ಈ ಮೊಬೈಲ್ ಈಗ ಇನ್ನಷ್ಟು ಸಸ್ತಾ ಬೆಲೆಗೆ ಲಭ್ಯ.. ಗ್ರಾಹಕರು ಫುಲ್ ಖುಷ್!
ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಎನಿಸಿರುವ ಅಮೆಜಾನ್ (Amazon) ಈಗಾಗಲೇ ರಿಯಾಯಿತಿ ಕೊಡುಗೆಗಳ ಮೂಲಕ ಆನ್‌ಲೈನ್ ಖರೀದಿದಾರರ ಗಮನ ಸೆಳೆದಿದೆ. ಅಮೆಜಾನ್ ಹಬ್ಬದ ಹಾಗೂ ವಿಶೇಷ ದಿನಗಳಂದು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಡಿಸ್ಕೌಂಟ್ ಸೇಲ್ ಮೇಳಗಳನ್ನು ಆಯೋಜಿಸುತ್ತದೆ. ಪ್ರಸ್ತುತ ಅಮೆಜಾನ್ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಅನ್ನು ಘೋಷಿಸಿದ್ದು, ಅದಕ್ಕೂ ಮುನ್ನ ಅಮೆಜಾನ್ ಕಿಕ್‌ಸ್ಟಾರ್ಟರ್ ಡೀಲ್ಸ್ (kickstarter deals) ಲೈವ್ ಮಾಡಿದ್ದು, ಸಖತ್ ಆಫರ್‌ಗಳನ್ನು ತಿಳಿಸಿದೆ.
ಹೌದು, ಅಮೆಜಾನ್ ಕಿಕ್‌ಸ್ಟಾರ್ಟರ್ ಡೀಲ್ಸ್ (kickstarter deals) ನಲ್ಲಿ ಅಗ್ಗದ ದರದ ಮೊಬೈಲ್‌ಗಳು ಬೊಂಬಾಟ್ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಅವುಗಳ ಪೈಕಿ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ ನಾರ್ಜೋ N61 (realme NARZO N61) ಫೋನ್ ಶೇ. 17% ರಷ್ಟು ಡಿಸ್ಕೌಂಟ್‌ನಲ್ಲಿ ಲಭ್ಯ ಇದೆ. ಆರಂಭಿಕ ವೇರಿಯಂಟ್ 7,498ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಬ್ಯಾಂಕ್ ಆಫರ್ ಸಹ ಸಿಗಲಿವೆ.

ಇನ್ನು ಈ ಫೋನಿನ 4 GB RAM + 64 GB ವೇರಿಯಂಟ್ ಹಾಗೂ 6 GB RAM + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದೆ. ಹಾಗೆಯೇ ಇದು ಆಕ್ಟಾ ಕೋರ್ Unisoc T612 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, 32 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಪಡೆದಿದೆ. ಹಾಗಾದರೆ ರಿಯಲ್‌ಮಿ ನಾರ್ಜೋ N61 (Realme Narzo N61) ಮೊಬೈಲ್‌ನ ಇತರೆ ಫೀಚರ್ಸ್ ಯಾವುವು ಹಾಗೂ ಆಫರ್ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ ನಾರ್ಜೋ N61 ಮೊಬೈಲ್ ಫೀಚರ್ಸ್
ರಿಯಲ್‌ಮಿ ನಾರ್ಜೋ N61 ಫೋನ್ ಅನ್ನು 6.74 ಇಂಚಿನ ದೊಡ್ಡ ಡಿಸ್‌ಪ್ಲೇ ಅನ್ನು ಇದು ಪಡೆದುಕೊಂಡಿದೆ. ಇದು 90hz ರಿಫ್ರೆಶ್ ರೇಟ್ ಬೆಂಬಲ ಮಾಡುತ್ತದೆ ಮತ್ತು 560 nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಮಿನಿ ಕ್ಯಾಪ್ಸುಲ್ 2.0 ವೈಶಿಷ್ಟ್ಯದೊಂದಿಗೆ ಫೋನ್ ಅನ್ನು ಪರಿಚಯಿಸಲಾಗಿದೆ.
ರಿಯಲ್‌ಮಿ ನಾರ್ಜೋ N61 ಫೋನ್ ಆಕ್ಟಾ ಕೋರ್ Unisoc T612 ಚಿಪ್‌ಸೆಟ್ ಪ್ರೊಸೆಸರ್ ಪಡೆದಿದೆ. ಇದು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಅವುಗಳು ಕ್ರಮವಾಗಿ 4 GB RAM + 64 GB ವೇರಿಯಂಟ್ ಹಾಗೂ 6 GB RAM + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳು ಆಗಿವೆ. ಇನ್ನು ಈ ಫೋನ್ 6GB ವರ್ಚುವಲ್ RAM ಸೌಲಭ್ಯ ಸಹ ಪಡೆದಿದೆ.
ರಿಯಲ್‌ಮಿ ನಾರ್ಜೋ N61 ( Realme Narzo N61 ) ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ 32 ಮೆಗಾ ಪಿಕ್ಸಲ್ ಸೂಪರ್ ಕ್ಲಿಯರ್ ಕ್ಯಾಮೆರಾ ಆಗಿದೆ. ಅಲ್ಲದೇ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾ ಪಿಕ್ಸಲ್ ಸೆನ್ಸಾರ್ ಲೆನ್ಸ್ ಒದಗಿಸಲಾಗಿದೆ.
ರಿಯಲ್‌ಮಿ ನಾರ್ಜೋ N61 ( Realme Narzo N61 ) ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಈ ಫೋನ್ 30 ಗಂಟೆಗಳ ಧ್ವನಿ ಕರೆಗಳನ್ನು ಮತ್ತು 1013 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಉಳಿದಂತೆ IP54 ರೇಟಿಂಗ್ ಸೌಲಭ್ಯ ಸಹ ಪಡೆದಿದೆ.


Click it and Unblock the Notifications








