Home
Deal of the day

Redmi: ರೆಡ್ಮಿ ನೋಟ್‌ 13 ಪ್ರೊ ಖರೀದಿದಾರರಿಗೆ ಗುಡ್‌ ನ್ಯುಸ್! 'ಸ್ಮಾರ್ಟ್ ಬಂಡಲ್' ನಲ್ಲಿ ಭರ್ಜರಿ ಆಫರ್

ಸ್ಮಾರ್ಟ್‌ಫೋನ್‌ (Smartphone) ಅನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಅದರಲ್ಲೂ ಆಫರ್ ಬೆಲೆಗೆ ಖರೀದಿ ಮಾಡಲು ಮುಂದಾಗಿದ್ದರೆ ಈ ಸಮಯ ಉತ್ತಮ. ಯಾಕೆಂದರೆ ಶಿಯೋಮಿ ವಿಶೇಷ ಸ್ಮಾರ್ಟ್ ಬಂಡಲ್ (Smart Bundle) ಅನ್ನು ಘೋಷ‍ಣೆ ಮಾಡಿದ್ದು, ಇದರಲ್ಲಿ ನೀವು ಫೋನ್‌ ಜೊತೆಗೆ ಇಯರ್‌ಬಡ್ಸ್‌ ಅನ್ನೂ ಸಹ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಹೌದು, ನೀವು ರೆಡ್ಮಿ ನೋಟ್‌ 13 ಪ್ರೊ ಮತ್ತು ರೆಡ್ಮಿ ಬಡ್ಸ್‌ 5 (Redmi Note 13 Pro, Redmi Buds 5) ಅನ್ನು ಒಟ್ಟಿಗೆ ಖರೀದಿಸಲು ಮುಂದಾಗಿದ್ದರೆ ಶಿಯೋಮಿ ಸ್ಮಾರ್ಟ್ ಬಂಡಲ್ ಸರಿಯಾದ ಆಯ್ಕೆ ಆಗಿದೆ. ಮಿ.ಕಾಮ್‌ ನಲ್ಲಿ ನೀವು ಎರಡೂ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು. ಹಾಗಿದ್ರೆ, ಇವೆರಡಕ್ಕೂ ಬೆಲೆ ಎಷ್ಟು?, ಈ ಫೋನ್‌ನ ಫೀಚರ್ಸ್‌ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರೆಡ್ಮಿ ನೋಟ್‌ 13 ಪ್ರೊ ಖರೀದಿದಾರರಿಗೆ ಗುಡ್‌ ನ್ಯುಸ್!

ಶಿಯೋಮಿ ಸ್ಮಾರ್ಟ್ ಬಂಡಲ್: ಶಿಯೋಮಿ ಭಾರತದಲ್ಲಿ ರೆಡ್ಮಿ ನೋಟ್‌ 13 ಪ್ರೊ 5G ಅನ್ನು ಜನವರಿ 2024 ರಲ್ಲಿ ಲಾಂಚ್ ಮಾಡಿತ್ತು. ಇತ್ತೀಚಿನ ಬೆಲೆ ಕಡಿತವು ಡಿವೈಸ್ ಅನ್ನು ಖರೀದಿದಾರರಿಗೆ ಇನ್ನಷ್ಟು ಅಗ್ಗವಾಗಿಸಿದೆ. ನೀವು ಖರೀದಿಸಲು ಯೋಜಿಸಿದರೆ ಸ್ಮಾರ್ಟ್ ಬಂಡಲ್ ಇನ್ನೂ ಉತ್ತಮ ವ್ಯವಹಾರವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬಂಡಲ್‌ನಲ್ಲಿ, ಖರೀದಿದಾರರು ಡಿವೈಸ್‌ನ ಮೂಲ ವೇರಿಯಂಟ್‌ ಅನ್ನು ಮಾತ್ರ ಆಯ್ಕೆ ಮಾಡಬಹುದು.

