Redmi: ರೆಡ್ಮಿ 12C ಸ್ಮಾರ್ಟ್‌ಫೋನ್‌ಗೆ ಇಷ್ಟೊಂದು ರಿಯಾಯಿತಿಯೇ? 50MP ಕ್ಯಾಮೆರಾ .. 128 GB ಸ್ಟೋರೇಜ್
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ರೆಡ್ಮಿ ಸಹ ಪ್ರಮುಖವಾಗಿದ್ದು, ಈ ನಡುವೆ ನೀವು ಏನಾದರೂ ರೆಡ್ಮಿ (Redmi) ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡರೆ ರೆಡ್ಮಿ 12C ಕಡೆ ಕಣ್ಣಾಯಿಸಬಹುದು. ಯಾಕೆಂದರೆ ಈ ಫೋನ್‌ಗೆ ಬರೋಬ್ಬರಿ 41% ರಿಯಾಯಿತಿ ನೀಡಲಾಗಿದೆ.
ಹೌದು, ರೆಡ್ಮಿ 12C ಸ್ಮಾರ್ಟ್‌ಫೋನ್ (Redmi 12C smartphone) ಇದೀಗ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಈ ಫೋನ್ 128 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಪಡೆದಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಏನು?, ಇದರ ಆಫರ್ ಬೆಲೆ ಎಷ್ಟು?, ಬ್ಯಾಂಕ್ ಕೊಡುಗೆ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರೆಡ್ಮಿ 12C ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 15,999ರೂ.ಗಳಾಗಿದ್ದು, ನೀವೀಗ ಇದನ್ನು 9,281 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ 41% ರಿಯಾಯಿತಿ ಪಡೆದುಕೊಂಡಿದೆ. ಅದಾಗ್ಯೂ ಈ ಫೋನ್‌ಗೆ ಕೆಲವು ಬ್ಯಾಂಕ್ ಆಫರ್ ಸಹ ಇದ್ದು ಇನ್ನೂ ಕಡಿಮೆ ದರದಲ್ಲಿ ಇದನ್ನು ಖರೀದಿ ಮಾಡಬಹುದು.
ಫ್ಲಿಪ್‌ಕಾರ್ಟ್ ಯುಪಿಐ ಮೂಲಕ ಖರೀದಿ ಮಾಡಿದ್ರೆ 25 ರೂ.ಗಳ ತ್ವರಿತ ರಿಯಾಯಿತಿ ಸಿಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ 5% ಕ್ಯಾಶ್‌ಬ್ಯಾಕ್ ಸಿಗಲಿದ್ದು, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್ ಪೇ ಲೇಟರ್ ಮೂಲಕ ಖರೀದಿ ಮಾಡಿದ್ರೆ 10,000 ರೂ.ಗಳ ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಾಗಿದ್ರೆ ಬನ್ನಿ ಈ ಫೋನ್‌ನ ಕೆಲವು ಫೀಚರ್ಸ್ ಕಡೆಯೂ ಕಣ್ಣಾಯಿಸೋಣ.

ರೆಡ್ಮಿ 12C ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.71 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 500 ನಿಟ್ಸ್ ಗರಿಷ್ಠ ಬ್ರೈಟ್ ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 720 x 1650 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಈ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.
ರೆಡ್ಮಿ 12C ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಂಡ್ರಾಯ್ಡ್ 12, ಎಂಐಯುಐ 13 ಓಎಸ್ ಅನ್ನು ರನ್ ಮಾಡಲಿದ್ದು, ಮೀಡಿಯಾಟೆಕ್ MT6769Z ಹಿಲಿಯೊ G85 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮಾಲಿ-G52 MC2 ಜಿಪಿಯು ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ ಆಫರ್ ಬೆಲೆಗೆ ಲಭ್ಯ ಇರುವ ಫೋನ್ ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲದೊಂದಿಗೆ 128GB ಇಂಟರ್ ಸ್ಟೋರೇಜ್ ಹಾಗೂ 6GB RAM ಆಯ್ಕೆ ಪಡೆದಿದೆ.
ರೆಡ್ಮಿ 12C ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಹಾಗೂ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಹಾಗೂ 0.08 MP (ಆಕ್ಸಿಲಿಯರಿ ಲೆನ್ಸ್) ಅನ್ನು ಹೊಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಸೆನ್ಸರ್‌ಗಳು
ಎಲ್ಇಡಿ ಫ್ಲ್ಯಾಶ್, ಹೆಚ್‌ಡಿಆರ್ ಫೀಚರ್ಸ್ ಆಯ್ಕೆ ಪಡೆದಿವೆ.

ರೆಡ್ಮಿ 12C ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಇನ್ನು ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ 3.5 ಎಂಎಂ ಜ್ಯಾಕ್, ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.1, A2DP, LE,
ಜಿಪಿಎಸ್, ಗ್ಲೋನಾಸ್, ಬಿಡಿಎಸ್, ಗೆಲಿಲಿಯೋ ಸ್ಥಾನೀಕರಣ, ಮೈಕ್ರೋಯುಎಸ್‌ಬಿ 2.0 ಸೇರಿದಂತೆ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.


Click it and Unblock the Notifications








