ! Realme GT 6T ಫೋನಿಗೆ ಬಿಗ್ ಆಫರ್; ಹೊಸ ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ GT 6T 5G ಹೊಸ ಬೆಲೆ ಮತ್ತು ಆಫರ್‌

ರಿಯಲ್‌ಮಿ GT 6T 5G ಮೊಬೈಲ್ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ನೀವು 8GB RAM + 128GB ಸ್ಟೋರೇಜ್, 8GB RAM + 256GB ಸ್ಟೋರೇಜ್, 12GB RAM + 256GB ಸ್ಟೋರೇಜ್, 12GB RAM + 512GB ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದು. ಪ್ರಸ್ತುತ, 8GB RAM + 256GB ಸ್ಟೋರೇಜ್ ರೂಪಾಂತರಗಳನ್ನು ದೊಡ್ಡ ಡಿಸ್ಕೌಂಟ್ ಬೆಲೆಯಲ್ಲಿ ಕೊಳ್ಳಬಹುದು. ಇದು ಅಮೆಜಾನ್‌ನಲ್ಲಿ ಶೇ.19 ರಷ್ಟು ನೇರ ರಿಯಾಯಿತಿಯಲ್ಲಿ ಖರೀದಿಸಲು ಲಭ್ಯವಿದೆ.

ಫೋನಿನ ಮೂಲ ಬೆಲೆ 35,999 ರೂ. ಆಗಿದೆ, ಪ್ರಸ್ತುತ 28,998 ರೂ.ಗೆ ಲಭ್ಯವಿದೆ. ಜೊತೆಗೆ 3000 ರೂ.ಗಳ ಕೂಪನ್ ಆಫರ್‌ ಸಹ ಲಭ್ಯವಿದೆ. ನೀವು 3000 ರೂ. ಕೂಪನ್ ಆಫರ್ ಬಳಸಿದರೆ, ಈ ರಿಯಲ್‌ಮಿ GT 6T 5G ಫೋನಿನ ಅಂತಿಮ ಆಫರ್ ಬೆಲೆ 25,998 ರೂ.ಗೆ ಇಳಿಕೆಯಾಗಲಿದೆ. ಅಂದರೆ ಮೂಲ ಬೆಲೆಗಿಂತ 10,000 ರೂ.ಗಳಷ್ಟು ಕಡಿಮೆ ಬೆಲೆಗೆ ಈ ಫೋನನ್ನು ಖರೀದಿ ಮಾಡಬಹುದು. ಈ ಸ್ಮಾರ್ಟ್‌ಫೋನ್ 3 ಬಣ್ಣಗಳಲ್ಲಿ ಲಭ್ಯವಿದೆ. ನೀವು ಹಸಿರು, ಬೆಳ್ಳಿ ಮತ್ತು ನೇರಳೆ ಬಣ್ಣಗಳಲ್ಲಿ ಆರ್ಡರ್ ಮಾಡಬಹುದು.

ಈ ಸುದ್ದಿ ಓದಿದ್ದೀರಾ?: Valentine's Day Offer: ಪ್ರೇಮಿಗಳ ದಿನಕ್ಕೆ ಧಮಾಕಾ ಆಫರ್‌! ಈ OPPO ಫೋನ್‌ಗಳಿಗೆ 10,000 ಡಿಸ್ಕೌಂಟ್‌.. ಇಲ್ಲಿದೆ ಪಟ್ಟಿ

ರಿಯಲ್‌ಮಿ GT 6T 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ GT 6T 5G ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 6000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ.

ಕ್ವಾಲ್ಕಾಮ್ ಪ್ರೊಸೆಸರ್‌

ರಿಯಲ್‌ಮಿ GT 6T 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್ ಆಧಾರಿತ ರಿಯಲ್‌ಮಿ UI 5 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 732 ಜಿಪಿಯು ಸಹ ಹೊಂದಿದೆ. ಈ ಫೋನಿನಲ್ಲಿ 12GB RAM ಮತ್ತು 512GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ.

10000 ರಿಯಾಯಿತಿ! Realme GT 6T ಫೋನಿಗೆ ಬಿಗ್ ಆಫರ್; ಹೊಸ ಬೆಲೆ, ವಿಶೇಷತೆಗಳೇನು?

ಡ್ಯುಯಲ್ ಕ್ಯಾಮೆರಾ ಸೆಟಪ್

ರಿಯಲ್‌ಮಿ GT 6T 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬಿಗ್ ಬ್ಯಾಟರಿ ಬ್ಯಾಕಪ್

ರಿಯಲ್‌ಮಿ GT 6T 5G ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ಕೇವಲ 10 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ರಿಯಲ್‌ಮಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಬ್ಲೂಟೂತ್ 5.2, ವೈ-ಫೈ 6, ಜಿಪಿಎಸ್, ಯುಎಸ್‌ಬಿ 2.0 ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme GT 6T 5G gets huge discount on amazon valentines day sale: check new price and specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+