Home
Deal of the day

Redmi ಸಂಸ್ಥೆಯ ಈ 5G ಮೊಬೈಲ್‌ ಈಗ 10,000ರೂ. ಒಳಗೆ ಲಭ್ಯ!

ಅಮೆಜಾನ್‌ (Amazon) ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಫೆವರೇಟ್‌ ತಾಣ ಎನಿಸಿಕೊಂಡಿದೆ. ತನ್ನ ಗ್ರಾಹಕರಿಗಾಗಿ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಹಬ್ಬದ ದಿನಗಳಲ್ಲಿಯೂ ಬೊಂಬಾಟ್‌ ಸೇಲ್‌ಗಳನ್ನು ನಡೆಸುತ್ತಾ ಸಾಗಿದೆ. ಸದ್ಯ ಇದೀಗ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಅನ್ನು ಘೋಷಿಸಿದ್ದು, ಗ್ರಾಹಕರ ಗಮನ ಸೆಳೆದಿದೆ. ಈ ಮಾರಾಟ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲೇ ಅಮೆಜಾನ್ ಕಿಕ್‌ಸ್ಟಾರ್ಟರ್ ಡೀಲ್ಸ್‌ (kickstarter deals) ಶುರು ಮಾಡಿದೆ.

ಹೌದು, ಅಮೆಜಾನ್ ಕಿಕ್‌ಸ್ಟಾರ್ಟರ್ ಡೀಲ್ಸ್‌ (kickstarter deals) ನಲ್ಲಿ ಆಯ್ದ ಕೆಲವು ಮೊಬೈಲ್‌ಗಳು ಅತ್ಯುತ್ತಮ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಅವುಗಳ ಪೈಕಿ ಶಿಯೋಮಿ, ಸ್ಯಾಮ್‌ಸಂಗ್‌, ಐಕ್ಯೂ, ಒಪ್ಪೋ, ರಿಯಲ್‌ಮಿ ಮತ್ತು ಹಲವು ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ದೊರೆಯುತ್ತಿದೆ. ರೆಡ್ಮಿ ಸಂಸ್ಥೆಯ ರೆಡ್ಮಿ 13C ಫೋನ್‌ ಶೇ. 34% ರಷ್ಟು ಡಿಸ್ಕೌಂಟ್‌ನಲ್ಲಿ ಲಭ್ಯ ಇದೆ. ಆರಂಭಿಕ ವೇರಿಯಂಟ್‌ 9,199ರೂ. ಗಳಿಗೆ ಲಭ್ಯ.

Redmi ಸಂಸ್ಥೆಯ ಈ 5G ಮೊಬೈಲ್‌ ಈಗ 10,000ರೂ. ಒಳಗೆ ಲಭ್ಯ!

ಅಂದಹಾಗೆ ರೆಡ್ಮಿ 13C ಫೋನ್‌ 4G RAM+128GB ವೇರಿಯಂಟ್, 6GB + 128GB ಸ್ಟೋರೇಜ್‌ ವೇರಿಯಂಟ್‌ ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಮಾದರಿಯಲ್ಲಿ ಖರೀದಿಗೆ ಲಭ್ಯ. ಹಾಗಾದರೆ ರೆಡ್ಮಿ 13C 5G ಫೋನಿನ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 13C 5G - ಫೀಚರ್ಸ್‌ ಹೀಗಿವೆ
ರೆಡ್ಮಿ ನೋಟ್‌ 13 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದೆ. ಇದರೊಂದಿಗೆ ಡಿಸ್‌ಪ್ಲೇಯು 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದ್ದು, 1920Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್‌ ಅನ್ನು ಸಪೋರ್ಟ್ ಮಾಡುತ್ತದೆ.

ರೆಡ್ಮಿ ನೋಟ್‌ 13 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಸಪೋರ್ಟ್‌ ನೊಂದಿಗೆ ರನ್‌ ಆಗಲಿದೆ. ಹಾಗೆಯೇ 6GB RAM + 128GB ಹಾಗೂ 8GB RAM+ 256 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯ. ಇದರೊಂದಿಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ರೆಡ್ಮಿ ನೋಟ್‌ 13 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ರೆಡ್ಮಿ ನೋಟ್‌ 13 ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದು 33W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5 ಎಂಎಂ ಆಡಿಯೊ ಜಾಕ್, 5G SA, NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.3, GPS + GLONASS, USB ಟೈಪ್-C ಚಾರ್ಜಿಂಗ್‌ ಸಪೋರ್ಟ್‌ ಮಾಡುತ್ತದೆ.

Best Mobiles in India

English summary
Redmi 13C 5G available at massive discount price on amazon website. check details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+