WOW: ಜಸ್ಟ್ 7,770 ರೂ.! ಎರಡೇ ತಿಂಗಳಲ್ಲಿ ಭಾರೀ ಬೆಲೆ ಇಳಿಕೆ.. ಜಬರ್ದಸ್ತ್ ಫೀಚರ್ಸ್.. ಯಾವ ಫೋನ್?
ನೋಡಿ ಫ್ರೆಂಡ್ಸ್..! ಎಂತಾ ಸುವರ್ಣಾವಕಾಶ.. 7770 ರೂ.ಗೆ 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿರುವ 5G ಫೋನ್! ಹೌದು, ಹೊಸ ಸ್ಯಾಮ್‌ಸಂಗ್ ಫೋನ್ ಖರೀದಿಸುವವರಿಗೆ ಇದು ಅದ್ಭುತ ಅವಕಾಶವೇ ಸರಿ. ಸ್ಯಾಮ್‌ಸಂಗ್ ಫೆಬ್ರವರಿ ತಿಂಗಳಲ್ಲಿ ತನ್ನ ಕಡಿಮೆ ಬಜೆಟ್ ಮೊಬೈಲ್ ಸ್ಯಾಮ್‌ಸಂಗ್ ಗ್ಯಾಲಕ್ಸಿ F06 (Samsung Galaxy F06 5G) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಪ್ರಸ್ತುತು, ತನ್ನ ಅಭಿಮಾನಿಗಳಿಗೆ ಉಡುಗೊರೆ ನೀಡುತ್ತಿರುವ ಕಂಪನಿಯು, ಈ ಫೋನನ್ನು ಕೇವಲ 7,999 ರೂ.ಗಳ ಆರಂಭಿಕ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು ಈ ಅಗ್ಗದ 5G ಫೋನನ್ನು 8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಫೋನ್ 4GB ಮತ್ತು 6GB RAM ನಲ್ಲಿ ಲಭ್ಯವಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 6.74 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 5000mAh ಬ್ಯಾಟರಿ ಮತ್ತು 25W ಚಾರ್ಜಿಂಗ್, 128GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ಬೆಲೆ ಭಾರೀ ಇಳಿಕೆಯಾಗಿದೆ. ಹೊಸ ದರ ಮತ್ತು ಆಫರ್ ತಿಳಿಯಲು ಮುಂದೆ ಓದಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಬೆಲೆ
4GB RAM + 64GB ಸ್ಟೋರೇಜ್ = 10,499 ರೂ.
ರಿಯಾಯಿತಿ ಬೆಲೆ = 7,770 ರೂ.
4GB RAM + 128GB ಸ್ಟೋರೇಜ್ = 11,499 ರೂ.
ರಿಯಾಯಿತಿ ಬೆಲೆ = 8,270 ರೂ.
6GB RAM + 128GB ಸ್ಟೋರೇಜ್ = 12,999 ರೂ.
ರಿಯಾಯಿತಿ ಬೆಲೆ = 9,570 ರೂ.
ಅಗ್ಗದ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಮೊಬೈಲ್ ಖರೀದಿಸಲು, ನೀವು ಫ್ಲಿಪ್‌ಕಾರ್ಟ್‌ಗೆ ಭೇಟಿ ನೀಡಬೇಕು. ಈ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋನನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಅಗ್ಗದ ಫೋನ್ ಬಹಾಮಾ ನೀಲಿ ಮತ್ತು ಲಿಟ್ ವೈಲೆಟ್ ಬಣ್ಣದಲ್ಲಿ ಬರುತ್ತದೆ. ಈ ಮೊಬೈಲ್‌ನ ಮೂಲ ರೂಪಾಂತರದ ಬೆಲೆ 7,999 ರೂ. ಮತ್ತು 128GB ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 8,499 ರೂ. ಅದೇ ರೀತಿ, 6GB RAM ಹೊಂದಿರುವ ಫೋನಿನ ಬೆಲೆ 9,799 ರೂ.ಗೆ ಲಭ್ಯವಿದೆ.
ವಿಷಯವೆಂದರೆ, ಫ್ಲಿಪ್‌ಕಾರ್ಟ್‌ನಲ್ಲಿ ಈ ಮೊಬೈಲ್ ಖರೀದಿ ಮೇಲೆ 229 ರೂ.ಗಳ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಫೋನಿನ ಎಲ್ಲಾ ರೂಪಾಂತರಗಳ ಮೇಲೆ ಈ ರಿಯಾಯಿತಿಯು ಲಭ್ಯವಿದೆ. ಒಟ್ಟಾರೆ, ಡಿಸ್ಕೌಂಟ್ ಬಳಿಕ ಈ ಫೋನ್ ಕೇವಲ 7,770 ರೂ.ಗೆ ಲಭ್ಯವಿರುತ್ತದೆ. ಇನ್ನು 4GB + 128GB ಮಾದರಿಯನ್ನು ಕೇವಲ 8,270 ರೂ.ಗೆ ಖರೀದಿಸಬಹುದು. 6GB ಮೊಬೈಲ್ ರಿಯಾಯಿತಿಯೊಂದಿಗೆ 9,570 ರೂ.ಗೆ ಮಾರಾಟವಾಗುತ್ತಿದೆ. ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ, ಈ ಫೋನನ್ನು 11,499 ರೂ. ಮತ್ತು 12,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅಗ್ಗದ ದರದಲ್ಲಿ ಈ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಮೊಬೈಲ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ಅನ್‌ಲಾಕ್ ಮತ್ತು ಭದ್ರತೆಗಾಗಿ ಸೈಡ್ ಫ್ರೇಮ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಓಎಸ್ ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್ 4GB ಮತ್ತು 6GB RAM ಹೊಂದಿದೆ. ಇದರೊಂದಿಗೆ 128GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F06 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಒದಗಿಸಲಾಗುವುದು.


Click it and Unblock the Notifications








