Samsung ಸಂಸ್ಥೆಯ ಈ 5G ಫೋನ್ ಈಗ ಕಡಿಮೆ ಬೆಲೆಯಲ್ಲಿ ಲಭ್ಯ!..ಏನಿದು ಆಫರ್?
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ (Samsung) ಸಂಸ್ಥೆಯ ಗ್ಯಾಲಕ್ಸಿ ಸರಣಿಯ ಹಲವು ಫೋನ್‌ಗಳು ಭಾರೀ ಡಿಮ್ಯಾಂಡ್ ಪಡೆದಿದ್ದು, ಅದರಲ್ಲಿಯೂ ಕೆಲವು ಬಜೆಟ್ ದರದ ಮಾಡೆಲ್‌ಗಳಂತೂ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಠಿಸಿವೆ. ಆ ಪೈಕಿ ಸ್ಯಾಮ್‌ಸಂಗ್ ಕಂಪನಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಪ್ರೈಮ್ ಎಡಿಷನ್ (Samsung Galaxy M15 5G Prime Edition) ಮೊಬೈಲ್ ಸಹ ಒಂದು. ಸದ್ಯ ಈ ಮೊಬೈಲ್ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಗಮನಾರ್ಹ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ.
ಹೌದು, ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ತಾಣದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಪ್ರೈಮ್ ಎಡಿಷನ್ (Samsung Galaxy M15 5G Prime Edition) ಸ್ಮಾರ್ಟ್‌ಫೋನ್ ಶೇ. 12% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 6GB RAM + 128GB ವೇರಿಯಂಟ್ 14,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಆಫರ್ ಸಹ ಪಡೆದುಕೊಂಡರೆ, ಗ್ರಾಹಕರು ಇನ್ನಷ್ಟು ರಿಯಾಯಿತಿ ಪಡೆಯಲು ಅವಕಾಶ ಇದೆ.

ಅಂದಹಾಗೆ ಈ ಫೋನ್ ಬ್ಲೂ ಟೋಪಾಜ್, ಸೆಲೆಸ್ಟಿಯಲ್ ಬ್ಲೂ ಮತ್ತು ಸ್ಟೋನ್ ಗ್ರೇ ಬಣ್ಣಗಳ ಆಯ್ಕೆಗಳನ್ನು ಪಡೆದಿದ್ದು, ಇದರ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನಿನ ಬ್ಯಾಟರಿಯು 6000 mAh ಸಾಮರ್ಥ್ಯದಲ್ಲಿ ಇರುವುದು ಪ್ಲಸ್ ಪಾಯಿಂಟ್ ಆಗಿ ಗುರುತಿಸಿಕೊಂಡಿದೆ. ಅಮೆಜಾನ್ ತಾಣದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಪ್ರೈಮ್ ಎಡಿಷನ್ ಅನ್ನು ಆಫರ್‌ನಲ್ಲಿ ಖರೀದಿಸಿ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ವಿನ್ಯಾಸ
ಸ್ಯಾಮ್‌ಸಂಗ್‌ನ ಈ ಮೊಬೈಲ್ 6.5 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1080 × 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಪಡೆದಿದ್ದು, ಜೊತೆಗೆ 1000 nits ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ಒಳಗೊಂಡಿದೆ.
ಪ್ರೊಸೆಸರ್ ಪವರ್
ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪವರ್ ಅನ್ನು ಪಡೆದಿದ್ದು, ಇದರ ಜೊತೆಗೆ ಆಂಡ್ರಾಯ್ಡ್ 14 ಸಓಎಸ್ ಸಪೋರ್ಟ್ ಇದೆ. ಇನ್ನು ಈ ಫೋನ್ 4GB RAM + 128GB ಹಾಗೂ 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 1 TB ವರೆಗೂ ವಿಸ್ತರಿಸುವ ಆಯ್ಕೆ ಪಡೆದಿದೆ.
ಕ್ಯಾಮೆರಾ ಸೆನ್ಸಾರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಪ್ರೈಮ್ ಎಡಿಷನ್ ಫೋನ್ ಹಿಂಭಾಗದಲ್ಲಿ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ದ್ವಿತೀಯ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಹಾಗೂ ಮೂರನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಇನ್ನು ಇದರ ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ.
ಬ್ಯಾಟರಿ ಬ್ಯಾಕ್‌ಅಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G ಮೊಬೈಲ್ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಸಹ ಪಡೆದಿದ್ದು, ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಈ ಫೋನಿನಲ್ಲಿ ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್ ಆಯ್ಕೆಗಳ ಜೊತೆಗೆ ಬ್ಲೂಟೂತ್ 5.2, ಎನ್‌ಎಫ್‌ಸಿ ಆಯ್ಕೆಗಳು ಹಾಗೂ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಆಯ್ಕೆ ಸಹ ಇವೆ.


Click it and Unblock the Notifications








