Home
Deal of the day

realme: ಇದು ಮತ್ತೆ ಸಿಗಲ್ಲ! 50MP ಕ್ಯಾಮೆರಾ, 5000mAh ಬ್ಯಾಟರಿ.. ಭಾರೀ ಆಫರ್ ಘೋಷಣೆ; ಎಷ್ಟಕ್ಕೆ ಸಿಗುತ್ತೆ?

ರಿಯಲ್‌ಮಿ ಮೊಬೈಲ್ ಪ್ರಿಯರಿಗೆ ಅಮೆಜಾನ್ ಮತ್ತೊಂದು ಆಫರ್ ತಂದಿದೆ. ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದ್ದ ಈ ಟರ್ಬೊ 5G ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಕಂಪನಿಯು ಕಳೆದ ವರ್ಷ ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಇದು ಬಜೆಟ್ ಶ್ರೇಣಿಯಲ್ಲಿ ಲಭ್ಯವಿದೆ. ಈ ಫೋನ್ ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಈ ಫೋನನ್ನು ಪ್ರಸ್ತುತ, ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಈ ಆಫರ್ ಅಮೆಜಾನ್‌ನಲ್ಲಿ ಲಭ್ಯವಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ನೀವು ಟರ್ಬೊ ಹಳದಿ, ಟರ್ಬೊ ಬೂದು ಮತ್ತು ಟರ್ಬೊ ಹಸಿರು ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ ವಿಶೇಷತೆಗಳೆಂದರೆ, ಇದು ಮಿಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿಗೆ ಯಾವೆಲ್ಲ ಆಫರ್ ಇದೆ ಮತ್ತು ಮೂಲ ಬೆಲೆ ತಿಳಿಯಲು ಮುಂದೆ ಓದಿ.

realme: ಭಾರೀ ಆಫರ್ ಘೋಷಣೆ..! ಜಬರ್ದಸ್ತ್ ಫೀಚರ್ಸ್; ಎಷ್ಟಿತ್ತು? ಎಷ್ಟಾಗಿದೆ?

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಹೊಸ ಬೆಲೆ

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವನ್ನು 16,999 ರೂ.ಗೆ ಬಿಡುಗಡೆ ಮಾಡಲಾಯಿತು. 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 17,999 ರೂ. ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ವೇರಿಯಂಟ್ 20,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, ಅಮೆಜಾನ್‌ನಲ್ಲಿ ಈ ಫೋನಿನ ಆರಂಭಿಕ ಬೆಲೆ 14,998 ರೂ. ಆಗಿದೆ. ನೀವು 1500 ರಿಯಾಯಿತಿಯನ್ನು (ಕೂಪನ್ ಮೂಲಕ) ಪಡೆಯಬಹುದು. 8GB RAM ರೂಪಾಂತರದ ಬೆಲೆ 16,498 ರೂ. ಇದೆ. ಕೂಪನ್ ಮೂಲಕ ನೀವು 2000 ರೂ. ರಿಯಾಯಿತಿಯನ್ನು ಪಡೆಯಬಹುದು. ಡಿಸ್ಕೌಂಟ್‌ನೊಂದಿಗೆ ಈ ಫೋನ್ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ವೈಶಿಷ್ಟ್ಯಗಳು

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಇದರೊಂದಿಗೆ 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಈ ಡಿಸ್ಪ್ಲೇ AG DT Star 2 ಗಾಜಿನ ರಕ್ಷಣೆಯನ್ನು ಹೊಂದಿದೆ. ಈ ರಿಯಲ್‌ಮಿ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಪ್ರೊಸೆಸರ್‌ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ನೊಂದಿಗೆ ಕೆಲಸ ಮಾಡುತ್ತದೆ.

realme: ಭಾರೀ ಆಫರ್ ಘೋಷಣೆ..! ಜಬರ್ದಸ್ತ್ ಫೀಚರ್ಸ್; ಎಷ್ಟಿತ್ತು? ಎಷ್ಟಾಗಿದೆ?

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಲಭ್ಯವಿದೆ. ಈ ರಿಯಲ್‌ಮಿ 5G ಸ್ಮಾರ್ಟ್‌ಫೋನ್ 5,00mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಹಲವು ಎಐ ಫೀಚರ್ಸ್‌ಗಳನ್ನು ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಜೊತೆಗೆ ಮಳೆ ನೀರಿನ ಟಚ್ ವೈಶಿಷ್ಟ್ಯ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್ 5.4, ವೈ-ಫೈ, ಡ್ಯುಯಲ್ ಸ್ಟಿರಿಯೊ, ಸ್ಪೀಕರ್, ಏರ್ ಮತ್ತು ಗೆಸ್ಚರ್, ಫ್ಲ್ಯಾಷ್ ಕ್ಯಾಪ್ಸುಲ್, ರೀಡಿಂಗ್ ಮೋಡ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme NARZO 70 Turbo 5G Available With 15 percent discount on amazon: Know offers, price, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+