20 ಸಾವಿರದೊಳಗೆ ಲಭ್ಯ ಭಾರತದಲ್ಲಿನ ಈ ಟಾಪ್ 5 ಅತ್ಯುತ್ತಮ ಫೋನ್‌ಗಳು!
ಭಾರತದಲ್ಲಿ ಈಗಾಗಲೇ ವಿವಿಧ ರೀತಿಯ ಸ್ಮಾರ್ಟ್‌ಫೋನ್‌ಗಳು ಸದ್ದು ಮಾಡುತ್ತಿವೆ. ಹೊಸದಾಗಿ ಲಾಂಚ್ ಆಗುವ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ನೊಂದಿಗೆ ಪ್ಯಾಕ್ ಆಗಿದ್ದು, ಬಳಕೆದಾರರಿಗೆ ಭಿನ್ನ ಅನುಭವ ನೀಡಲಿವೆ. ಈ ನಡುವೆ ಭಾರತದ ಟಾಪ್ ಐದು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಗಮನ ಸೆಳೆದಿವೆ.
ಹೌದು, ಅಗ್ಗದ ಬೆಲೆಯಲ್ಲಿ, ಮಿಡ್ ರೇಟ್ ಹಾಗೂ ದುಬಾರಿ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಲಭ್ಯ ಇದ್ದು, ಈ ನಡುವೆ ಕೆಲವು ಫೋನ್‌ಗಳು ಕೈಗೆಟಕುವ ದರ ಹೊಂದಿದ್ದರೂ ಸಹ ಪ್ರೀಮಿಯಂ ಫೀಚರ್ಸ್ ಪಡೆಯುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಉಂಟು ಮಾಡಿವೆ. ಆ ಫೋನ್‌ಗಳ ಸಾಲಿಗೆ ರೆಡ್ಮಿ ನೋಟ್ 12, ಮೊಟೊ G73, ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಫೋನ್‌ಗಳು ಸೇರಿವೆ. ಹಾಗಿದ್ರೆ, 20 ಸಾವಿರದ ಒಳಗೆ ಲಭ್ಯ ಇರುವ ಈ ಫೋನ್‌ಗಳ ಪ್ರಮುಖ ಫೀಚರ್ಸ್ ತಿಳಿಯಲು ಈ ಲೇಖನ ಓದಿರಿ.

ರೆಡ್ಮಿ ನೋಟ್ 12: ಈ ರೆಡ್ಮಿ ನೋಟ್ 12 (Redmi Note 12 ) ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 1200ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹೊಂದಿದ್ದು, ಇದರ ಫುಲ್ ಹೆಚ್‌ಡಿ + ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ವಿಡಿಯೋ ಹಾಗೂ ಗೇಮ್ ಆಡುವಾಗ ವಿಭಿನ್ನ ಅನುಭವ ನೀಡುತ್ತದೆ. ಅದರಲ್ಲೂ ಈ ಫೋನ್‌ನಲ್ಲಿನ 48MP ಪ್ರಾಥಮಿಕ ಸೆನ್ಸರ್, 8MP ಅಲ್ಟ್ರಾವೈಡ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಆಯ್ಕೆ ಇನ್ನಷ್ಟು ಪ್ರಯೋಜನ ನೀಡಲಿದ್ದು, ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರ ಬೆಲೆ 16,999ರೂ.ಗಳು.
ಐಕ್ಯೂZ7 :ಈ ಐಕ್ಯೂZ7(iQOO Z7)ಫೋನ್ 6.38ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 90Hzರಿಫ್ರೆಶ್ ರೇಟ್ ಆಯ್ಕೆ ಮೂಲಕ ಉತ್ತಮ ಎನಿಸಿದೆ. ಜೊತೆಗೆ ಕ್ಯಾಮೆರಾ ವಿಚಾರದಲ್ಲಿ 64MPರಿಯರ್ ಕ್ಯಾಮರಾ ಮತ್ತು 16MPಸೆಲ್ಫಿ ಕ್ಯಾಮೆರಾ ಹೊಂದಿದ್ದು, ಆಕರ್ಷಕ ವಿಡಿಯೋ ಹಾಗೂ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿ. ಇನ್ನುಳಿದಂತೆ ಈ ಫೋನ್ 5,000mAhಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 44W ವೇಗದ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲ ಪಡೆದಿದೆ. ಈ ಎಲ್ಲಾ ಆಕರ್ಷಕ ಫೀಚರ್ಸ್‌ನೊಂದಿಗೆ ಈ ಫೋನ್ ಅನ್ನು ನೀವು 18,999ರೂ.ಗಳಿಗೆ ಕೊಂಡುಕೊಳ್ಳಬಹುದು.
ಮೊಟೊ G73: ಮೊಟೊ G73 (Moto G73) ಸ್ಮಾರ್ಟ್‌ಫೋನ್ 6.5ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 120Hzರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 8GB RAM ಆಯ್ಕೆ ಹೊಂದಿದ್ದು, 8MPಅಲ್ಟ್ರಾ-ವೈಡ್ ಲೆನ್ಸ್ ಹಾಗೂ 50MPಪ್ರಾಥಮಿಕ ಶೂಟರ್ ಕ್ಯಾಮೆರಾ ರಚನೆ ಪಡೆದಿದೆ. ಇನ್ನುಳಿದಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 30Wವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಬೆಲೆ 18,999ರೂ.ಗಳು.
ರಿಯಲ್‌ಮಿ 10 ಪ್ರೊ 5G : ರಿಯಲ್‌ಮಿ 10 ಪ್ರೊ 5G (realme 10 Pro 5G)ಫೋನ್ 120Hzರಿಫ್ರೆಶ್ ರೇಟ್ ಆಯ್ಕೆ ಜೊತೆಗೆ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 2MP ಡೆಪ್ತ್ ಶೂಟರ್ ಹಾಗೂ 108MPಕ್ಯಾಮೆರಾ ಸೆನ್ಸರ್ ಆಯ್ಕೆ ಪಡೆದಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 695SoC ಪ್ರೊಸೆಸರ್‌ನಿಂದ ಕೆಲಸ ಮಾಡಲಿದ್ದು,8G BRAM ಆಯ್ಕೆ ಸಹ ಇದೆ. ಉಳಿದಂತೆ 5,000mAhಸಾಮರ್ಥ್ಯದ ಬ್ಯಾಟರಿ ಹಾಗೂ 33W ವೇಗದ ಚಾರ್ಜಿಂಗ್ ಇದರಲ್ಲಿದೆ. ಇದರ ಬೆಲೆ 18,999ರೂ.ಗಳಾಗಿದೆ.

ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G :ಈ ಫೋನ್ (OnePlus Nord CE 3 Lite 5G) 6.7ಇಂಚಿನ ಫುಲ್ ಹೆಚ್‌ಡಿ+ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ನೊಂದಿಗೆ 2MP ಮ್ಯಾಕ್ರೋ ಲೆನ್ಸ್ ಹಾಗೂ 2MPಡೆಪ್ತ್ ಸೆನ್ಸರ್ ಕ್ಯಾಮೆರಾದ ಜೊತೆ 108MPಪ್ರಾಥಮಿಕ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 67Wವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಬೆಲೆ 19,999ರೂ.ಗಳಾಗಿದೆ.


Click it and Unblock the Notifications








