Home
Deal of the day

Realme: ರಿಯಲ್‌ಮಿಯ ಈ ಫೋನ್‌ಗಿದೆ 23% ರಿಯಾಯಿತಿ! 8 GB RAM.. 64MP ಕ್ಯಾಮೆರಾ..

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ರಿಯಲ್‌ಮಿ 12 5G ಸರಣಿ (Realme 12 5G series) ಫೋನ್‌ಗಳನ್ನೂ ಸಹ ಲಾಂಚ್‌ ಮಾಡಿದ್ದು, ಈ ಮೂಲಕ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ. ಅದರಂತೆ ಈಗ ಬಜೆಟ್‌ ಬೆಲೆಯ ಹಳೆಯ ಫೋನ್‌ 23% ರಿಯಾಯಿತಿ ದರದಲ್ಲಿ ಲಭ್ಯ ಇದೆ.

ಹೌದು, ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ (Realme Narzo 60 5G smartphone) ಇದೀಗ ಆಫರ್ ಬೆಲೆಗೆ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 5000 mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಇತರೆ ಪ್ರಮುಖ ಫೀಚರ್ಸ್‌ ಅನ್ನು ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿಯ ಈ ಫೋನ್‌ಗಿದೆ 23% ರಿಯಾಯಿತಿ! 8 GB RAM.. 64MP ಕ್ಯಾಮೆರಾ..

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್‌ಫೋನ್‌ ಅನ್ನು ನೀವೀಗ 23% ರಿಯಾಯಿತಿ ಜೊತೆಗೆ 15,349 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ನ ಸಾಮಾನ್ಯ ದರ 19,999ರೂ.ಗಳಾಗಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ದರದಲ್ಲಿ ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಂಡು ಈ ಫೋನ್‌ ಖರೀದಿ ಮಾಡಬಹುದು.

ಫ್ಲಿಪ್‌ಕಾರ್ಟ್‌ ಯುಪಿಐ ಬಳಸಿಕೊಂಡು ಖರೀದಿ ಮಾಡಿದ್ರೆ 25 ರೂ.ಗಳ ತ್ವರಿತ ರಿಯಾಯಿತಿ, ಹೆಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಇಎಮ್‌ಐ ವ್ಯವಹಾರದ ಮೇಲೆ 2,500 ರಿಯಾಯಿತಿ ಸಿಗಲಿದೆ. ಇದರಿಂದ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ರಿಯಲ್‌ಮಿಯ ಈ ಫೋನ್‌ಗಿದೆ 23% ರಿಯಾಯಿತಿ! 8 GB RAM.. 64MP ಕ್ಯಾಮೆರಾ..

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.43 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ರಿಫ್ರೆಶ್‌ ರೇಟ್‌, 1080 x 2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿದೆ.

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಈ ಫೋನ್ ಆಂಡ್ರಾಯ್ಡ್ 13, ರಿಯಲ್‌ಮಿ ಯುಐ 4.0 ಓಎಸ್‌ ಅನ್ನು ರನ್‌ ಮಾಡಲಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6020 (7 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಮಾಲಿ-G57 MC2 ಜಿಪಿಯು ಬಲ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲದೊಂದಿಗೆ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಹೊಂದಿದೆ. ಅದರಲ್ಲಿ 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ನ ಡೆಪ್ತ್‌ ಸೆನ್ಸರ್‌ ಇದ್ದು, ಇವು ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಅನ್ನು ಪಡೆದಿವೆ. ಹಾಗೆಯೇ 1080p@30fps ಸಾಮರ್ಥ್ಯದ ವಿಡಿಯೋವನ್ನು ರೆಕಾರ್ಡ್‌ ಮಾಡಬಹುದು. ಉಳಿದಂತೆ ಈ ಫೋನ್ 16 ಮೆಗಾಪಿಕ್ಸೆಲ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದೆ.

ರಿಯಲ್‌ಮಿಯ ಈ ಫೋನ್‌ಗಿದೆ 23% ರಿಯಾಯಿತಿ! 8 GB RAM.. 64MP ಕ್ಯಾಮೆರಾ..

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 33W ವೈರ್ಡ್ ಚಾರ್ಜಿಂಗ್‌ ಬೆಂಬಲ ಪಡೆದಿದೆ. ಇದರ ಜೊತೆಗೆ 3.5 ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಜಿಪಿಎಸ್‌, ಗೆಲಿಲಿಯೊ, ಗ್ಲೋನಾಸ್, ಬಿಡಿಎಸ್‌, ಯುಎಸ್‌ಬಿ ಟೈಪ್ ಸಿ 2.0 ಕನೆಕ್ಟಿವಿಟಿ ಪಡೆದಿದೆ.

Best Mobiles in India

English summary
Realme Narzo 60 5G smartphone is now available at an offer price. This smartphone has got 64 megapixel main camera, 5000 mAh capacity battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+