Home
Deal of the day

iPhone: ಐಫೋನ್ 14 ಪ್ಲಸ್‌ಗೂ ಐಫೋನ್ 14 ಗೂ ಒಂದೇ ಆಫರ್ ಬೆಲೆ: ಖರೀದಿಗೆ ಯಾವುದು ಬೆಸ್ಟ್‌?

ನೀವು ಏನಾದರೂ ಐಫೋನ್ (iPhone)‌ ಖರೀದಿ ಮಾಡಲು ಮುಂದಾಗಿದ್ದರೆ ಒಂದು ಕ್ಷಣ ಅಚ್ಚರಿ ಆಗುವುದು ಪಕ್ಕಾ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಎರಡು ವೇರಿಯಂಟ್‌ ಫೋನ್‌ಗಳಿಗೆ ಒಂದೇ ಆಫರ್ ಬೆಲೆ ನಿಗದಿ ಮಾಡಲಾಗಿದೆ.

ಹೌದು, ಐಫೋನ್‌ಗಳು ಎಷ್ಟು ದುಬಾರಿಯೋ ಅಷ್ಟೇ ವಿಶೇಷ ಫೀಚರ್ಸ್‌ ಅನ್ನು ಈ ಫೋನ್‌ಗಳು ಹೊಂದಿರುತ್ತವೆ. ಅದರಲ್ಲೂ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಆಗಾಗ್ಗೆ ವಿಶೇ‍ಷ ಸೇಲ್‌ ಅನ್ನು ಸಹ ಘೋಷಣೆ ಮಾಡುತ್ತಿದ್ದು, ಈ ಮೂಲಕ ಖರೀದಿದಾರರು ಸ್ವಲ್ಪ ಮಟ್ಟಿಗೆ ಹಣ ಉಳಿತಾಯ ಮಾಡಬಹುದು. ಆದರೆ ಈಗ ಐಫೋನ್ 14 ಪ್ಲಸ್‌ಗೂ ಐಫೋನ್ 14 ಗೂ (iPhone 14 to iPhone 14 Plus) ಒಂದೇ ಆಫರ್ ಬೆಲೆ ನೀಡಲಾಗಿದ್ದು, ಖರೀದಿದಾರರು ಇದರಲ್ಲಿ ಯಾವುದನ್ನು ಖರೀದಿ ಮಾಡುವುದು ಅನ್ನೋ ಪ್ರಶ್ನೆಯಲ್ಲಿ ಮುಳುಗಬಹುದು. ಆದರೆ ಚಿಂತೆ ಬೇಡ, ಈ ಎರಡೂ ಫೋನ್‌ಗಳು ಎಷ್ಟು ಬೆಲೆ ಪಡೆದಿವೆ?, ಖರೀದಿಗೆ ಯಾವ ಫೋನ್‌ ಬೆಸ್ಟ್‌ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಫೋನ್ 14 ಪ್ಲಸ್‌ಗೂ ಐಫೋನ್ 14 ಗೂ ಒಂದೇ ಆಫರ್ ಬೆಲೆ: ಖರೀದಿಗೆ ಯಾವುದು ಬೆಸ್ಟ್‌?

ಐಫೋನ್ 14 ಪ್ಲಸ್‌ಗೂ ಐಫೋನ್ 14 ಗೂ ಒಂದೇ ಬೆಲೆ: ಮೊದಲೇ ತಿಳಿಸಿದಂತೆ ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಒಂದೇ ಬೆಲೆಗೆ ಮಾರಾಟವಾಗುತ್ತಿದೆ. ಆಶ್ಚರ್ಯ ಆದರೂ ಇದು ಸತ್ಯ. ಆದರೆ, ಇದು ದೋಷವಾಗಿರಬಹುದು ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಪ್ರಮಾಣಿತ ಆವೃತ್ತಿಯ ವೆಚ್ಚದಲ್ಲಿ ಹೆಚ್ಚಿನ ಬೆಲೆಯ ಪ್ಲಸ್ ಮಾದರಿಯನ್ನು ನೀಡುವ ಮೂಲಕ ಐಫೋನ್ ಅಭಿಮಾನಿಗಳನ್ನು ಪರೀಕ್ಷಿಸುವ ಕೆಲಸವೂ ಆಗಿರಬಹುದು.

ಅಂದರೆ ಈ ಎರಡು ಫೋನ್‌ಗಳು 60,000 ರೂ.ಗಳ ಅಡಿಯಲ್ಲಿ ಪಟ್ಟಿಮಾಡಲಾಗಿದೆ. ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ ಅನ್ನು ಪ್ರಸ್ತುತ 128GB ಸ್ಟೋರೇಜ್ ವೇರಿಯಂಟ್ ಗೆ 58,999 ರೂಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದ್ದು, ಮಾರಾಟದ ಈವೆಂಟ್‌ಗಳ ಸಮಯದಲ್ಲಿ ಆ ಐಫೋನ್‌ಗಳು ಈ ಹಿಂದೆ ಲಭ್ಯವಿದ್ದಷ್ಟು ಕಡಿಮೆ ಬೆಲೆಗೆ ಇಲ್ಲದಿದ್ದರೂ, ನಾವು ಆಪಲ್ ಸ್ಟೋರ್‌ಗಳೊಂದಿಗೆ ಬೆಲೆಗಳನ್ನು ಹೋಲಿಕೆ ಮಾಡಿದರೆ ಫ್ಲಿಪ್‌ಕಾರ್ಟ್ ದೊಡ್ಡ ರಿಯಾಯಿತಿಯನ್ನೇ ನೀಡುತ್ತಿದೆ ಎಂದು ಹೇಳಬಹುದು.

