Redmi: ಹೊಸ ರೆಡ್ಮಿ ನೋಟ್ 13 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗೆ ವಿಶೇಷ ಆಫರ್!
ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphone) ಇಂದು ಭಾರತದಲ್ಲಿ ವಿಶೇಷ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಇತ್ತೀಚೆಗೆ ಲಾಂಚ್ ಆದ ರೆಡ್ಮಿ ನೋಟ್ 13 ಪ್ರೊ ಪ್ಲಸ್ ಹಾಗೂ ರೆಡ್ಮಿ ವಾಚ್ 3 ಆಕ್ಟಿವ್ ಸ್ಮಾರ್ಟ್‌ವಾಚ್‌ಗೆ (Redmi Note 13 Pro Plus, Redmi Watch 3 Active Smartwatch) ಭರ್ಜರಿ ಆಫರ್ ಘೋಷಣೆ ಮಾಡಿದೆ.
ಹೌದು, ರೆಡ್ಮಿ ನೋಟ್ 13 ಪ್ರೊ+ ನಲ್ಲಿನ ಬಂಡಲ್ ಕೊಡುಗೆಯಲ್ಲಿ 6,000 ರೂಪಾಯಿಗಳನ್ನು ಉಳಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಜನವರಿ 4 ರಂದು ಭಾರತದಲ್ಲಿ ಲಾಂಚ್ ಮಾಡಲಾಗಿತ್ತು. ಹಾಗಿದ್ರೆ, ಬನ್ನಿ ಈ ಫೋನ್ ಹಾಗೂ ವಾಚ್ ಅನ್ನು ಆಫರ್ ಬೆಲೆಗೆ ಎಲ್ಲಿ ಖರೀದಿ ಮಾಡುವುದು? ಈ ಡಿವೈಸ್‌ಗಳ ಫೀಚರ್ಸ್ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ರೆಡ್ಮಿ ನೋಟ್ 13 ಪ್ರೊ+ ಸ್ಮಾರ್ಟ್‌ಫೋನ್‌ಗೆ ಆಫರ್: ಶಿಯೋಮಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ (Xiaomi India Official website) ನೀವೀಗ ರೆಡ್ಮಿ ನೋಟ್ 13 ಪ್ರೊ+ ಮತ್ತು ರೆಡ್ಮಿ ವಾಚ್ 3 ಆಕ್ಟಿವ್ ಅನ್ನು ಕ್ರಮವಾಗಿ ಖರೀದಿ ಮಾಡಬಹುದಾಗಿದೆ. 8GB + 256GB ವೇರಿಯಂಟ್ ಫೋನ್ ಜೊತೆಗೆ ವಾಚ್ ಅನ್ನು 33,998 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಫ್ಯೂಷನ್ ಬ್ಲ್ಯಾಕ್, ಫ್ಯೂಷನ್ ವೈಟ್ ಮತ್ತು ಫ್ಯೂಷನ್ ಪರ್ಪಲ್ ಶೇಡ್‌ನಲ್ಲಿ ಲಭ್ಯ ಇದೆ. ಹಾಗೆಯೇ ವಾಚ್ 3 ಆಕ್ಟಿವ್ ಚಾರ್ಕೋಲ್ ಬ್ಲಾಕ್ ಮತ್ತು ಪ್ಲಾಟಿನಂ ಗ್ರೇನಲ್ಲಿ ಕಾಣಿಸಿಕೊಂಡಿದೆ.
ರೆಡ್ಮಿ ನೋಟ್ 13 ಪ್ರೊ ಪ್ಲಸ್ ಫೀಚರ್ಸ್:
ರೆಡ್ಮಿ ನೋಟ್ 13 ಪ್ರೊಪ್ಲಸ್ ಸ್ಮಾರ್ಟ್‌ಫೋನ್ 6.67 ಇಂಚಿನ 1.5K ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಹಾಗೂ 1,800ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಗೊರಿಲ್ಲಾ ಗ್ಲಾಸ್ ವಿಕ್ಟಸ್ (Gorilla Glass Victus) ರಕ್ಷಣೆಯೊಂದಿಗೆ ಬರಲಿದೆ.

ಈ ಫೋನ್‌ನ ಕಾರ್ಯಕ್ಷಮತೆ ವಿಚಾರಕ್ಕೆ ಬಂದರೆ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ. ಜೊತೆಗೆ ARM G610 MC4 ಜಿಪಿಯ ಬಲದಲ್ಲಿ ಈ ಫೋನ್ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ 13 ಆಧಾರಿತ MIUI 14 ಅನ್ನು ರನ್ ಮಾಡಲಿದೆ.
ಇದೆಲ್ಲದರ ಜೊತೆಗೆ ಈ ಫೋನ್ 200 ಮೆಗಾಪಿಕ್ಸೆಲ್ + 8 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಲೆನ್ಸ್ ಕ್ಯಾಮೆರಾ ಆಯ್ಕೆ ಪಡೆದಿದೆ. ಮತ್ತು 120W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.
ರೆಡ್ಮಿ ವಾಚ್ 3 ಅಕ್ಟಿವ್ ಫೀಚರ್ಸ್: ಈ ಸ್ಮಾರ್ಟ್‌ವಾಚ್ 1.83 ಇಂಚಿನ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 60Hz ರಿಫ್ರೆಶ್ ರೇಟ್ ಹಾಗೂ 450ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 5 ATM ವಾಟರ್ ರೆಸಿಸ್ಟೆಂಟ್ ಸೌಲಭ್ಯ ಪಡೆದಿದೆ.

ಇದರ ಜೊತೆಗೆ ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.3 ಹೊಂದಿದ್ದು, 289mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 12 ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಹಾಗೆಯೇ ಹೃದಯ ಬಡಿತ ಸೆನ್ಸರ್, ಅಕ್ಸೆಲೆರೊಮೀಟರ್ ಮತ್ತು SpO2 ನಂತಹ ಸೆನ್ಸರ್‌ಗಳನ್ನು ಈ ವಾಚ್ ನಲ್ಲಿ ಕಾಣಬಹುದು. ಈ ಮೂಲಕ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡಲಿದೆ.


Click it and Unblock the Notifications








