Home
Deal of the day

REDMI: ರೆಡ್ಮಿಯ ಈ ಫೋನ್‌ಗೆ 20% ರಿಯಾಯಿತಿ! ಭಾರೀ ಹಣ ಉಳಿತಾಯ

ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphones) ಅದರಲ್ಲೂ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳು ವಿಶೇಷ ಬೇಡಿಕೆ ಪಡೆದಿದ್ದು, ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ರೆಡ್ಮಿಯ ಫೋನ್‌ವೊಂದಕ್ಕೆ ಭಾರೀ ಆಫರ್ ನೀಡಲಾಗಿದೆ. ಈ ಫೋನ್ 4 GB RAM ಹೊಂದಿದೆ.

ಹೌದು, ರೆಡ್ಮಿ 11 ಪ್ರೈಮ್ ಸ್ಮಾರ್ಟ್‌ಫೋನ್‌ಗೆ (Redmi 11 Prime Smartphone) ಇದೀಗ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ಬಜೆಟ್‌ ಬೆಲೆಯಲ್ಲಿ ಉತ್ತಮ ಫೋನ್‌ ಎನಿಸಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

REDMI: ರೆಡ್ಮಿಯ ಈ ಫೋನ್‌ಗೆ 20% ರಿಯಾಯಿತಿ! ಭಾರೀ ಹಣ ಉಳಿತಾಯ

ರೆಡ್ಮಿ 11 ಪ್ರೈಮ್ ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಬಂಫರ್ ಆಫರ್ ನೀಡಲಾಗಿದೆ. ಅಂದರೆ ಈ ಫೋನ್‌ನ ಬೆಲೆ 14,999 ರೂ.ಗಳಾಗಿದ್ದು, ನೀವೀಗ ಇದನ್ನು 20% ರಿಯಾಯಿತಿ ಪಡೆಯುವ ಮೂಲಕ 11,987 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್‌ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಈ ಫೋನ್ ಖರೀದಿ ವೇಳೆ ಫ್ಲಿಪ್ ಕಾರ್ಟ್‌ ಯುಪಿಐ ಬಳಕೆ ಮಾಡಿದ್ರೆ ತ್ವರಿತ ರಿಯಾಯಿತಿ, ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 1,250 ರೂ.ಗಳ ರಿಯಾಯಿತಿ, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಪೇ ಲೇಟರ್‌ ಮೂಲಕ ಖರೀದಿ ಮಾಡಿದ್ರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ನೀಡಲಾಗುತ್ತದೆ. ಅಲ್ಲದೆ ಇನ್ನೂ ಹಲವಾರು ಬ್ಯಾಂಕ್‌ ಆಫರ್ ಅನ್ನು ನೀಡಲಾಗಿದೆ.

REDMI: ರೆಡ್ಮಿಯ ಈ ಫೋನ್‌ಗೆ 20% ರಿಯಾಯಿತಿ! ಭಾರೀ ಹಣ ಉಳಿತಾಯ

ರೆಡ್ಮಿ 11 ಪ್ರೈಮ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.58 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ರಿಫ್ರೆಶ್‌ ರೇಟ್‌ ಹಾಗೂ ~401 ppi ಸಾಂದ್ರತೆಯೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿದೆ.

ರೆಡ್ಮಿ 11 ಪ್ರೈಮ್ ಪ್ರೊಸೆಸರ್‌ ಮಾಹಿತಿ: ಇನ್ನು ಈ ಫೋನ್ ಆಂಡ್ರಾಯ್ಡ್ 12, ಎಂಐಯುಐ 13 ಓಎಸ್‌ ಅನ್ನು ರನ್‌ ಮಾಡಲಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 700 (7 nm)ಆಕ್ಟಾ-ಕೋರ್ (2x2.2 GHz ಕಾರ್ಟೆಕ್ಸ್-A76 & 6x2.0 GHz ಕಾರ್ಟೆಕ್ಸ್-A55) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಮಾಲಿ-G57 MC2 ಜಿಪಿಯು ಬಲ ಪಡೆದುಕೊಂಡಿದೆ. ಹಾಗೆಯೇ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

REDMI: ರೆಡ್ಮಿಯ ಈ ಫೋನ್‌ಗೆ 20% ರಿಯಾಯಿತಿ! ಭಾರೀ ಹಣ ಉಳಿತಾಯ

ರೆಡ್ಮಿ 11 ಪ್ರೈಮ್ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಅಂದರೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಹೊಂದಿದ್ದು, ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ.

ರೆಡ್ಮಿ 11 ಪ್ರೈಮ್ ಬ್ಯಾಟರಿ ಹಾಗೂ ಇತರೆ:ಇನ್ನು ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 18W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ 3.5 ಎಂಎಂ ಜ್ಯಾಕ್, ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.1, A2DP, LE, ಜಿಪಿಎಸ್, ಗ್ಲೋನಾಸ್, ಬಿಡಿಎಸ್, ಗೆಲಿಲಿಯೋ ಸ್ಥಾನೀಕರಣ, ಯುಎಸ್‌ಬಿ ಟೈಪ್ ಸಿ 2.0, OTG ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
An offer for the Redmi 11 Prime smartphone has now been announced on a leading e-commerce site. This smartphone has got a 50 megapixel main camera option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+