Home
Deal of the day

ಕೇವಲ 9199 ರೂ.! ಒಂದೇ ತಿಂಗಳಲ್ಲಿ ಬೆಲೆ ಇಳಿಕೆ.. 50MP ಕ್ಯಾಮೆರಾ, 5000mAh ಬ್ಯಾಟರಿ.. ಯಾವ ಫೋನ್?

ಸ್ಯಾಮ್‌ಸಂಗ್ ಕಳೆದ ತಿಂಗಳು ಭಾರತದಲ್ಲಿ ಎರಡೂ ಹೊಸ 5G ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G (Samsung Galaxy M06 5G) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G (Samsung Galaxy M16 5G) ಸ್ಮಾರ್ಟ್‌ಫೋನ್‌ಗಳು. ಈ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಮೊಬೈಲ್ ಮಾರ್ಚ್ 7 ರಿಂದ ಮೊದಲ ಮಾರಾಟ ಪ್ರಾರಂಭಿಸಿತ್ತು. ಇದೀಗ, ಕಂಪನಿಯು ಈ 5G ಫೋನಿನ ಬೆಲೆಯನ್ನು ಒಂದು ತಿಂಗಳೊಳಗೆ ಕಡಿಮೆ ಮಾಡಿದೆ. ನೀವು ಕೇವಲ 9,199 ರೂ.ಗೆ ಮೊಬೈಲ್ ಖರೀದಿಸಬಹುದು. ಅದು ಹೇಗೆ ಅಂತ ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ನೀವು ಸೇಜ್ ಗ್ರೀನ್ ಮತ್ತು ಬ್ಲೇಜಿಂಗ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 6GB RAM + 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ ಮತ್ತು ಆಫರ್ ತಿಳಿಯಲು ಮುಂದೆ ಓದಿ.

ಜಸ್ಟ್ 9199 ರೂ.! ಒಂದೇ ತಿಂಗಳಲ್ಲಿ ಬೆಲೆ ಇಳಿಕೆ.. ಯಾವ ಫೋನ್? ವಿಶೇಷತೆಗಳೇನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಸ್ಮಾರ್ಟ್‌ಫೋನ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ದರ, 800 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಒನ್ ಯುಐ 7.0 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 4 ಆಂಡ್ರಾಯ್ಡ್ ಓಎಸ್ ನವೀಕರಣಗಳನ್ನು ಹಾಗೂ 4 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.

Take a Poll

ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ ಬರುತ್ತದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಸ್ಯಾಮ್‌ಸಂಗ್ 5G ಫೋನ್ 4GB ಮತ್ತು 6GB RAM ಹೊಂದಿದೆ. ಇದು ವಿಸ್ತೃತ RAM ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ 128GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೊನಿನಲ್ಲಿ 25W ವೇಗದ ಚಾರ್ಜಿಂಗ್ ತಂತ್ರಜ್ಞಾನ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 12 5G ಬ್ಯಾಂಡ್‌ಗಳನ್ನು ಹೊಂದಿದೆ. ಇದು ಉತ್ತಮ 5G ನೆಟ್‌ವರ್ಕ್ ಮತ್ತು ವೇಗದ ಇಂಟರ್ನೆಟ್ ಒದಗಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಆಫರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G ಫೋನಿನ 4GB RAM + 128GB ಸ್ಟೋರೇಜ್ ಬೆಲೆ 9,999 ರೂ. ಆಗಿದೆ. 6GB RAM + 128GB ಸ್ಟೋರೇಜ್ ರೂಪಾಂತರನ್ನು 11,499 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಅಮೆಜಾನ್ 4GB RAM ಅನ್ನು 9,199 ರೂ.ಗೆ ಮಾರಾಟ ಮಾಡುತ್ತಿದೆ. ಯಾವುದೇ ಕೂಪನ್ ಅಥವಾ ಬ್ಯಾಂಕ್ ಕಾರ್ಡ್ ಇಲ್ಲದೆ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಮೇಲೆ 800 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವು 10,699 ರೂ.ಗೆ ಮಾರಾಟವಾಗುತ್ತಿದೆ. ಎಲ್ಲಾ ಗ್ರಾಹಕರು ಈ ರಿಯಾಯಿತಿಯ ಪ್ರಯೋಜನವನ್ನು ಪಡೆಯಬಹುದು.

Best Mobiles in India

English summary
Samsung Galaxy M06 5G available under Rs 10000 with discount on Flipkart: check price, offers, specification and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+