Home
Deal of the day

Realme: ಯುವಕರ ಫೇವರಿಟ್..! 6000mAh ಬ್ಯಾಟರಿ.. 50MP ಕ್ಯಾಮೆರಾ.. ಮತ್ತೆ ಬೆಲೆ ಇಳಿಕೆ! ಯಾವ ಫೋನ್?

ಅಮೆಜಾನ್ ರಿಯಲ್‌ಮಿ ಅಭಿಮಾನಿಗಳಿಗೆ ಅದ್ಭುತ ಆಫರ್ ನೀಡುತ್ತಿದೆ. 15 ಸಾವಿರಕ್ಕಿಂತ ಕಡಿಮೆ ಬೆಲೆಗೆ 8GB RAM ಹೊಂದಿರುವ 5G ಫೋನ್ ಖರೀದಿಸಬಹುದು..! ಈ ಮೊಬೈಲ್‌ನಲ್ಲಿ 6,000mAh ಬಿಗ್ ಬ್ಯಾಟರಿ ಮತ್ತು 50MP ಸೊಗಸಾದ ಕ್ಯಾಮೆರಾ ಲಭ್ಯವಿದೆ. ಹೌದು, ರಿಯಲ್‌ಮಿ 14x 5G (Realme 14x 5G) ಫೋನಿನ ಬೆಲೆಯನ್ನು ಇಳಿಕೆ ಮಾಡಲಾಗಿದೆ. ನೀವು ಈ ಆಫರ್ ಪಡೆಯಲು, ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ಈ ರಿಯಲ್‌ಮಿ 14x 5G ಫೋನನ್ನು ಎಲ್ಲಿ ಮತ್ತು ಹೇಗೆ ಅಗ್ಗದ ದರದಲ್ಲಿ ಖರೀದಿಸಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ (Realme) ಕಳೆದ ಡಿಸೆಂಬರ್ ತಿಂಗಳಲ್ಲಿ ತನ್ನ ಕಡಿಮೆ ಬಜೆಟ್ 5G ಫೋನ್ ರಿಯಲ್‌ಮಿ 14X ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ ತನ್ನ ಸ್ಟೈಲಿಶ್ ಲುಕ್ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಹಾಗೆಯೇ 128GB ಸ್ಟೋರೇಜ್‌, IP69 ರೇಟಿಂಗ್‌ ಮತ್ತು 45W ವೇಗದ ಚಾರ್ಜಿಂಗ್ ಒಳಗೊಂಡಿದೆ. ಈ ಮೊಬೈಲ್ ಅನ್ನು ಎರಡು ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಸಬಹುದು. ಈ ಫೋನಿನ ಹೊಸ ಬೆಲೆ ಮತ್ತು ಆಫರ್ ಬಗ್ಗೆ ಇಲ್ಲಿದೆ ಮಾಹಿತಿ.

Realme: ಯುವಕರ ಫೇವರಿಟ್..! ಮತ್ತೆ ಬೆಲೆ ಇಳಿಕೆ.. ಸೂಪರ್ ಫೀಚರ್ಸ್‌.. ಯಾವ ಫೋನ್?

15,000ಕ್ಕಿಂತ ಕಡಿಮೆ ಬೆಲೆಗೆ ಮಾರಾಟ

ರಿಯಲ್‌ಮಿ 14x 5G ಫೋನಿನ 8GB RAM ಅನ್ನು 15,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್, ಈ ಫೋನನ್ನು 1,500 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ. ನೀವು ಕೇವಲ 14,499 ರೂ.ಗಳಿಗೆ ಖರೀದಿಸಬಹುದು. ಇದು ಪ್ರಸ್ತುತ ಮೊಬೈಲ್‌ನ ಮಾರಾಟದ ಬೆಲೆಯಾಗಿದ್ದು, ಎಲ್ಲಾ ಗ್ರಾಹಕರು ಅಗ್ಗದ ದರದಲ್ಲಿ ಫೋನ್ ಖರೀದಿಸಬಹುದು. ಈ ರಿಯಾಯಿತಿ ಪಡೆಯಲು, ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ನೀವು ಕ್ರಿಸ್ಟಲ್ ಬ್ಲ್ಯಾಕ್, ಗೋಲ್ಡನ್ ಗ್ಲೋ ಮತ್ತು ಜ್ಯುವೆಲ್ ರೆಡ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು.

ರಿಯಲ್‌ಮಿ 14x 5G ವೈಶಿಷ್ಟ್ಯಗಳು

ರಿಯಲ್‌ಮಿ 14x 5G ಫೋನ್ 6.67 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 1604 x 720 ಪಿಕ್ಸೆಲ್‌ಗಳು ರೆಸಲ್ಯೂಶನ್‌, 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರ ಹೊಂದಿದೆ. ಈ ರಿಯಲ್‌ಮಿ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಆರ್ಮ್ ಮಾಲಿ-G57 MC2 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 8GB ಮತ್ತು 6GB RAM ಹೊಂದಿದೆ. ಇದು 10GB ಡೈನಾಮಿಕ್ RAM ಸಹ ಹೊಂದಿದೆ. ಈ ಫೋನಿನಲ್ಲಿ 128GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

Realme: ಯುವಕರ ಫೇವರಿಟ್..! ಮತ್ತೆ ಬೆಲೆ ಇಳಿಕೆ.. ಸೂಪರ್ ಫೀಚರ್ಸ್‌.. ಯಾವ ಫೋನ್?

ರಿಯಲ್‌ಮಿ 14x 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್‌ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ರಿಯಲ್‌ಮಿ 14x 5G ಫೋನ್ ಬಿಗ್ ಬ್ಯಾಟರಿ ಹೊಂದಿದೆ. ಈ ಮೊಬೈಲ್‌ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ರಿಯಲ್‌ಮಿ 14x 5G ಮೊಬೈಲ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಈ ಫೋನ್ 5G + 5G ಡ್ಯುಯಲ್ ಮೋಡ್‌ನೊಂದಿಗೆ 9 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಇದು ಸೈಡ್‌ ಮೌಂಟ್‌ ಫಿಂಗರ್‌ಫ್ರಿಂಟ್ ಸೆನ್ಸಾರ್ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.3, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳಲ್ಲಿ ಒಳಗೊಂಡಿದೆ.

Best Mobiles in India

English summary
Rs 1,500 discount on Realme 14x 5G with 8GB RAM in flipkart: check out price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+