Home
Deal of the day

Realme: ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಇದೀಗ ಭರ್ಜರಿ ಆಫರ್‌ನಲ್ಲಿ ಲಭ್ಯ!

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphones) ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗೆ ಹೆಸರುವಾಸಿಯಾಗಿವೆ. ಈ ನಡುವೆ ಪ್ರಮುಖ ಇ ಕಾಮರ್ಸ್‌ ಸೈಟ್‌ಗಳಲ್ಲಿ ಈ ಫೋನ್‌ಗಳಿಗೆ ಆಫರ್ ನೀಡಲಾಗುತ್ತಿದ್ದು, ಅದರಂತೆ ಈಗ ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ (Realme Narzo 50A Prime Smartphone) ಸಹ ಆಫರ್ ಬೆಲೆಯಲ್ಲಿ ಲಭ್ಯ ಇದೆ.

ಹೌದು, ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಅನ್ನು ನೀವು ಇದೀಗ ಆಫರ್ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 4 GB RAM ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್‌ ಕ್ಯಾಮೆರಾದೊಂದಿಗೆ ಲಭ್ಯ ಇದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಏನು?, ಇದರ ಪ್ರಮುಖ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಇದೀಗ ಭರ್ಜರಿ ಆಫರ್‌ನಲ್ಲಿ ಲಭ್ಯ!

ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್‌ಫೋನ್ 13,499 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು ಕೇವಲ 8,949 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ ಈ ಫೋನ್‌ಗೆ ಆಫರ್ ಘೋಷಣೆ ಮಾಡಿದೆ. ಅದೂ ಸಹ 33% ರಿಯಾಯಿತಿ. ಇದಿಷ್ಟೇ ಅಲ್ಲದೆ ನೀವು ಬ್ಯಾಂಕ್‌ ಆಫರ್ ಸಹ ಪಡೆಯಬಹುದಾಗಿದೆ.

ಫ್ಲಿಪ್‌ಕಾರ್ಟ್ ಯುಪಿಐ ವ್ಯವಹಾರದಲ್ಲಿ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಲೇಟರ್ ಪೇ ಮೂಲಕ ಪಾವತಿ ಮಾಡಿದ್ರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಹಲವು ಬ್ಯಾಂಕ್‌ ಆಫರ್ ಲಭ್ಯ ಇವೆ.

ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.6 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹಾಗೂ 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಕಾಣಬಹುದಾಗಿದೆ. ಇದರೊಂದಿಗೆ 84.4% ಸ್ಕ್ರೀನ್-ಟು-ಬಾಡಿ ಅನುಪಾತ, 400 ppi ಸಾಂದ್ರತೆ ಹೊಂದಿದ್ದು, ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ.

ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಇದೀಗ ಭರ್ಜರಿ ಆಫರ್‌ನಲ್ಲಿ ಲಭ್ಯ!

ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಹಾಗೆಯೇ ಈ ಫೋನ್ ಆಂಡ್ರಾಯ್ಡ್ 11, ರಿಯಲ್‌ಮಿ ಯುಐ 2.0 ಓಎಸ್‌ ಅನ್ನು ರನ್‌ ಮಾಡಲಿದ್ದು, ಯುನಿಸಾಕ್ ಟೈಗರ್ T612 (12 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಮಾಲಿ-G57 ಜಿಪಿಯು ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಹಾಗೆಯೇ ಆಫರ್ ಬೆಲೆಯಲ್ಲಿ ಲಭ್ಯ ಇರುವ ಫೋನ್ 64GB + 4GB RAM ಸ್ಟೋರೇಜ್‌ ವೇರಿಯಂಟ್ ನಲ್ಲಿ ಲಭ್ಯ ಇದೆ.

ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅದರಲ್ಲಿ 50 ಮೆಗಾಪಿಕ್ಸೆಲ್‌, f/1.8, 26mm (ಅಗಲ), 1/2.76", 0.64µm, PDAF, 2 ಮೆಗಾಪಿಕ್ಸೆಲ್‌, f/2.4, ಮ್ಯಾಕ್ರೋ, 0.3 ಮೆಗಾಪಿಕ್ಸೆಲ್‌, f/2.8, ಡೆಪ್ತ್‌ ಸೆನ್ಸರ್‌ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಅನ್ನು ಕಾಣಬಹುದಾಗಿದೆ ಮತ್ತು 8 ಮೆಗಾಪಿಕ್ಸೆಲ್‌, f/2.0 ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 18W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ 3.5 ಎಂಎಂ ಜ್ಯಾಕ್, ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬಿಡಿಎಸ್ ಸ್ಥಾನೀಕರಣ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಾಣಬಹುದಾಗಿದೆ.

Best Mobiles in India

English summary
You can now buy the Realme Narzo 50A Prime smartphone at an offer price. This phone is available with 4 GB RAM option and 50 megapixel camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+