Home
ಸುದ್ದಿಜಾಲ

Samsung: 2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಸರಣಿ ಲಾಂಚ್‌! ಬೆಲೆ ಎಷ್ಟು?

ಸ್ಯಾಮ್‌ಸಂಗ್‌ (Samsung) ತನ್ನ ಗ್ಯಾಲಕ್ಸಿ ಫೋನ್‌ಗಳ ಜೊತೆಗೆ ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ಟಿವಿಗಳನ್ನೂ ಸಹ ಅನಾವರಣ ಮಾಡುತ್ತಿರುತ್ತದೆ. ಅದರಂತೆ ಈಗ 2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಸರಣಿ (2024 Samsung Crystal 4K TV Series) ಲಾಂಚ್‌ ಮಾಡಲಾಗಿದೆ.

ಹೌದು, 2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಸರಣಿಯನ್ನು ಅನಾವರಣ ಮಾಡಲಾಗಿದ್ದು, ಅಪ್‌ಸ್ಕೇಲಿಂಗ್, 3D ಸರೌಂಡ್ ಸೌಂಡ್ ಜೊತೆಗೆ ಆಟೋ ಗೇಮ್ ಮೋಡ್ ಮತ್ತು ಮೋಷನ್ ಎಕ್ಸ್‌ಸೆಲೇಟರ್‌ನಂತಹ ಗೇಮಿಂಗ್ ಫೀಚರ್ಸ್‌ ಅನ್ನು ಈ ಟಿವಿಗಳು ಪಡೆದಿವೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಗಳ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಓದಿರಿ.

2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಸರಣಿ ಲಾಂಚ್‌! ಬೆಲೆ ಎಷ್ಟು?

2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ: ಸ್ಯಾಮ್‌ಸಂಗ್ 2024 ರ ಕ್ರಿಸ್ಟಲ್ 4K ಟಿವಿಗಳ ಸರಣಿಯನ್ನು ಭಾರತದಲ್ಲಿ ಅನಾವರಣ ಮಾಡಿದ್ದು, ಈ ವಿಭಾಗದಲ್ಲಿ ಕ್ರಿಸ್ಟಲ್ 4K ವಿವಿಡ್, ಕ್ರಿಸ್ಟಲ್ 4K ವಿಷನ್ ಪ್ರೊ ಮತ್ತು ಕ್ರಿಸ್ಟಲ್ 4K ವಿವಿಡ್ ಪ್ರೊ (Crystal 4K Vivid, Crystal 4K Vision Pro and Crystal 4K Vivid Pro smart tv) ಟಿವಿಗಳನ್ನು ಕಾಣಬಹುದಾಗಿದೆ. ಇದರ ಜೊತೆಗೆ ಈ ಟಿವಿಗಳು 43-ಇಂಚಿನಿಂದ 75-ಇಂಚಿನವರೆಗಿನ ಡಿಸ್‌ಪ್ಲೇ ಗಾತ್ರಗಳಲ್ಲಿ ಬರುತ್ತವೆ.

2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಫೀಚರ್ಸ್‌: ಈ ಸ್ಯಾಮ್‌ಸಂಗ್ ಟಿವಿಗಳನ್ನು 43 ಇಂಚಿನ, 50 ಇಂಚಿನ, 55 ಇಂಚಿನ, 65 ಇಂಚಿನ ಮತ್ತು 75 ಇಂಚಿನ ವೇರಿಯಂಟ್‌ಗಳಲ್ಲಿ ಆಯ್ಕೆಮಾಡಬಹುದಾಗಿದೆ. ಇದರ ಜೊತೆಗೆ ಪ್ಯೂರ್‌ ಕಲರ್ (1 ಬಿಲಿಯನ್ ಬಣ್ಣಗಳಿಗೆ ಬೆಂಬಲ) ಮತ್ತು ಹೆಚ್‌ಡಿಆರ್10+ ಪ್ಲೇಬ್ಯಾಕ್‌ನೊಂದಿಗೆ ಅಲ್ಟ್ರಾ ಹೆಚ್‌ಡಿ ಪ್ಯಾನೆಲ್‌ಗಳನ್ನು ಪಡೆದುಕೊಂಡಿವೆ. ಜೊತೆಗೆ ಟಿವಿಗಳು ಎಸ್‌ಡಿ ಕಂಟೆಂಟ್‌ಗಾಗಿ 4K ಅಪ್‌ಸ್ಕೇಲಿಂಗ್ ಅನ್ನು ಸಹ ಒಳಗೊಂಡಿವೆ.

2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಸರಣಿ ಲಾಂಚ್‌! ಬೆಲೆ ಎಷ್ಟು?

ಕ್ರಿಸ್ಟಲ್ ಪ್ರೊಸೆಸರ್ 4K ಪ್ರೊಸೆಸರ್ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಈ ಚಿಪ್ 16-ಬಿಟ್ 3D ಕಲರ್ ಮ್ಯಾಪಿಂಗ್ ಅಲ್ಗಾರಿದಮ್‌ನಿಂದ ಕೆಲಸ ಮಾಡಲಿದೆ. ಇದರ ಜೊತೆಗೆ ಈ ಟಿವಿಗಳ ಡಿಸ್‌ಪ್ಲೇ ಮೇಲಿನ ವಸ್ತುಗಳನ್ನು ಟ್ರ್ಯಾಕ್ ಮಾಡಲು ಮತ್ತು ಆನ್-ಸ್ಕ್ರೀನ್ ಚಲನೆಗಳಿಗೆ ಸೌಂಡ್‌ ಅನ್ನು ಹೊಂದಿಸಲು ಸಮರ್ಥವಾಗಿದೆ. ಇದನ್ನ ಓಟಿಎಸ್‌ ಲೈಟ್ ಎಂದು ಕರೆಯಲಾಗುತ್ತದೆ. ಹಾಗೆಯೇ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ಜೊತೆಗೆ, ಇವು 3D ಸರೌಂಡ್ ಸೌಂಡ್ ಅನುಭವವನ್ನು ನೀಡಲಿವೆ.

