Realme: ಸಿಹಿಸುದ್ದಿ.. ಈ ಜನಪ್ರಿಯ ಫೋನಿಗೆ ಬೊಂಬಾಟ್ ಆಫರ್.. ಮತ್ತೆ ಬೆಲೆ ಇಳಿಕೆ! ಇಷ್ಟು ಕಡಿಮೆನಾ?
ರಿಯಲ್‌ಮಿ ಪ್ರಿಯರಿಗೆ ಇದಕ್ಕಿಂತ ಖುಷಿ ಸುದ್ದಿ ಮತ್ತೊಂದಿಲ್ಲ! ನೀವು 15,000 ರೂ.ಗಳ ಬಜೆಟ್‌ನಲ್ಲಿ ಉತ್ತಮ ರಿಯಲ್‌ಮಿ ಮೊಬೈಲ್ ಖರೀದಿಸಲು ಬಯಸಿದರೆ, ಈ ಅವಕಾಶ ಕಳೆದುಕೊಳ್ಳಬೇಡಿ. ಹೌದು, ಕಂಪನಿಯ ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಸ್ಮಾರ್ಟ್‌ಫೋನ್ ಅನ್ನು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ 5G ಫೋನನ್ನು 6GB RAM, 8GB RAM ಮತ್ತು 12GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಎಲ್ಲಾ ಮೂರು RAM ರೂಪಾಂತರಗಳು ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ ಕಳೆದ ಸೆಪ್ಟೆಂಬರ್ (2024) ತಿಂಗಳಲ್ಲಿ ಬಿಡುಗಡೆಯಾಗಿತ್ತು. ಇದು ಮಿಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಇದರೊಂದಿಗೆ 1,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಡಿಸ್ಪ್ಲೇಯು AG DT Star 2 ಗಾಜಿನ ರಕ್ಷಣೆಯೊಂದಿಗೆ ಬರುತ್ತದೆ.
ಶಕ್ತಿಶಾಲಿ ಪ್ರೊಸೆಸರ್
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5.0 ಜೊತೆಗೆ ಕೆಲಸ ಮಾಡುತ್ತದೆ.
ಡ್ಯುಯಲ್ ಕ್ಯಾಮೆರಾ ರಚನೆ
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಇದರೊಂದಿಗೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಲೆನ್ಸ್ ಪಡೆದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಲಭ್ಯವಿದೆ.
ಅದ್ಭುತ ಬ್ಯಾಟರಿ ಬ್ಯಾಕಪ್
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ ನೀರು ನಿರೋಧಕ IP65 ರೇಟಿಂಗ್, ಮಳೆ ನೀರಿನ ಟಚ್ ವೈಶಿಷ್ಟ್ಯ ಹೊಂದಿದೆ. ಜೊತೆಗೆ, ವೈ-ಫೈ, ಬ್ಲೂಟೂತ್ 5.4, ಡ್ಯುಯಲ್ ಸ್ಟಿರಿಯೊ, ಸ್ಪೀಕರ್, ಏರ್ ಮತ್ತು ಗೆಸ್ಚರ್, ಫ್ಲ್ಯಾಷ್ ಕ್ಯಾಪ್ಸುಲ್, ರೀಡಿಂಗ್ ಮೋಡ್ ಸೇರಿದಂತೆ ಹಲವು ಎಐ ಫೀಚರ್ಸ್‌ಗಳನ್ನು ಹೊಂದಿದೆ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಬೆಲೆ ಮತ್ತು ಆಫರ್
6GB RAM + 128GB ಸ್ಟೋರೇಜ್ ಬೆಲೆ = 16,999 ರೂ.
ಹೊಸ ಬೆಲೆ = 15,999 ರೂ.
8GB RAM + 128GB ಸ್ಟೋರೇಜ್ ಬೆಲೆ = 17,999 ರೂ.
ಹೊಸ ಬೆಲೆ = 16,999 ರೂ.
12GB RAM + 256GB ಸ್ಟೋರೇಜ್ ಬೆಲೆ = 20,999 ರೂ.
ಹೊಸ ಬೆಲೆ = 19,999 ರೂ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ಖರೀದಿ ಮೇಲೆ 1,000 ರೂ. ರಿಯಾಯಿತಿ ಲಭ್ಯವಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಈ ಡಿಸ್ಕೌಂಟ್‌ನ ಲಾಭ ಪಡೆಯಬಹುದು. ಈ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ, ಈ ರಿಯಲ್‌ಮಿ 5G ಫೋನನ್ನು 1,000 ರೂ. ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಅಮೆಜಾನ್‌ನಲ್ಲಿ 1 ರೂ. ಹೆಚ್ಚುವರಿ ಡಿಸ್ಕೌಂಟ್ ಲಭ್ಯವಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.


Click it and Unblock the Notifications