ಅಂದರೆ 8GB + 128GB ಸ್ಟೋರೇಜ್‌ನ ಮೂಲ ವೇರಿಯಂಟ್‌ 24,999 ರೂ. ಗಳಾಗಿದ್ದು, ಇದು ಕೋರಲ್ ಪರ್ಪಲ್, ಆರ್ಕ್ಟಿಕ್ ವೈಟ್ ಮತ್ತು ಮಿಡ್ನೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ ರೆಡ್ಮಿ ಬಡ್ಸ್‌ 5 2,699 ರೂ.ಗಳ ಆಫರ್ ಬೆಲೆ ಹೊಂದಿದ್ದು, ಇದು ಫ್ಯೂಷನ್ ವೈಟ್, ಫ್ಯೂಷನ್ ಪರ್ಪಲ್ ಮತ್ತು ಫ್ಯೂಷನ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಎರಡೂ ಬೆಲೆಗಳನ್ನು ಸೇರಿಸಿದರೆ 27,698 ರೂ. ಗಳಾಗಲಿದೆ.

ಆದರೆ ಎರಡೂ ಉತ್ಪನ್ನಗಳನ್ನು ಬಂಡಲ್ ಬೆಲೆಯಲ್ಲಿ ಖರೀದಿಸುವುದರಿಂದ 26,598 ರೂ.ಗೆ ಇವನ್ನು ನೀವು ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ನೀವು ಬ್ಯಾಂಕ್ ರಿಯಾಯಿತಿಗಳ ಮೂಲಕ 3,000 ರೂ.ಗಳ ಡಿಸ್ಕೌಂಟ್‌ ಜೊತೆಗೆ ವಿನಿಮಯ ಆಫರ್ ಅನ್ನೂ ಸಹ ಪಡೆಯಬಹುದಾಗಿದೆ. ಇದರಿಂದ ನೀವು ಸಾಕಷ್ಟು ಕಡಿಮೆ ಬೆಲೆಯಲ್ಲಿ ಈ ಎರಡೂ ಡಿವೈಸ್‌ಗಳನ್ನು ಖರೀದಿ ಮಾಡಿದಂತೆ ಆಗಲಿದೆ.

ರೆಡ್ಮಿ ನೋಟ್‌ 13 ಪ್ರೊ ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.67 ಇಂಚಿನ 1.5K 120Hz ಡಿಸ್‌ಪ್ಲೇ ಹೊಂದಿದ್ದು, 1,800ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಹಾಗೂ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ 4nm ಸ್ನಾಪ್‌ಡ್ರಾಗನ್ 7s ಜನ್ 2, MIUI 14 ಆಧಾರಿತ ಆಂಡ್ರಾಯ್ಡ್‌ 13 (ಹೈಪರ್‌ಓಎಸ್, 10 ಚಾರ್ಟರ್ ಜೊತೆಗೆ 0mging ಬ್ಯಾಟರಿ) 200MP OIS + 8MP ಅಲ್ಟ್ರಾವೈಡ್ + 2MP ಮ್ಯಾಕ್ರೋ ರಿಯರ್‌ ಕ್ಯಾಮೆರ ಮತ್ತು 16MP ಸೆಲ್ಫಿ ಲೆನ್ಸ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ರೆಡ್ಮಿ ನೋಟ್‌ 13 ಪ್ರೊ ಖರೀದಿದಾರರಿಗೆ ಗುಡ್‌ ನ್ಯುಸ್!

ರೆಡ್ಮಿ ಬಡ್ಸ್ 5 ಫೀಚರ್ಸ್‌: ರೆಡ್ಮಿ ಬಡ್ಸ್ 5 ಗೆ ಬರುವುದಾದರೆ, TWS ಟೈಟಾನಿಯಂ ಡಯಾಫ್ರಾಮ್, ಹೈಬ್ರಿಡ್ 46dB ANC, ಬ್ಲೂಟೂತ್ ಆವೃತ್ತಿ 5.3, ಡ್ಯುಯಲ್ ಡಿವೈಸ್ ಪೇರಿಂಗ್, ಶಿಯೋಮಿ ಇಯರ್‌ಬಡ್ಸ್ ಆಪ್‌ ಬೆಂಬಲ, IP54 ರೇಟಿಂಗ್ ಮತ್ತು 480mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ 12.4mm ಡೈನಾಮಿಕ್ ಡ್ರೈವರ್‌ಗಳನ್ನು ಇದರಲ್ಲಿ ಕಾಣಬಹುದಾಗಿದೆ. ಮತ್ತು ಜೊತೆಗೆ ಇದು 38 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಮ್‌ ಸಾಮರ್ಥ್ಯ ಪಡೆದಿದೆ.
Best Mobiles in India

English summary
If you are planning to buy Redmi Note 13 Pro and Redmi Buds 5 together then Xiaomi Smart Bundle is the right choice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+