ಇದರೊಂದಿಗೆ ಕ್ಯೂ-ಸಿಂಫನಿ ಫೀಚರ್ಸ್‌ ಆಯ್ಕೆ ಪಡೆದಿದ್ದು, ಈ ಫೀಚರ್ಸ್‌ ಕ್ರಿಸ್ಟಲ್ 4K ಲೈನ್‌ಅಪ್‌ಗೆ ಪ್ರತ್ಯೇಕವಾಗಿದೆ ಮತ್ತು ಇದು ದೊಡ್ಡ ಸೌಂಡ್‌ಸ್ಟೇಜ್‌ಗಾಗಿ ಸೌಂಡ್‌ಬಾರ್ ಅಥವಾ ಬಾಹ್ಯ ಸ್ಪೀಕರ್‌ಗಳೊಂದಿಗೆ ಟಿವಿ ಸ್ಪೀಕರ್‌ಗಳನ್ನು ಸಿಂಕ್ ಮಾಡುವ ಕೆಲಸ ಮಾಡುತ್ತದೆ. ಇದರ ಜೊತೆಗೆ ವಿಶೇಷವಾದ ಗೇಮಿಂಗ್‌ ಫೀಚರ್ಸ್‌ ಅನ್ನೂ ಸಹ ನೋಡಬಹುದಾಗಿದೆ. ಸುಗಮವಾದ ವಿಳಂಬ-ಮುಕ್ತ ಅನುಭವಕ್ಕಾಗಿ ನೀವು ಆಟೋ ಗೇಮ್ ಮೋಡ್ ಮತ್ತು ಮೋಷನ್ ಎಕ್ಸ್‌ಸೆಲೇಟರ್ ಆಯ್ಕೆಯನ್ನು ಪಡೆಯಬಹುದಾಗಿದೆ.

ಭಾರತದಲ್ಲಿ ಈ ಸ್ಮಾರ್ಟ್‌ಟಿವಿಗಳ ಬೆಲೆ ಹಾಗೂ ಲಭ್ಯತೆ: ಸ್ಯಾಮ್‌ಸಂಗ್ ಕ್ರಿಸ್ಟಲ್ 4K ವಿವಿಡ್‌ಗೆ 32,990 ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಕ್ರಿಸ್ಟಲ್ 4K ವಿಷನ್ ಪ್ರೊ ಮೂಲ ವೇರಿಯಂಟ್‌ಗೆ 34,490 ರೂ.ಗಳ ಬೆಲೆ ಇದೆ. ಹಾಗೆಯೇ ಕ್ರಿಸ್ಟಲ್ 4K ವಿವಿಡ್ ಪ್ರೊ ನ ಮೂಲ ವೇರಿಯಂಟ್‌ಗೆ 35,990 ರೂ.ಗಳ ಆರಂಭಿಕ ಬೆಲೆಯನ್ನು ನಿಗದಿ ಮಾಡಲಾಗಿದ್ದು, ಈ ಸ್ಮಾರ್ಟ್‌ಟಿವಿಗಳನ್ನು ಅಮೆಜಾನ್‌ ಹಾಗೂ ಸ್ಯಾಮ್‌ಸಂಗ್‌ನ ಅಧಿಕೃತ ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ ಅಲ್ಲದೆ ಕೆಲವು ಮಾದರಿಗಳು ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಸಹ ಲಭ್ಯ ಇವೆ.

2024 ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಟಿವಿ ಸರಣಿ ಲಾಂಚ್‌! ಬೆಲೆ ಎಷ್ಟು?

ಈ ಸ್ಮಾರ್ಟ್‌ಟಿವಿ ಖರೀದಿ ಮೇಲೆ ಬ್ಯಾಂಕ್‌ ಆಫರ್ ಅನ್ನೂ ಸಹ ಪಡೆಯಬಹುದಾಗಿದೆ. ಅಂದರೆ ಕ್ಯಾಶ್‌ಬ್ಯಾಕ್ ಆಫರ್‌ಗಳು ಮತ್ತು 18 ತಿಂಗಳವರೆಗೆ ನೋ-ಕಾಸ್ಟ್ ಇಎಮ್‌ಐ ಆಯ್ಕೆ ಇದ್ದು, ಈ ಎಲ್ಲಾ ಟಿವಿಗಳಲ್ಲಿ 2 ವರ್ಷದ ವಾರಂಟಿಯನ್ನು ನೀಡಲಾಗುತ್ತಿದೆ. ಪ್ಯಾನೆಲ್‌ನಲ್ಲಿ 1 ವರ್ಷದ ಪ್ರಮಾಣಿತ ಕವರೇಜ್ ಜೊತೆಗೆ 1 ವರ್ಷದ ವಿಸ್ತೃತ ವಾರಂಟಿಯನ್ನು ಯನ್ನು ಪಡೆಯಬಹುದಾಗಿದೆ.

Best Mobiles in India

English summary
2024 Samsung Crystal 4K TV series has been unveiled and these TVs get gaming features like upscaling, 3D surround sound along with auto game mode and motion accelerator.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+