Home
Deal of the day

Realme P1 Pro 5G ಬೆಲೆ ಇಳಿಕೆ: 2,500 ಡಿಸ್ಕೌಂಟ್ ಸಿಗುತ್ತೆ.. ಹೊಸ ಬೆಲೆ ಎಷ್ಟು ಗೊತ್ತಾ?

ರಿಯಲ್‌ಮಿ ಕಂಪನಿಯು ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ರಿಯಲ್‌ಮಿ P1 ಪ್ರೊ 5G (Realme P1 Pro 5G) ಫೋನ್‌ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ. ಹೌದು, ನೀವು ಈ ಫೋನ್ ಖರೀದಿಸಿದರೆ 2,500 ರೂ.ಗಳ ರಿಯಾಯಿತಿ ಪಡೆಯಬಹುದು. ಪ್ರಸ್ತುತ, ಕಂಪನಿಯು ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ ಎಕ್ಸ್‌ಚೇಂಜ್‌ ಆಫರ್‌ಗಳನ್ನು ಸಹ ಘೋಷಿಸಿದೆ. ನೀವು ಈ ಮೊಬೈಲ್ ಅನ್ನು ಬಿಡುಗಡೆ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ರಿಯಲ್‌ಮಿ P1 ಪ್ರೊ 5G ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಫೋನ್‌ 6.7 ಇಂಚಿನ FHD+ ಕರ್ವ್ಡ್ ವಿಷನ್ OLED ಡಿಸ್ಪ್ಲೇ, Snapdragon 6 Gen 1 ಚಿಪ್‌ಸೆಟ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಫೋನ್ ಫೋನ್ 5000mAh ಬ್ಯಾಟರಿ ಮತ್ತು 45W SuperVOOC ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Realme P1 Pro 5G ಬೆಲೆ ಇಳಿಕೆ: 2,500 ರೂ. ಅಗ್ಗ.. ಹೊಸ ಬೆಲೆ ಎಷ್ಟು?

ರಿಯಲ್‌ಮಿ P1 ಪ್ರೊ 5G ಬೆಲೆ ಮತ್ತು ಆಫರ್‌ಗಳು

8GB + 128GB ಮೂಲ ಬೆಲೆ = 21,999 ರೂ.
ಡಿಸ್ಕೌಂಟ್ ಬೆಲೆ = 19,499 ರೂ.

8GB + 256GB ಬಿಡುಗಡೆ ಬೆಲೆ = 22,999 ರೂ.
ಡಿಸ್ಕೌಂಟ್ ಬೆಲೆ = ರೂ 20,499

12GB + 256GB ಬಿಡುಗಡೆ ಬೆಲೆ = 23,499 ರೂ.
ಡಿಸ್ಕೌಂಟ್ ಬೆಲೆ = ರೂ 20,999

ರಿಯಲ್‌ಮಿ P1 ಪ್ರೊ 5G ಫೋನ್ ಫೀನಿಕ್ಸ್ ರೆಡ್ ಮತ್ತು ಪ್ಯಾರಟ್ ಬ್ಲೂ ಬಣ್ಣದಲ್ಲಿ ಲಭ್ಯವಿದೆ. ಪ್ರಸ್ತುತ 2,500 ರೂ. ವರೆಗೆ ರಿಯಾಯಿತಿಯೊಂದಿಗೆ ಖರೀದಿಸಬಹುದು. ಡಿಸ್ಕೌಂಟ್‌ ನಂತರ ಮೂಲ ಮಾದರಿ 8GB + 128GB ಬೆಲೆ 19,499 ರೂ.ಗೆ ಇಳಿಕೆಯಾಗಲಿದೆ. ಈ ಫೋನಿನ 8GB + 256GB ಸ್ಟೋರೇಜ್‌ ಬೆಲೆ 20,499 ರೂ.ಗೆ ಲಭ್ಯವಿದೆ. ಟಾಪ್ ವೇರಿಯಂಟ್ 12GB + 256GB ಬೆಲೆ 20,999 ರೂ.ಗೆ ಮಾರಾಟವಾಗುತ್ತಿದೆ.

ಫೋನ್‌ನ ಮೂಲ ಮತ್ತು ಮಿಡ್ ಮಾಡೆಲ್‌ಗಳಲ್ಲಿ 2,000 ರೂ.ಗಳ ಬ್ಯಾಂಕ್ ಆಫರ್ ಲಭ್ಯವಿದೆ. ಟಾಪ್ ಮಾಡೆಲ್‌ನಲ್ಲಿ 1,500 ರೂ. ಆಫರ್‌ ಇದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಜೊತೆಗೆ, ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. ನಿಮ್ಮ ಹಳೆಯ ಫೋನ್‌ನ ಸ್ಥಿತಿಗೆ ಅನುಗುಣವಾಗಿ 14,800 ರೂಪಾಯಿ ವರೆಗೆ ರಿಯಾಯಿತಿ ಪಡೆಯಬಹುದು. ಈ ಫೋನನ್ನು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

ರಿಯಲ್‌ಮಿ P1 ಪ್ರೊ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ರಿಯಲ್‌ಮಿ P1 ಪ್ರೊ 5G ಫೋನ್ 6.7 ಇಂಚಿನ FHD+ ಕರ್ವ್ಡ್ ವಿಷನ್ OLED ಡಿಸ್ಪ್ಲೇ ಹೊಂದಿದೆ. ಇದು 2412 x 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 950 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ.

ಪ್ರೊಸೆಸರ್: ಇದು Qualcomm Snapdragon 6 Gen 1 5G ಚಿಪ್‌ಸೆಟ್ ಹೊಂದಿದೆ. ಇದು 3D VC ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ Android 14 ಆಧಾರಿತ Realme UI 5.0ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 3 ವರ್ಷಗಳ ಭದ್ರತಾ ನವೀಕರಣಗಳು ಮತ್ತು 2 ವರ್ಷಗಳ OS ನವೀಕರಣಗಳನ್ನು ಪಡೆಯಬಹುದು. ಈ ಫೋನ್ 12GB RAM + 256GB ಇಂಟರ್ನಲ್ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಜೊತೆಗೆ, ಡೈನಾಮಿಕ್ RAMನ ಸೌಲಭ್ಯವಿದೆ.

ಈ ಸುದ್ದಿ ಓದಿದ್ದೀರಾ?: iPhone 16 vs 16 pro vs 16 pro max: ಇದಕ್ಕಿಂತ ಉತ್ತಮ ಫೋನ್​ಗಳಿಲ್ಲ! ಯಾವುದು ಬೆಸ್ಟ್? ಬೆಲೆ ಎಷ್ಟು?

ಕ್ಯಾಮೆರಾ: ರಿಯಲ್‌ಮಿ P1 ಪ್ರೊ 5G ಮೊಬೈಲ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: ರಿಯಲ್‌ಮಿ P1 ಪ್ರೊ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W SuperVOOC ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ.

ಇತರೆ ವೈಶಿಷ್ಟ್ಯಗಳು: ಈ ಫೋನ್ 2.4 ರಿಂದ 5GHz ವೈ-ಫೈ, ಬ್ಲೂಟೂತ್ 5.2, IP65 ರೇಟಿಂಗ್, ರೇನ್‌ವಾಟರ್ ಟಚ್ ವೈಶಿಷ್ಟ್ಯ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಹೈ ರೆಸ್ ಡ್ಯುಯಲ್ ಸ್ಪೀಕರ್‌ಗಳು, 9 5G ಬ್ಯಾಂಡ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+