ಐಫೋನ್ 14 ಪ್ಲಸ್‌ಗೂ ಐಫೋನ್ 14 ಗೂ ಒಂದೇ ಆಫರ್ ಬೆಲೆ: ಖರೀದಿಗೆ ಯಾವುದು ಬೆಸ್ಟ್‌?

ಐಫೋನ್ 14 ಸಾಮಾನ್ಯ ಬೆಲೆ 69,900 ರೂ.ಗಳಾಗಿದ್ದು, ಐಫೋನ್ 14 ಪ್ಲಸ್ ಬೆಲೆ 79,900 ರೂ. ಗಳಾಗಿದೆ. ಆದರೆ, ಗ್ರಾಹಕರು ಸ್ಟ್ಯಾಂಡರ್ಡ್ ಮಾಡೆಲ್‌ನಲ್ಲಿ 10,901 ಮತ್ತು ಪ್ಲಸ್ ವೇರಿಯಂಟ್‌ನಲ್ಲಿ 20,901 ರೂ.ಗಳ ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಕೊಡುಗೆಯು ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದು ತಿಳಿದಿಲ್ಲ, ಆದರೆ ಇವುಗಳಲ್ಲಿ ಯಾವುದನ್ನಾದರೂ ಖರೀದಿಸಲು ಆಸಕ್ತಿ ಹೊಂದಿದ್ದರೆ ಸಮಯವನ್ನು ವ್ಯರ್ಥ ಮಾಡಬೇಡಿ.

ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ನಲ್ಲಿ ಖರೀದಿಗೆ ಯಾವುದು ಉತ್ತಮ?: ಎರಡೂ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಸುಗಮ ಕಾರ್ಯಕ್ಷಮತೆಯನ್ನು ನೀಡಲು ಸಮಾನವಾಗಿ ಸಮರ್ಥವಾಗಿವೆ. ಸಾಕಷ್ಟು ಉತ್ತಮ ಆಲ್-ರೌಂಡರ್ ಕಾರ್ಯಕ್ಷಮತೆಗಾಗಿ ಇವುಗಳಲ್ಲಿ ಯಾವುದನ್ನಾದರೂ ಖರೀದಿಸಲು ಪರಿಗಣಿಸಬಹುದು. ಎರಡೂ ಐಫೋನ್ 14 ಸರಣಿಯ ಫೋನ್‌ಗಳು ಒಂದೇ ಫೀಚರ್ಸ್‌ನೊಂದಿಗೆ ಬರುತ್ತವೆ ಮತ್ತು ಪ್ರಮುಖ ವ್ಯತ್ಯಾಸವೆಂದರೆ ಬ್ಯಾಟರಿ ಮತ್ತು ಡಿಸ್‌ಪ್ಲೇ ಗಾತ್ರ.

ಐಫೋನ್ 14 ಪ್ಲಸ್‌ಗೂ ಐಫೋನ್ 14 ಗೂ ಒಂದೇ ಆಫರ್ ಬೆಲೆ: ಖರೀದಿಗೆ ಯಾವುದು ಬೆಸ್ಟ್‌?

ಪ್ಲಸ್ ಮಾದರಿಯು 6.7 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿದ್ದರೆ, ಐಫೋನ್‌ 14 ಫೋನ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಸಾಮಾನ್ಯ ವೇರಿಯಂಟ್‌ 20 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್‌ ಟೈಮ್‌ ನೀಡಿದ್ರೆ ಪ್ಲಸ್ ವೇರಿಯಂಟ್‌ ಸುಮಾರು 26 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಸಮಯ ನೀಡಲಿದೆ ಎಂದು ಆಪಲ್ ಹೇಳುತ್ತದೆ. ನೈಜ ಜಗತ್ತಿನಲ್ಲಿ, ಪ್ಲಸ್ ಮಾದರಿಯು ಪ್ರಮಾಣಿತ ಆವೃತ್ತಿಗೆ ಹೋಲಿಸಿದರೆ ಹೆಚ್ಚು ದೀರ್ಘವಾದ ಬ್ಯಾಟರಿ ಬ್ಯಾಕಪ್‌ ಅನ್ನು ನೀಡುತ್ತಿದೆ. ಇನ್ನು A15 ಬಯೋನಿಕ್ ಚಿಪ್, ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ರಚನೆ ಮತ್ತು ಇನ್ನೂ ಹೆಚ್ಚಿನ ಫೀಚರ್ಸ್‌ ಅನ್ನು ಈ ಫೋನ್‌ಗಳಲ್ಲಿ ಕಾಣಬಹುದಾಗಿದೆ. ನಿಮ್ಮ ಆದ್ಯತೆಯ ಆಧಾರದ ಮೇಲೆ ನೀವು ಈ ಡಿವೈಸ್‌ಗಳಲ್ಲಿ ಯಾವುದನ್ನಾದರೂ ಖರೀದಿಸಬಹುದು.

Best Mobiles in India

English summary
The major e-commerce Flipkart has given the same offer price for iPhone 14 Plus and iPhone 14 Plus, and buyers may be confused as to which one to buy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+