Realme: ರಿಯಲ್‌ಮಿಯ ಈ ಫೇಮಸ್ ಫೋನ್‌ಗೆ 36% ರಿಯಾಯಿತಿ! 128 GB ROM.. 64MP ಕ್ಯಾಮೆರಾ
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಬಹು ಬೇಡಿಕೆ ಇರುವ ರಿಯಲ್‌ಮಿ ಫೋನ್ ಭಾರೀ ಆಫರ್ ಬೆಲೆಗೆ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದೆ
ಹೌದು, ಬಜೆಟ್ ಬೆಲೆಯಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡವರು ಇದೀಗ ರಿಯಲ್‌ಮಿ ನಾರ್ಜೊ N55 (Realme Narzo N55) ಸ್ಮಾರ್ಟ್‌ಫೋನ್ ಅನ್ನು ಕೊಂಡುಕೊಳ್ಳಬಹುದಾಗಿದೆ. ಈ ಫೋನ್‌ಗೆ ದೊಡ್ಡ ಮಟ್ಟದ ಆಫರ್ ನೀಡಲಾಗಿದೆ. ಹಾಗೆಯೇ ಈ ಫೋನ್ 128 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಅಫರ್ ಬೆಲೆ ವಿವರ ಇಲ್ಲಿದೆ ನೋಡಿ.

ರಿಯಲ್‌ಮಿ ನಾರ್ಜೊ N55 ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ ಅನ್ನು ನೀವು ಈಗ 9,599 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಪ್ರಮುಖ ಇ- ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ಬಿಗ್ ಅಫರ್ ನೀಡಿದೆ. ಅಂದರೆ 14,999 ರೂ.ಗಳ ಸಾಮಾನ್ಯ ಬೆಲೆ ಇರುವ ಈ ಫೋನ್‌ಗೆ 36% ರಿಯಾಯಿತಿ ನೀಡಲಾಗಿದೆ. ಈ ಕಾರಣಕ್ಕೆ ಇಷ್ಟು ಕಡಿಮೆ ದರದಲ್ಲಿ ಈ ಫೋನ್ ನಿಮಗೆ ಲಭ್ಯ ಆಗುತ್ತಿರುವುದು. ಇದರ ಜೊತೆಗೆ ಕೆಲವು ಬ್ಯಾಂಕ್ ಆಫರ್ ಸಹ ಇದೆ.
ಈ ಫೋನ್ ಖರೀದಿ ವೇಳೆ ನೀವು ಫ್ಲಿಪ್‌ಕಾರ್ಟ್ ಯುಪಿಐ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 25ರೂ.ಗಳ ರಿಯಾಯಿತಿ, ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಮ್ಐ ವ್ಯವಹಾರದ ಮೇಲೆ 10% ರಿಯಾಯಿತಿ, ಹೆಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸಿಗಲಿದೆ. ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ಅನ್ನು ಖರೀದಿ ಮಾಡಬಹುದು. ಹಾಗಿದ್ರೆ, ಈ ಫೋನ್‌ನ ಕೆಲವು ಫೀಚರ್ಸ್ ಕಡೆ ಕಣ್ಣಾಯಿಸೋಣ ಬನ್ನಿ.

ರಿಯಲ್‌ಮಿ ನಾರ್ಜೊ N55 ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.72 ಇಂಚಿನ ಐಪಿಎಸ್ ಎಲ್‌ಸಿಡಿ 109.0 cm2 (~86.7% ಸ್ಕ್ರೀನ್-ಟು-ಬಾಡಿ ಅನುಪಾತ) ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 680 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹಾಗೂ 90Hz ರಿಫ್ರೆಶ್ ರೇಟ್ ಹೊಂದಿದೆ. ಇದರ ಜೊತೆಗೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಉತ್ತಮ ವೀಕ್ಷಣೆ ಅನುಭವ ನೀಡಲಿದೆ.
ರಿಯಲ್‌ಮಿ ನಾರ್ಜೊ N55 ಪ್ರೊಸೆಸರ್ ವಿವರ: ಈ ಫೋನ್ ಆಂಡ್ರಾಯ್ಡ್ 13, ರಿಯಲ್‌ಮಿ ಯುಐ 4.0 ಓಎಸ್ ಅನ್ನು ರನ್ ಮಾಡಲಿದ್ದು, ಮೀಡಿಯಾಟೆಕ್ MT6769H ಹಿಲಿಯೊ G88 (12nm) ಪ್ರೊಸೆಸರ್ ಬಲ ಪಡೆದುಕೊಂಡಿದೆ. ಹಾಗೆಯೇ ಮಾಲಿ-G52 MC2 ಜಿಪಿಯು ಬಲದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಹೊಂದಿದೆ.
ರಿಯಲ್‌ಮಿ ನಾರ್ಜೊ N55 ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹೊಂದಿದ್ದು, ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು,ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್ ಆಗಿರಲಿದೆ.

ರಿಯಲ್‌ಮಿ ನಾರ್ಜೊ N55 ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 33W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಅಂದರೆ 29 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ. ಉಳಿದಂತೆ ಈ ಫೋನ್ 3.5 ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.2, A2DP, LE
ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬಿಡಿಎಸ್ ಸ್ಥಾನೀಕರಣ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದಿದೆ.


Click it and Unblock the Notifications








